ಪುತ್ತೂರಿನ ಸಾಮೆತ್ತಡ್ಕ ಯುವಕ ಮಂಡಲ(ರಿ) ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ,ದಿ.ಸುನಿಲ್ ಮಸ್ಕರೇನಸ್ ಹಾಗೂ ದಿ.ವಿಕ್ರಮ್ ಭಟ್ ಸ್ಮರಣಾರ್ಥ ಮಾರ್ಚ್ 19,20 ಮತ್ತು 21ರಂದು ಹೊನಲು ಬೆಳಕಿನ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್ ಗಳ ಕ್ರಿಕೆಟ್ ಪಂದ್ಯಾಕೂಟ “ಸಿಝ್ಲರ್ ಟ್ರೋಫಿ-2021″ಆಯೋಜಿಸಲಾಗಿದೆ.
ಪುತ್ತೂರಿನ ದರ್ಬೆಯ ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದ್ದು,ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದ್ದು,ಸರಣಿಶ್ರೇಷ್ಟ ಗೌರವಕ್ಕೆ ಪಾತ್ರನಾದ ಆಟಗಾರ ದ್ವಿಚಕ್ರ ವಾಹನವನ್ನು ಪಡೆಯಲಿದ್ದಾರೆ.ಈ ಪಂದ್ಯಾಕೂಟದ ವಿಶೇಷ ಆಕರ್ಷಣೆ ಎಂಬಂತೆ ಚಲನಚಿತ್ರ ನಟ ನಟಿಯರು,ಕ್ರಿಕೆಟ್ ತಾರೆಯರು ಆಗಮಿಸಲಿದ್ದಾರೆ.
M9 ಸ್ಪೋರ್ಟ್ಸ್ ನೇರ ಪ್ರಸಾರವನ್ನು ಬಿತ್ತರಿಸಿದರೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.