Categories
ಕ್ರಿಕೆಟ್

25/11 ಕ್ರಿಕೆಟ್ ಜಗತ್ತಿಗೆ ಮತ್ತೆ ಮರುಕಳಿಸದಿರಲಿ ಈ ದಿನ

ಇಂದಿಗೆ 7 ವರ್ಷದ ಹಿಂದೆ ಕ್ರಿಕೆಟ್ ಜಗತ್ತು ಯುವ ಆಟಗಾರನ ಸಾವಿಗೆ ಕಣ್ಣಿರಿಟ್ಟ ದಿನ.ಇನ್ನು ಮೂರು ದಿನ ಕಳೆದಿದ್ದರೆ ಆತ ತನ್ನ 26ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ. ಆದರೆ ವಿಧಿ ಲಿಖಿತ ಬೇರೆ ಇತ್ತು.
ಸೀನ್ ಎಬೋಟ್ ಎಸೆದ ಬೌನ್ಸರ್ ಒಂದಕ್ಕೆ ಹುಕ್ ಮಾಡಲು ಹೋಗಿ ವಿಫಲನಾಗಿ ತಲೆಗೆ ಬಲವಾದ ಹೊಡೆತದಿಂದಾಗಿ ತನ್ನ ಪ್ರಾಣತೆತ್ತ 25ರ ಹರೆಯದ ಫಿಲಿಪ್ ಹ್ಯೂಸ್.
ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ  ನಡೆಯುತ್ತಿದ್ದ ದೇಶೀಯ ಪಂದ್ಯದಲ್ಲಿ ತನ್ನ ಶತಕದತ್ತ ಮುನ್ನಡೆಯುತಿದ್ದಾಗ ನಡೆಯಬಾರದ ಅನಾಹುತ ಸಂಭವಿಸಿತು.
 ಸಾಕಷ್ಟು ಸುರಕ್ಷಿತನಾಗಿ ಹೆಲ್ಮೆಟ್ ತೈಪ್ಯಾಡ್  ಇತ್ಯಾದಿ ಪರ್ಸನಲ್ ಪ್ರೊಟೆಕ್ಷನ್ ನೊಂದಿಗೆ  ಆಡಲಿಳಿದರೂ ದುರಾದೃಷ್ಟ ಎಂಬುದು  ಬೆಂಬಿಡದೆ ಕಾಡಿತ್ತು.  ತಜ್ಞರ ಪ್ರಕಾರ ಹೆಲ್ಮೆಟ್ ಧರಿಸಿದ ಮೇಲೆ 99% ತಲೆ ಸುರಕ್ಷಿತ. ಆದರೆ ಉಳಿದ ಒಂದು ಪ್ರತಿಶತ ಎನ್ನುವುದು ಈತನ ಸಾವಾಗಿ ಬಂತು.
 ತಲೆಗೆ ಬಿದ್ದ ಹೊಡೆತದಿಂದ ಒಮ್ಮೆ ಈತ ಸಾವರಿಸಿಕೊಂಡಂತೆ ಕಂಡು ಬರುತ್ತದೆ ನಂತರ ಒಮ್ಮೆಗೆ ಪಿಚ್ ಗೆ ಬೋರಲಾಗಿ ಬಿದ್ದ ಎದೆ ಝಲ್ ಎನಿಸುವ ದ್ರಶ್ಯ ಈವಾಗಲೂ ಕಣ್ಣಿಗೆ ಕಟ್ಟಿದಂತಿದೆ.
ಬೌನ್ಸರ್ ಎಸೆದ ಬೌಲರ್ ಸೀನ್ ಅಬೌಟ್ ಗೆ ಅಪರಾಧಿ ಪ್ರಜ್ಞೆ ಕಾಡತೊಡಗಿತ್ತು. 2  3 ಪ್ರೈಸ್ ಮೀಟಿಂಗ್ನಲ್ಲಿ ಉಲ್ಲೇಖಿಸಿದ್ದ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಫಿಲಿಪ್ ಹ್ಯೂಸ್ ಗಳಿಸಿದ 63 ರನ್ ಸ್ಕೋರ್ ಅನ್ನು ನಾಟೌಟ್ ಫಾರೆವರ್ ಎಂದು ಘೋಷಿಸಿಬಿಟ್ಟಿತು.
ಈ ಘೋರ ದುರ್ಘಟನೆ ನಡೆದು ಇಂದಿಗೆ ಆರು ವರ್ಷ ಕಳೆದರೂ, ಯಾವುದೇ ಬೌನ್ಸರ್ ಆಟಗಾರನ ಹೆಲ್ಮೆಟ್ ಬಡಿದಾಗ ಈ ಘಟನೆ ನೆನಪಿಗೆ ಬರುತ್ತದೆ. ಇನ್ನು ಮುಂದೆ ಇಂಥ ಯಾವುದೇ ದುರ್ಘಟನೆ ನಡೆಯದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
PHILIPH HUGHES ♥️ 63not out