5.2 C
London
Friday, December 13, 2024
Homeಹಾಕಿಟೋಕಿಯೋ ಒಲಿಂಪಿಕ್ಸ್ ಹಾಕಿ-ಭಾರತಕ್ಕೆ ಕಂಚು

ಟೋಕಿಯೋ ಒಲಿಂಪಿಕ್ಸ್ ಹಾಕಿ-ಭಾರತಕ್ಕೆ ಕಂಚು

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ದಶಕಗಳ ಬಳಿಕ ಒಲಿಂಪಿಕ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4 ಗೋಲುಗಳ ಅಂತರದಿಂದ ರೋಚಕ ರೀತಿಯಲ್ಲಿ ಸೋಲಿಸಿ ಕಂಚಿನ ಪದಕ ಪಡೆಯಿತು.

1980ರ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್​ನಲ್ಲಿ ಗಿಟ್ಟಿಸಿರುವ ಮೊದಲ ಪದಕ ಇದಾಗಿದೆ. ಟೋಕಿಯೋದಲ್ಲಿ ನಡೆದ ಈ ರೋಚಕ ಹಣಾಹಣಿಯಲ್ಲಿ ಜರ್ಮನಿ ತಂಡ ಒಂದು ಹಂತದಲ್ಲಿ 3-1 ಗೋಲುಗಳಿಂದ ಮುನ್ನಡೆ ಹೊಂದಿತ್ತು. ಆದರೆ, ಭಾರತ ಸತತ 4 ಗೋಲು ಗಳಿಸಿ 5-3 ಮುನ್ನಡೆ ಪಡೆಯಿತು. ಕೊನೆಯ ಕ್ವಾರ್ಟರ್​ನಲ್ಲಿ ಜರ್ಮನಿ ಕಂಬ್ಯಾಕ್ ಮಾಡಿ 4ನೇ ಗೋಲು ಗಳಿಸಿತು. ಅಂತಿಮವಾಗಿ ಗೆಲುವಿನ ಮಾಲೆ ಭಾರತಕ್ಕೆ ಒಲಿಯಿತು. ಭಾರತ ಹಾಕಿ ತಂಡ ಗೆದ್ದ ಈ ಪದಕ ಈ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಸಿಕ್ಕಿರುವ ನಾಲ್ಕನೇ ಪದಕವಾಗಿದೆ. ಇದರೊಂದಿಗೆ ಭಾರತದ ಬುಟ್ಟಿಯಲ್ಲಿ 1 ಬೆಳ್ಳಿ ಮತ್ತು 3 ಕಂಚಿನ ಪದಕ ಇವೆ. ಅತ್ತ, ಭಾರತ ಮಹಿಳಾ ಹಾಕಿ ತಂಡ ಕೂಡ ಕಂಚಿನ ಪದಕಕ್ಕಾಗಿ ನಾಳೆ ಪ್ರಯತ್ನಿಸುತ್ತಿದೆ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

sixteen − two =