ಫ್ರೆಂಡ್ಸ್ ಮಂಗಳೂರು ಬಹ್ರೇನ್ ಇವರ ಆಶ್ರಯದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಪ್ರಯುಕ್ತ ಸಲಾಮಾಬಾದ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ನಡೆದ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ “ನ್ಯೂ ಇಯರ್ ಟ್ರೋಫಿ”ಯನ್ನು zinj ಫ್ರೆಂಡ್ಸ್ ಬಹ್ರೇನ್ ಜಯಿಸಿದೆ.
ನಾಕೌಟ್ ಮಾದರಿಯಲ್ಲಿ ನಡೆದ ಪಂದ್ಯಾಟದ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ
ಸೀ ಗಯ್ಸ್ ತಂಡ 25 ರನ್ ಗಳಿಸಿತ್ತು.
ಸುಲಭ ಸವಾಲನ್ನು ಬೆನ್ನತ್ತಿದ Zinj ಫ್ರೆಂಡ್ಸ್ ಬಹ್ರೇನ್ ನ ಆಟಗಾರರು ಅನಾಯಾಸವಾಗಿ ಗುರಿಯನ್ನು ತಲುಪಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪ್ರಥಮ್ ಪ್ರಶಸ್ತಿ ವಿಜೇತ Zinj ಬಹ್ರೇನ್,222 ಯು.ಎಸ್.ಡಾಲರ್,ದ್ವಿತೀಯ ಸ್ಥಾನಿ
ಸೀ ಗಯ್ಸ್ 111 ಯು.ಎಸ್.ಡಾಲರ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಸುನಿಲ್ ಬೆಸ್ಟ್ ಬೌಲರ್,ಅರುಣ್ ಶೆಟ್ಟಿ ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ವಿಲಿಯಮ್ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದರು.
ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮವನ್ನು
Exelon Industrial Solutions ನ ಆಡಳಿತ ನಿರ್ದೇಶಕರು ಹಾಗೂ ಬಹ್ರೇನ್ ನ ಕ್ರೀಡಾ ಪ್ರೋತ್ಸಾಹಕರಾದ ಮೊಹಮ್ಮದ್ ಮನ್ಸೂರ್,ಅಜೀಜ್ ಬ್ಯಾರಿ,ಅಶ್ರಫ್ ಬ್ಯಾರಿ ನೆರವೇರಿಸಿದರು.
ಅನ್ವರ್ ಕೈಕಂಬ,ಜಲೀಲ್ ಪಿಲಿಕೂರ್,ಆಸಿಫ್ ಜೋಕಟ್ಟೆ,ಸಿದ್ಧಿಕ್ ಕೆ.ಸಿ ರೋಡ್,
ಶಾಹುಲ್ ಹಮೀದ್ ಮೂಲ್ಕಿ,ಶಾಫಿ ವಿಟ್ಲ ಉಪಸ್ಥಿತರಿದ್ದು,ಸರ್ಫರಾಜ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು…