ಕ್ರಿಕೆಟ್44+ ಹಿರಿಯ ಆಟಗಾರರ ಅಪರೂಪದ ಸಮಾಗಮ- ಸೃಷ್ಟಿ ಸೀನಿಯರ್ಸ್ ಕಪ್-2022 ನವೆಂಬರ್...

44+ ಹಿರಿಯ ಆಟಗಾರರ ಅಪರೂಪದ ಸಮಾಗಮ- ಸೃಷ್ಟಿ ಸೀನಿಯರ್ಸ್ ಕಪ್-2022 ನವೆಂಬರ್ 18,19 ಮತ್ತು 20 ರಂದು

-

- Advertisment -spot_img
ಬೆಂಗಳೂರು-ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಶ್ರಯದಲ್ಲಿ ಅಕ್ಟೋಬರ್ ನಲ್ಲಿ ಆಯೋಜಿಸಲಾಗಿದ್ದ
44+ ಸೃಷ್ಟಿ ಸೀನಿಯರ್ಸ್ ಕಪ್ ಮಳೆಯಿಂದಾಗಿ ಮುಂದೂಲ್ಪಟ್ಟಿತ್ತು.ಇದೀಗ ಇಂದಿನಿಂದ ನವೆಂಬರ್ 18,19 ಮತ್ತು 20 ರಂದು ಬೆಂಗಳೂರಿನ ಮಾಕಳಿ ಸೃಷ್ಟಿ ಹುಲ್ಲುಹಾಸಿನ ಮೈದಾನದಲ್ಲಿ ಹೊನಲು ಬೆಳಕಿನಡಿಯಲ್ಲಿ ಮುಂದುವರಿಯಲಿದೆ.
 ಅಕ್ಟೋಬರ್ 12 ರಂದು ನಡೆದ ಮೊದಲ ದಿನದ ಪಂದ್ಯಗಳಲ್ಲಿ ಸೃಷ್ಟಿ ಬೆಂಗಳೂರು ತಂಡ ತಾನಾಡಿದ ಎರಡೂ ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ‌.ಫ್ಯೂಚುರಾ ಇಲೆವೆನ್ ಒಂದು ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಪ್ರವೇಶ ಪಡೆದಿದೆ.
*ಮುಂದಿನ ಪಂದ್ಯಗಳ ಸಮಗ್ರ ವಿವರ*
ಬಿ ಗ್ರೂಪ್ ನಲ್ಲಿ ಆನಂದ್ ಇಲೆವೆನ್,ರಂಗ ಇಲೆವೆನ್,
ಆರ್.ಡಿ ಇಲೆವೆನ್, ಗುರುಬ್ರಹ್ಮ ಬೆಂಗಳೂರು ತಂಡಗಳ ನಡುವಿನ ಪಂದ್ಯಗಳು ನವೆಂಬರ್ 18 ರಂದು ನಡೆಯಲಿದೆ.
ಸಿ ಗ್ರೂಪ್ ನಲ್ಲಿ ಜೈ ಕರ್ನಾಟಕ ಬೆಂಗಳೂರು,ನಾಗಾ ಇಲೆವೆನ್ ಕೆ.ಆರ್.ಪುರಂ,ಜನಪ್ರಿಯ ಬೆಂಗಳೂರು ಮತ್ತು ವೈ.ಬಿ.ಸಿ ದಾಸರಹಳ್ಳಿ ತಂಡಗಳ ನಡುವಿನ ಪಂದ್ಯಗಳು ನವೆಂಬರ್ 19 ರಂದು ನಡೆಯಲಿದೆ.
ಡಿ ಗ್ರೂಪ್ ನಲ್ಲಿ ಐಡಿಯಲ್ ಶಿವಮೊಗ್ಗ,ಚಮಕ್ ಬೆಂಗಳೂರು,ಶ್ರೀ ಬೆಂಗಳೂರು ಮತ್ತು ಫ್ರೆಂಡ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯಗಳು ಹಾಗೂ ನಿರ್ಣಾಯಕ ಹಂತದ ಪಂದ್ಯಗಳು ನವೆಂಬರ್ 20  ರವಿವಾರದಂದು ನಡೆಯಲಿದೆ.
ಡಿಸೆಂಬರ್ 31-1978 ಒಳಗಡೆ ಜನಿಸಿದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿದ್ದು,16 ತಂಡಗಳು ಭಾಗವಹಿಸುತ್ತಿದೆ.ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿರುವ ಈ ಪಂದ್ಯಾವಳಿಯ ಪ್ರಥಮ ಬಹುಮಾನ 50 ಸಾವಿರ,ದ್ವಿತೀಯ 25 ಸಾವಿರ,ತೃತೀಯ 15 ಸಾವಿರ ಮತ್ತು ಚತುರ್ಥ 10 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

two × one =

Latest news

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...
- Advertisement -spot_imgspot_img

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

Must read

- Advertisement -spot_imgspot_img

You might also likeRELATED
Recommended to you