ಯುನೈಟೆಡ್ ಸ್ಟಾರ್ಸ್ ಕಾರ್ನಾಡು ಇವರ ಆಶ್ರಯದಲ್ಲಿ ಕಾರ್ನಾಡು ಗಾಂಧಿ ಮೈದಾನದಲ್ಲಿ ಇಂದಿನಿಂದ ಜನವರಿ 9,10 ಎರಡು ದಿನಗಳ ಕಾಲ,ನಿಗದಿತ 23 ವರ್ಷದೊಳಗಿನ ಹಾಗೂ ಮುಲ್ಕಿ ಮತ್ತು ಹಳೆಯಂಗಡಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯುನೈಟೆಡ್ ಟ್ರೋಫಿ-2021 ನಡೆಯಲಿದೆ.
9 ಶನಿವಾರದಂದು 23 ವರ್ಷದೊಳಗಿನ ದ.ಕ ಹಾಗೂ ಉಡುಪಿ ಜಿಲ್ಲೆಯ ಆಟಗಾರರಿಗೆ ಹಾಗೂ,10 ರವಿವಾರದಂದು ಮುಲ್ಕಿ ವ್ಯಾಪ್ತಿಯ ಎಲ್ಲಾ ಆಟಗಾರರಿಗೆ ಆಡಲು ಅವಕಾಶ ಕಲ್ಪಿಸಲಾಗಿದೆ.
ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 13,000 ನಗದು ಹಾಗೂ ದ್ವಿತೀಯ ಸ್ಥಾನಿ 7,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಉಡುಪಿ ಕ್ರಿಕೆಟ್ ಲೈವ್ ಪಂದ್ಯಾಕೂಟದ ನೇರ ಪ್ರಸಾರವನ್ನು ಬಿತ್ತರಿಸಲಿದೆ.ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.