ಸ್ಪೋರ್ಟ್ಸ್ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

-

- Advertisment -spot_img

ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಹಾಗೂ ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ), ಬೆಳಪು ಇವರ ಜಂಟಿ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವು ದಿನಾಂಕ 09-02-2025 ರಂದು ಬೆಳಪು ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.

ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಶಾನವಾಜ್ ಫಜಲುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಕ್ರೀಡಾಕೂಟವನ್ನು ಶಾಂತಿಯ ಸಂಕೇತವಾದ ಪಾರಿವಾಳ ಹಾರಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮೈ ಭಾರತ್ ನೆಹರು ಯುವ ಕೇಂದ್ರದ ಉಪನಿರ್ದೇಶಕರಾದ ಶ್ರೀ ಲೋಕೇಶ್ ಕುಮಾರ್ ಗೌರವ ಅತಿಥಿಗಳಾಗಿ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ರಿತೇಶ್ ಶೆಟ್ಟಿ ಸೂಡ (ಯುವಜನ ಸೇವಾ ಅಧಿಕಾರಿ, ಕಾಪು ತಾಲೂಕು), ಶ್ರೀ ಬಾಲಕೃಷ್ಣ ಎಸ್. ಆಚಾರ್ಯ ಬೆಳಪು (ಅಧ್ಯಕ್ಷರು, ರೋಟರಿ ಕ್ಲಬ್, ಕಾಪು), ಶ್ರೀ ಕೋಟ ರಾಮಕೃಷ್ಣ ಆಚಾರ್ಯ (ಮಾಲೀಕರು, SportsKannada.com), ಜನಾಬ್ ಅರ್ಷದ್ ಅಹಮದ್ (ಅಧ್ಯಕ್ಷರು, ಮಹಮ್ಮದೀಯ ಮಲ್ಲಾರ್), ಶ್ರೀ ರವಿ ಜಿ. ಬೆಳಪು (ಅಧ್ಯಕ್ಷರು, ಅಂಬೇಡ್ಕರ್ ಯುವಕ ಮಂಡಲ, ಬೆಳಪು) ಉಪಸ್ಥಿತರಿದ್ದರು.

ಕಾಪು ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿ, ಅತ್ಯುತ್ತಮ ರೀತಿಯಲ್ಲಿ ಆಯೋಜಿಸಿದ ಬೆಳಪು ಸ್ಪೋರ್ಟ್ಸ್ ಕ್ಲಬ್‍ನ ಎಲ್ಲ ಸದಸ್ಯರಿಗೆ ಅಭಿನಂದಿಸಿದರು.

ಜನಾಬ್ ಶಭಿ ಅಹ್ಮದ್ ಖಾಜಿ (ಅಧ್ಯಕ್ಷರು, ಜಮೀಯ್ಯತುಲ್ ಫಲಾಹ್ (ರಿ), ಕಾಪು) ಹಾಗೂ ಶ್ರೀಯುತ ಯೋಗೀಶ್ ಪೂಜಾರಿ (ಅಧ್ಯಕ್ಷರು, ಬಿಲ್ಲವರ ಸಂಘ, ಬೆಳಪು) ಕೂಡ ಆಗಮಿಸಿ ಶುಭ ಹಾರೈಸಿದರು.

ಸ್ಪರ್ಧೆಯ ಫಲಿತಾಂಶ:

ಪುರುಷರ ವಿಭಾಗ:

ವಾಲಿಬಾಲ್: ಯೆಲ್ಲೂರು ಫ್ರೆಂಡ್ಸ್ ಕ್ಲಬ್ A (ವಿನ್ನರ್), ದುರ್ಗಾ ಪಣಿಯೂರು A (ರನ್ನರ್-ಅಪ್)

ಬ್ಯಾಡ್ಮಿಂಟನ್: ಭಾವಿತ್ ಕುಂಜೂರ್ (ವಿನ್ನರ್), ದೀಕ್ಷಿತ್ ಕೆ. (ರನ್ನರ್-ಅಪ್)

ಭಾರ ಎತ್ತುವ ಸ್ಪರ್ಧೆ: ಕಾರ್ತಿಕ್ ಮಣಿಪುರ (ವಿನ್ನರ್)

ಮಹಿಳೆಯರ ವಿಭಾಗ:

ಖೋ ಖೋ: ಟೀಮ್ ಮಣಿಪುರ (ವಿನ್ನರ್), ಟೀಮ್ ಯೆರ್ಮಾಳ್ (ರನ್ನರ್-ಅಪ್)

100 ಮೀ ಓಟ: ರಿಂಕು (ವಿನ್ನರ್), ವೀಣಾ (ರನ್ನರ್-ಅಪ್)

ಸ್ಲೋ ಸೈಕಲ್ ಸ್ಪರ್ಧೆ: ಪದ್ಮಶ್ರೀ (ವಿನ್ನರ್), ಅರ್ಪಿತಾ (ರನ್ನರ್-ಅಪ್)

ಬಹುಮಾನ ವಿತರಣಾ ಸಮಾರಂಭ:

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜನಾಬ್ ಮುಸ್ತಾಕ್ ಸಾಹೇಬ್ (ಉದ್ಯಮಿ, ಮುಸ್ತಾಕ್ ಎಲೆಕ್ಟ್ರಿಕಲ್ಸ್, ಕಾಪು), ಜನಾಬ್ ಅಬ್ದುಲ್ ರಜಾಕ್ ಬಿ.ಎಂ (ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಸಂಯುಕ್ತ ಪ್ರೌಢ ಶಾಲೆ, ಬೆಳಪು) ಹಾಗೂ ಬೆಳಪು ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಉಪಾಧ್ಯಕ್ಷ ಸಾಹಿದ್ ನವಾಜ್, ಕಾರ್ಯದರ್ಶಿ ಉಸ್ಮಾನ್ ಘನಿ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಜಂಟಿ ಕಾರ್ಯದರ್ಶಿ ಅಸದ್ ಅಲಿ, ಸಂಘಟನಾ ಕಾರ್ಯದರ್ಶಿ ಶಮೀಮ್ ಕುಶ್ದಿಲ್, ಆದಿಲ್ ಜಲೀಲ್, ಹಾಗೂ ಸಮಿತಿ ಸಲಹೆಗಾರರಾದ ಶಾನವಾಜ್ ನೂರುಲ್ಲಾ, ಶೇಖ್ ಖಾಲಿದ್ ಅಹಮದ್, ಸೈಯದ್ ಅಹಮದ್ ಅಂಜಲಬೆಟ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಜೇಶ್ ಆಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here

8 + 4 =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you