ಸತ್ಯದ ತುಳುವೆರ್ (ರಿ) ಉಡುಪಿ ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ತಾರೀಕು 1/08/2021 ರಂದು ಮಲ್ಪೆ ಫಿಷರಿಶ್ ಸಭಾಂಗಣದಲ್ಲಿ ಆಟಿಡೊಂಜಿ ದಿನ ಈ ವಿಶೇಷ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಮಾಜಸೇವೆಯೇ ಜೀವನ ಎಂಬ ಧ್ಯೇಯವಾಕ್ಯದೊಂದಿಗೆ,ತನ್ನ ಜೀವವನ್ನೇ
ಪಣಕ್ಕಿಟ್ಟು, ಕೊರೋನಾದಿಂದ ಮೃತಪಟ್ಟ 400 ಕ್ಕೂ ಮಿಕ್ಕಿ ಶವಗಳನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿದ ಉಡುಪಿಯ ಖ್ಯಾತ ಕ್ರೀಡಾಪಟು ನಾಗಾರ್ಜುನ.ಡಿ.ಪೂಜಾರಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಕಾಂತ್ ಶೆಟ್ಟಿ ನೆರವೇರಿಸಿದರು.ಸತ್ಯದ ತುಳುವೆರ್ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಮೇಘರವರು ಅಧ್ಯಕ್ಷತೆ ವಹಿಸಿ ಕೊಂಡಿದರು. ಮುಖ್ಯ ಅತಿಥಿಯಾಗಿ ಸತ್ಯದ ತುಳುವೆರ್ ತಂಡದ ಗೌರವ ಅಧ್ಯಕ್ಷೆ ಗೀತಾಂಜಲಿ ಸುವರ್ಣ ರವರು ಭಾಗವಹಿಸಿದ್ದರು ವೇದಿಕೆಯಲ್ಲಿ ಸಂಸ್ಥಾಪಕರದ ಪ್ರವೀಣ್ ಕುರ್ಕಾಲ್, ಅಧ್ಯಕ್ಷರಾದ ಪ್ರವೀಣ್ ಬಂಗೇರ ಮಲ್ಪೆ, ಮಹಿಳಾ ಘಟಕ ಕೋಶಾಧಿಕಾರಿ ರೇಖಾ ಉಪಸ್ಥಿತರಿದ್ದರು.