Home ಕ್ರಿಕೆಟ್ ಮಾಸ್ಟರ್ ಟ್ರೋಫಿ-2021 ಗೆದ್ದು, ಚೊಚ್ಚಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅವಿಘ್ನ ಸೃಷ್ಟಿ ಬೆಂಗಳೂರು.

ಮಾಸ್ಟರ್ ಟ್ರೋಫಿ-2021 ಗೆದ್ದು, ಚೊಚ್ಚಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅವಿಘ್ನ ಸೃಷ್ಟಿ ಬೆಂಗಳೂರು.

ಮಾಸ್ಟರ್ ಟ್ರೋಫಿ-2021 ಗೆದ್ದು, ಚೊಚ್ಚಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅವಿಘ್ನ ಸೃಷ್ಟಿ ಬೆಂಗಳೂರು.
ಬೆಂಗಳೂರಿನ ಯುವ ಕ್ರಿಕೆಟಿಗರಾದ ಕಾಶಿ ಹಾಗೂ ನಾಗ ಇವರ ಸಾರಥ್ಯದಲ್ಲಿ,
ಬೆಂಗಳೂರು ತುಮಕೂರು ರಸ್ತೆ ಹನುಮಂತೇಗೌಡನ ಪಾಳ್ಯದ ಲೋಬೋ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟ “ಮಾಸ್ಟರ್ ಟ್ರೋಫಿ”ಯನ್ನು ಅವಿಘ್ನ ಸೃಷ್ಟಿ ಬೆಂಗಳೂರು ತಂಡ ಗೆದ್ದು ಕೊಂಡಿದೆ.
ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಫೈನಲ್ ನಲ್ಲಿ ಎಸ್.ಎಲ್.ವಿ ಬೆಂಗಳೂರು ತಂಡವನ್ನು ಸೋಲಿಸಿ ಆಕರ್ಷಕ ಮಾಸ್ಟರ್ ಟ್ರೋಫಿ-2021 ಸಹಿತ 50ಸಹಸ್ರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಎಸ್.ಎಲ್.ವಿ ತಂಡ 25 ಸಹಸ್ರ ನಗದು ಸಹಿತ ಆಕರ್ಷಕ ಟ್ರೋಫಿ ಪಡೆದುಕೊಂಡರು.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಎಸ್.ಎಲ್.ವಿ ತಂಡದ ಕೆಂಚ ಪಾಲಾದರೆ,ಬೆಸ್ಟ್ ಬೌಲರ್  ಅವಿಘ್ನ ಸೃಷ್ಟಿಯ ವಿಶ್ವಾಸ್ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ನಿರ್ವಹಣೆ ನೀಡಿದ ಅವಿಘ್ನ ಸೃಷ್ಟಿ ತಂಡದ ಆದರ್ಶ್ ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾದರು…
                ಕೆ.ಆರ್.ಕೆ.ಆಚಾರ್ಯ

LEAVE A REPLY

Please enter your comment!
Please enter your name here

four × 2 =

ಮಾಸ್ಟರ್ ಟ್ರೋಫಿ-2021 ಗೆದ್ದು, ಚೊಚ್ಚಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅವಿಘ್ನ ಸೃಷ್ಟಿ ಬೆಂಗಳೂರು.

ಬೆಂಗಳೂರಿನ ಯುವ ಕ್ರಿಕೆಟಿಗರಾದ ಕಾಶಿ ಹಾಗೂ ನಾಗ ಇವರ ಸಾರಥ್ಯದಲ್ಲಿ,ಬೆಂಗಳೂರು ತುಮಕೂರು ರಸ್ತೆ ಹನುಮಂತೇಗೌಡನ ಪಾಳ್ಯದ ಲೋಬೋ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟ "ಮಾಸ್ಟರ್ ಟ್ರೋಫಿ"ಯನ್ನು ಅವಿಘ್ನ ಸೃಷ್ಟಿ ಬೆಂಗಳೂರು ತಂಡ ಗೆದ್ದು ಕೊಂಡಿದೆ.ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಫೈನಲ್ ನಲ್ಲಿ ಎಸ್.ಎಲ್.ವಿ ಬೆಂಗಳೂರು ತಂಡವನ್ನು ಸೋಲಿಸಿ ಆಕರ್ಷಕ ಮಾಸ್ಟರ್ ಟ್ರೋಫಿ-2021 ಸಹಿತ 50ಸಹಸ್ರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಎಸ್.ಎಲ್.ವಿ ತಂಡ 25 ಸಹಸ್ರ ನಗದು ಸಹಿತ ಆಕರ್ಷಕ ಟ್ರೋಫಿ ಪಡೆದುಕೊಂಡರು.ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಎಸ್.ಎಲ್.ವಿ ತಂಡದ ಕೆಂಚ ಪಾಲಾದರೆ,ಬೆಸ್ಟ್ ಬೌಲರ್  ಅವಿಘ್ನ ಸೃಷ್ಟಿಯ ವಿಶ್ವಾಸ್ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ನಿರ್ವಹಣೆ ನೀಡಿದ ಅವಿಘ್ನ ಸೃಷ್ಟಿ ತಂಡದ ಆದರ್ಶ್ ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾದರು...                ಕೆ.ಆರ್.ಕೆ.ಆಚಾರ್ಯ

Send this to a friend