ಜನವರಿ 2 ಹಾಗೂ 3 ರಂದು ಕುಂದಾಪುರದ ಗಾಂಧಿಮೈದಾನದಲ್ಲಿ ನಡೆದ ಜಗನ್ಮಾತ ಟ್ರೋಫಿ-2021 ಯನ್ನು ಅಜಯ್ ಕುಂಜಿಗುಡಿ ತಂಡ ಜಯಿಸಿದೆ.
ಶನಿವಾರದ ಮುಕ್ತ ತಂಡಗಳ ಪ್ರವೇಶ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಅಜಯ್ ಕುಂಜಿಗುಡಿ ತಂಡ ರವಿವಾರದ ವಿಶ್ವಕರ್ಮ ಸಮಾಜದ ಪಂದ್ಯಗಳಲ್ಲಿ ಫೈನಲ್ ಪ್ರವೇಶಿಸಿದ ವಿ.ವಿ.ಸಿ.ಕುಂದಾಪುರ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿದೆ.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ಮನೋಜ್,ಬೆಸ್ಟ್ ಬೌಲರ್ ಭರತ್,ಬೆಸ್ಟ್ ಫೀಲ್ಡರ್ ಸನತ್ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ಗಿಳಿಯಾರು ನಾಗ ಪಡೆದುಕೊಂಡರು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಚಕ್ರವರ್ತಿ ಕುಂದಾಪುರ ತಂಡದ ಹಿರಿಯ ಆಟಗಾರರಾದ ಮನೋಜ್ ನಾಯರ್ ಇವರನ್ನು ಸನ್ಮಾನಿಸಲಾಯಿತು.
ಶನಿವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಂಗಳೂರು ಪಂಚಾಯತ್ ಸದಸ್ಯರು ನಾಗರಾಜ್ ಆಚಾರ್,ಮನೋಜ್ ನಾಯರ್ ಚಕ್ರವರ್ತಿ,ವಿಜಯ್.ಎಸ್.ಪೂಜಾರಿ,ಕು ಸುಮಾಕರ್ ಶೆಟ್ಟಿ, ಪಂದ್ಯಾವಳಿಯ ಮುಖ್ಯ ಆಯೋಜಕರಾದ ಅಕ್ಷಯ್ ಆಚಾರ್ ಹಾಗೂ ಗಾಂಧಿ ಮೈದಾನ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು…