ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಉದ್ಯೋಗ ವಂಚಿತ ಯುವಕರು ಹಾಗೂ ಬಡವರ್ಗದ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೈಂದೂರಿನ ಗೋಳಿಹೊಳೆ ಸಮೀಪ ನಿರ್ಮಾಣವಾಗುತ್ತಿರುವ,ಮತ್ಸ್ಯ ಬಂಧನ ಪ್ರೈವೇಟ್ ಲಿಮಿಟೆಡ್-ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕದ ಶಿಲಾನ್ಯಾಸ ಕಾರ್ಯಕ್ರಮ
ಕ್ರೀಡಾಪ್ರೋತ್ಸಾಹಕರು,ಮತ್ಸ್ಯಬಂಧನ ಸಂಸ್ಥೆಯ ಆಡಳಿತ ನಿರ್ದೇಶಕರು,ಶೆಫ್ ಟಾಕ್ ಕಂಪೆನಿ ಮಾಲೀಕರು,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರು ಶ್ರೀ ಗೋವಿಂದ ಬಾಬು ಪೂಜಾರಿಯವರ ನೇತೃತ್ವದಲ್ಲಿ ಇಂದು ಬೈಂದೂರಿನ ಎಲ್ಲೂರಿನಲ್ಲಿ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಡೆಯಲಿದೆ.
ಉತ್ಪಾದನಾ ಘಟಕದ ಶಿಲಾನ್ಯಾಸವನ್ನು ಮುಜರಾಯಿ,ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ನೆರವೇರಿಸಲಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಶ್ರೀ.ಬಿ.ವೈ.ರಾಘವೇಂದ್ರ ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಸಲಿದ್ದಾರೆ.ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಶ್ರೀ.ಬಿ.ಎಂ.ಸುಕುಮಾರ್ ಶೆಟ್ಟಿ ಸಭಾಧ್ಯಕ್ಷರಾಗಿ ಭಾಗವಹಿಸಲಿದ್ದು,ಕರ್ನಾಟಕ ಸರಕಾರದ ನೂತನ ಸಚಿವರಾದ ಶ್ರೀ.ಎಸ್.ಅಂಗಾರ ಇವರ ಗೌರವ ಉಪಸ್ಥಿತಿ ಸಮಾರಂಭದ ಮೆರುಗನ್ನು ಹೆಚ್ಚಿಸಲಿದೆ.
ಇಂದಿನ ಕಾರ್ಯಕ್ರಮದಲ್ಲಿ ಉಡುಪಿ,ದ.ಕ ವಿಧಾನ ಸಭಾ ಕ್ಷೇತ್ರದ ಶಾಸಕರು,ಜಿಲ್ಲಾ,ತಾಲ್ಲೂಕು ಪಂಚಾಯತ್ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಮತ್ಸ್ಯಬಂಧನ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರು ಗೋವಿಂದ ಬಾಬು ಪೂಜಾರಿ ಹಾಗೂ ನಿರ್ದೇಶಕರಾದ ಅರುಣ್ ಧನಪಾಲ್ ಸರ್ವರಿಗೂ ಆದರದ ಸ್ವಾಗತವನ್ನು ಬಯಸಿದ್ದಾರೆ.