ಧಾರ್ಮಿಕ,ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಪಡುಬಿದ್ರಿಯ ಯುವ ಉತ್ಸಾಹಿ ಸಂಘಟಕರಾದ ಶ್ರೀ ಶಂಕರ್ ಕಂಚಿನಡ್ಕ ಇವರ ನೇತೃತ್ವದಲ್ಲಿ ನಲಿಕೆ ಯಾನೆ ಪಾಣಾರ ಸಮಾಜ ಬಾಂಧವರ ಒಗ್ಗಟ್ಟನ್ನು ಬಲಪಡಿಸುವ ಮತ್ತು ಸಮಾಜದ ಆಸಕ್ತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಂಡರ್ ಆರ್ಮ್ ಮಾದರಿಯಲ್ಲಿ “ಪಾಣಾರ ಪ್ರೀಮಿಯರ್ ಲೀಗ್-2021” ಪಂದ್ಯಾಟವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ.

ಹಲವಾರು ರಾಜ್ಯ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಸಾಕ್ಷಿಯಾದ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಡಿಸೆಂಬರ್ 25 ಮತ್ತು 26 ರಂದು ಅಂಡರ್ ಆರ್ಮ್ ರೂಪದಲ್ಲಿ ಪಂದ್ಯಾಟ ನಡೆಯಲಿದೆ.
ನಲಿಕೆ ಸಮಾಜದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಷ್ಟೊಂದು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಹಾಗೂ ಗರಿಷ್ಠ ಮೊತ್ತದ ನಗದು ಬಹುಮಾನಗಳನ್ನು ಒಳಗೊಂಡ ಪಂದ್ಯಾಟ ಹೊಸ ದಾಖಲೆಯನ್ನೇ ಬರೆಯಲಿದೆ.

ಇತ್ತೀಚೆಗಷ್ಟೇ ಪಡುಬಿದ್ರಿಯ ಅಮರ್ ಕಂಫರ್ಟ್ ಹೋಟೆಲ್ನಲ್ಲಿ ನಡೆದ ಆಕ್ಷನ್ ಪ್ರಕ್ರಿಯೆ ಹಾಗೂ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ಭಾಗವಹಿಸಿದ್ದು,ಈ ಸಂದರ್ಭ ಹಿರಿಯ ದೈವ ನರ್ತಕರನ್ನು ಸನ್ಮಾನಿಸಲಾಯಿತು.

ಭಾಗವಹಿಸಲಿರುವ 12 ಫ್ರಾಂಚೈಸಿಗಳು ಹಾಗೂ ಮಾಲೀಕರ ವಿವರ
1)ಪಡ್ಡಿಮ ತ್ರಿ ಬ್ರದರ್ಸ್-ಪಾಂಡುರಂಗ.ಎಸ್.
ಪಡ್ಡಿಮ
2)ಎನ್.ಎಸ್.ಸ್ಟ್ರೈಕರ್ಸ್ ಅಲಂಗಾರುಗುಡ್ಡ-ಸುಧಾಕರ್
3)ತ್ರಿಬಲ್ ಸ್ಟಾರ್ ವಾಮದಪದವು-ಅಣ್ಣು ಅಜ್ಜೊಟ್ಟು
4)ಬೆದ್ರ ಫ್ರೆಂಡ್ಸ್-ಸಂಜಯ್ ಕುಮಾರ್
5)ಕಾರ್ಕಳ ಫ್ರೆಂಡ್ಸ್ -ವಾಸು ಮಾಳ
6)ಯನ್ಸ್ ವಾರಿಯರ್ಸ್ ಪಡುಬಿದ್ರಿ-ಕೃಷ್ಣಬಂಗೇರ ಪಡುಬಿದ್ರಿ
7)ಭುವಿಕ್ ಫ್ರೆಂಡ್ಸ್ ನೆಲ್ಲಿಕಾರು-ಸುನಿಲ್
8)ಎಂ.ಪಿ.ಸ್ಟ್ರೈಕರ್ಸ್ ಮಿಜಾರು-ಸುಕೇಶ್
9)ಪ್ರಥ್ವಿಕ್ ಯಂಗ್ ಸ್ಟಾರ್-ಪ್ರಕಾಶ್ ಪಮ್ಮು
10)ಸಮರ್ಥ್ ಫ್ರೆಂಡ್ಸ್ ಎರ್ಮಾಳ್-ಸುಕೇಶ್ ಎರ್ಮಾಳ್
11)ಸೂಪರ್ ಕಿಂಗ್ಸ್ ಪುತ್ತಿಗೆ-ಸುರೇಶ್ ಪುತ್ತಿಗೆ
12)ಅಟ್ಯಾಕರ್ಸ್ ಮಜಾರು- ನವೀನ್ ಮಜಾರು

ಕಾರ್ಯಕ್ರಮಕ್ಕೆ ಚಿತ್ರರಂಗದ ಕಲಾವಿದರು,ಕ್ರೀಡಾ ತಾರೆಗಳು, ರಂಗಭೂಮಿ ನಟರು, ರಾಜಕೀಯ ಧುರೀಣರು ಆಗಮಿಸಲಿದ್ದು ಪಂದ್ಯಾಕೂಟದ ರಂಗೇರಿಸಲಿದ್ದಾರೆ.
