ಕ್ರಿಕೆಟ್25/11 ಕ್ರಿಕೆಟ್ ಜಗತ್ತಿಗೆ ಮತ್ತೆ ಮರುಕಳಿಸದಿರಲಿ ಈ ದಿನ

25/11 ಕ್ರಿಕೆಟ್ ಜಗತ್ತಿಗೆ ಮತ್ತೆ ಮರುಕಳಿಸದಿರಲಿ ಈ ದಿನ

-

- Advertisment -spot_img
ಇಂದಿಗೆ 7 ವರ್ಷದ ಹಿಂದೆ ಕ್ರಿಕೆಟ್ ಜಗತ್ತು ಯುವ ಆಟಗಾರನ ಸಾವಿಗೆ ಕಣ್ಣಿರಿಟ್ಟ ದಿನ.ಇನ್ನು ಮೂರು ದಿನ ಕಳೆದಿದ್ದರೆ ಆತ ತನ್ನ 26ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ. ಆದರೆ ವಿಧಿ ಲಿಖಿತ ಬೇರೆ ಇತ್ತು.
ಸೀನ್ ಎಬೋಟ್ ಎಸೆದ ಬೌನ್ಸರ್ ಒಂದಕ್ಕೆ ಹುಕ್ ಮಾಡಲು ಹೋಗಿ ವಿಫಲನಾಗಿ ತಲೆಗೆ ಬಲವಾದ ಹೊಡೆತದಿಂದಾಗಿ ತನ್ನ ಪ್ರಾಣತೆತ್ತ 25ರ ಹರೆಯದ ಫಿಲಿಪ್ ಹ್ಯೂಸ್.
ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ  ನಡೆಯುತ್ತಿದ್ದ ದೇಶೀಯ ಪಂದ್ಯದಲ್ಲಿ ತನ್ನ ಶತಕದತ್ತ ಮುನ್ನಡೆಯುತಿದ್ದಾಗ ನಡೆಯಬಾರದ ಅನಾಹುತ ಸಂಭವಿಸಿತು.
 ಸಾಕಷ್ಟು ಸುರಕ್ಷಿತನಾಗಿ ಹೆಲ್ಮೆಟ್ ತೈಪ್ಯಾಡ್  ಇತ್ಯಾದಿ ಪರ್ಸನಲ್ ಪ್ರೊಟೆಕ್ಷನ್ ನೊಂದಿಗೆ  ಆಡಲಿಳಿದರೂ ದುರಾದೃಷ್ಟ ಎಂಬುದು  ಬೆಂಬಿಡದೆ ಕಾಡಿತ್ತು.  ತಜ್ಞರ ಪ್ರಕಾರ ಹೆಲ್ಮೆಟ್ ಧರಿಸಿದ ಮೇಲೆ 99% ತಲೆ ಸುರಕ್ಷಿತ. ಆದರೆ ಉಳಿದ ಒಂದು ಪ್ರತಿಶತ ಎನ್ನುವುದು ಈತನ ಸಾವಾಗಿ ಬಂತು.
 ತಲೆಗೆ ಬಿದ್ದ ಹೊಡೆತದಿಂದ ಒಮ್ಮೆ ಈತ ಸಾವರಿಸಿಕೊಂಡಂತೆ ಕಂಡು ಬರುತ್ತದೆ ನಂತರ ಒಮ್ಮೆಗೆ ಪಿಚ್ ಗೆ ಬೋರಲಾಗಿ ಬಿದ್ದ ಎದೆ ಝಲ್ ಎನಿಸುವ ದ್ರಶ್ಯ ಈವಾಗಲೂ ಕಣ್ಣಿಗೆ ಕಟ್ಟಿದಂತಿದೆ.
ಬೌನ್ಸರ್ ಎಸೆದ ಬೌಲರ್ ಸೀನ್ ಅಬೌಟ್ ಗೆ ಅಪರಾಧಿ ಪ್ರಜ್ಞೆ ಕಾಡತೊಡಗಿತ್ತು. 2  3 ಪ್ರೈಸ್ ಮೀಟಿಂಗ್ನಲ್ಲಿ ಉಲ್ಲೇಖಿಸಿದ್ದ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಫಿಲಿಪ್ ಹ್ಯೂಸ್ ಗಳಿಸಿದ 63 ರನ್ ಸ್ಕೋರ್ ಅನ್ನು ನಾಟೌಟ್ ಫಾರೆವರ್ ಎಂದು ಘೋಷಿಸಿಬಿಟ್ಟಿತು.
ಈ ಘೋರ ದುರ್ಘಟನೆ ನಡೆದು ಇಂದಿಗೆ ಆರು ವರ್ಷ ಕಳೆದರೂ, ಯಾವುದೇ ಬೌನ್ಸರ್ ಆಟಗಾರನ ಹೆಲ್ಮೆಟ್ ಬಡಿದಾಗ ಈ ಘಟನೆ ನೆನಪಿಗೆ ಬರುತ್ತದೆ. ಇನ್ನು ಮುಂದೆ ಇಂಥ ಯಾವುದೇ ದುರ್ಘಟನೆ ನಡೆಯದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
PHILIPH HUGHES ♥️ 63not out

LEAVE A REPLY

Please enter your comment!
Please enter your name here

one × 5 =

Latest news

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್ ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು...

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

  ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ...
- Advertisement -spot_imgspot_img

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

Must read

- Advertisement -spot_imgspot_img

You might also likeRELATED
Recommended to you