Categories
ಕ್ರಿಕೆಟ್

ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 22 ಸಿಕ್ಸರ್ ಸಿಡಿಸಿ ಇತಿಹಾಸದ ಪುಟ ಸೇರಿದ ಮುಸ್ತಫಾ ಮೀಯಪದವು…!!!!

ಕೆರಳದ ಮಂಜೇಶ್ವರದ  ಮದರ್ ಇಂಡಿಯಾ ಕಡಂಬಾರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನೆಡೆದ ಅಲಿಫ್ ಸ್ಟಾರ್ ಮೂಸೋಡಿ ಹಾಗೂ  ಎಮ್‌ಸಿಸಿ ಮೀಂಜಾ ನಡುವಿನ ಟಿ ಟ್ವೆಂಟಿ ಪಂದ್ಯದಲ್ಲಿ ಕೇವಲ 61 ಬಾಲ್ ಎದುರಿಸಿ 180 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಮುಸ್ತಫಾ.
ಇತನ ಭರ್ಜರಿ ಆಟದಲ್ಲಿ
 10 ಬೌಂಡರಿ ಹಾಗೂ 22 ಸಿಕ್ಸರ್ ಸೇರಿತ್ತು ಆತನ ಬ್ಯಾಟಿನಿಂದ ಸಿಕ್ಸರ್ ಬೌಂಡರಿಗಳಿಂದಲೆ 172 ರನ್ನು ಹರಿದು ಬಂದಿತ್ತು , ತನ್ನ ಶಾಲಾ ದಿನಗಳಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಮುಸ್ತಫಾ ಇಂದು ಅಂತರಾಷ್ಟ್ರೀಯ ಮಟ್ಟದ ದಾಖಲೆಯನ್ನು ಅಳಿಸಿ ಹಾಕಿ ಇತಿಹಾಸ ನಿರ್ಮಿಸಿದ್ದಾನೆ. ನಾಡಿನ ಎಮ್‌ಸಿಸಿ ನೀರಹಳ್ಳಿ ತಂಡದ ಸ್ಥಿರ ಆಟಗಾರಾರದ ಇವರು ಈ ಪಂದ್ಯದಲ್ಲಿ ಅಡಿದ ಆಟ  ಯುವಕರಿಗೆ ಮಾದರಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಎಮ್‌ಸಿಸಿ ಮೀಂಜಾ ಮುಸ್ತಫಾ ಹಾಗೂ ಕಮರು ಅವರ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು. ಎರಡನೇ ವಿಕೆಟ್ ಗೆ ಜೊತೆಯಾದ ಜೋಡಿ ಬರೋಬ್ಬರಿ 318 ರನ್ ಕಲೆಹಾಕುವುದರ ಜೋತೆಗೆ  ದಾಖಲೆಯ ಮೊತ್ತದ ಜೊತೆ ಆಟಕ್ಕೆ ಸಾಕ್ಷಿಯಾದರು.
 340 ರನ್‌ಗಳ ಬೆನ್ನು ಹತ್ತಲು ಬಂದ ಅಲಿಫ್ ಸ್ಟಾರ್ ಮೂಸೋಡಿ ಆರಂಭಿಕ ಆಘಾತ ಎದುರಿಸಿದರು  ಕೆಲವು ಆಟಗಾರರು ಏಕಾಂಗಿ ಹೋರಾಟ ನಡೆಸಿದರು. ಆದರೆ ಗೆಲುವಿನ ಹಾದಿ ಸಾಗುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಅಂತಿಮವಾಗಿ 19.4 ಓವರ್‌ಗಳಲ್ಲಿ 218 ರನ್ ಗೆ ಅಲೌಟ್ ಆಯಿತು. ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದಾಖಲೆಯ ಆಟವಾಡಿದ ಮುಸ್ತಫಾ ಮೀಯಪದವು ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಮೀಂಜಾ ಗ್ರಾಮದ ಕಂಚಿಲ ನಾಡಿನ ನೂರುಲ್ ಆಲಂ ಹಾಗೂ ಖದೀಜ ದಂಪತಿಗಳ ನಾಲ್ಕನೇ ಮಗನಾದ ಮುಸ್ತಫಾ ಕ್ರಿಕೇಟ್ ಇತಿಹಾಸದಲ್ಲೆ ಯಾರೂ ಮಾಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡು ಇತಿಹಾಸದ ಪುಟ ಸೇರಿದ್ದಾನೆ….

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

twelve + 5 =