ಬಂಗಾಳ ವಿರುದ್ಧ ಅಭಿಲಾಷ್ ಶೆಟ್ಟಿ ರಣಜಿ ಪಾದಾರ್ಪಣೆ ಸಾಧ್ಯತೆ!
ಉಡುಪಿಯ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ, ಬಂಗಾಳ ವಿರುದ್ಧ ನವೆಂಬರ್ 6ರಂದು ರಣಜಿ ಕ್ರಿಕೆಟ್’ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ತೋರಿರುವ ಅಭಿಲಾಷ್ ಶೆಟ್ಟಿ ಈ ಬಾರಿಯ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶ, ಕೇರಳ ಹಾಗೂ ಬಿಹಾರ ತಂಡಗಳ ವಿರುದ್ಧದ ಪಂದ್ಯಗಳಿಗೆ ರಾಜ್ಯ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಎಲೈಟ್ ಸಿ ಗುಂಪಿನಲ್ಲಿ ಕರ್ನಾಟಕದ ಮುಂದಿನ ಪಂದ್ಯ ನವೆಂಬರ್ 6ರಂದು ಬಂಗಾಳ ವಿರುದ್ಧ ಬೆಂಗಳೂರಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಅಭಿಲಾಷ್ ಶೆಟ್ಟಿಗೆ ರಣಜಿ ಪಾದಾರ್ಪಣೆಯ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.
ಬಂಗಾಳ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ ಹೀಗಿದೆ:
1. ಮಯಾಂಕ್ ಅಗರ್ವಾಲ್ (ನಾಯಕ)
2. ಮನೀಶ್ ಪಾಂಡೆ (ಉಪನಾಯಕ)
3. ನಿಕಿನ್ ಜೋಸ್
4. ಸ್ಮರಣ್ ಆರ್.
5. ಕಿಶನ್ ಬೆದರೆ
6. ಅಭಿನವ್ ಮನೋಹರ್
7. ಸುಜಯ್ ಸತೇರಿ (ವಿಕೆಟ್ ಕೀಪರ್)
8. ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್)
9. ಶ್ರೇಯಸ್ ಗೋಪಾಲ್
10. ಹಾರ್ದಿಕ್ ರಾಜ್
11. ವಿದ್ಯಾಧರ್ ಪಾಟೀಲ್
12. ವಿ.ಕೌಶಿಕ್
13. ಅನೀಶ್ ಕೆ.ವಿ
14. ಮೊಹ್ಸಿನ್ ಖಾನ್
15. ಅಭಿಲಾಷ್ ಶೆಟ್ಟಿ
16. ಯಶೋವರ್ಧನ್ ಪ್ರತಾಪ್