ಕೆ.ಟಿ.ಪಿ.ಎಲ್ 12 ನೇ ಪಂದ್ಯದಲ್ಲಿ ಕ್ರಿಶಾ ಇಲೆವೆನ್ ಕುಂದಾಪುರ,ಸ್ನೇಹಜೀವಿ ಮೈಸೂರು ವಿರುದ್ಧ 25 ರನ್ ಅಂತರದ ಜಯ ಗಳಿಸಿದೆ.

ಕ್ರಿಶಾ ಇಲೆವೆನ್ ಆರಂಭಿಕ ಆಟಗಾರರಾದ ಮುರಳಿ 3 ಭರ್ಜರಿ ಸಿಕ್ಸರ್ ಸಹಿತ 24 ರನ್ ಸಿಡಿಸಿದರೆ, ಶಶಿ 13,
ಸುಜಿತ್ 11 ರನ್ ಗಳಿಸಿ ನಿಗದಿತ 8 ಓವರ್ ಗಳಲ್ಲಿ ಎದುರಾಳಿಗಳಿಗೆ 67 ರನ್ ಗಳ ಲಕ್ಷ್ಯ ನೀಡಿತ್ತು.
ಸ್ನೇಹಜೀವಿ ಮೈಸೂರಿನ ಪರವಾಗಿ ಪ್ರದೀಪ್ ಬಿರುಸಿನ 17 ರನ್ ಗಳಿಸಿದರು ಅಂತಿಮವಾಗಿ 41 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುರಳಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.