Categories
ಕ್ರಿಕೆಟ್

ಅದ್ಧೂರಿಯ ಯಶವಂತಪುರ ಕ್ರಿಕೆಟ್ ಹಬ್ಬ,4 ದಿನಗಳ ಹೊನಲು ಬೆಳಕಿನ ಮಾಯಾಜಾಲ Y.P.L ಸೀಸನ್ 2

ರಾಜರಾಜೇಶ್ವರಿ ನಗರದ ಜನಪ್ರಿಯ ಶಾಸಕ ಮುನಿರತ್ನಂ ರವರು ಹಾಗೂ ಅಭಿವೃದ್ಧಿಯ ಹರಿಕಾರ ನಗರಸಭಾ ಸದಸ್ಯರಾದ ಜಿ.ಕೆ.ವೆಂಕಟೇಶ್ ರವರು ಅರ್ಪಿಸುವ,ಜೈ ಕರ್ನಾಟಕದ ಹಿರಿಯ ಆಟಗಾರ ಶಂಕರ್ ಶಂಕಿ,ಚತುರ ಸಂಘಟಕರಾದ ಕಿರಣ್ ಸಿಂಗ್, ಶಂಕರ್ ಗೌಡ ಹಾಗೂ ಮುಬಾರಕ್ ರವರ ಸಾರಥ್ಯದಲ್ಲಿ, ಪಬ್ಲಿಕ್ ಟಿ.ವಿ,ಸುವರ್ಣ್ ನ್ಯೂಸ್,E.T.V ಹಾಗೂ ಫೋಕಸ್ ಟಿ.ವಿ ಗಳಲ್ಲಿ ಚೀಫ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಪರ್ತಕರ್ತರು, ಅರವಿಂದ್ ಸಾಗರ್ ರವರ ಮಾರ್ಗದರ್ಶನದಲ್ಲಿ, ಜೈ ಕರ್ನಾಟಕ ಬೆಂಗಳೂರು, ಸನ್ ಬಾಯ್ಸ್, ಎಚೀವರ್ಸ್ ಹಾಗೂ ಜೆ.ಪಿ.ಬಾಯ್ಸ್ ಇವರ ಸಹಯೋಗದೊಂದಿಗೆ ಇದೇ ಬರುವ ನವೆಂಬರ್ 21 ರಿಂದ 24 ರವರೆಗೆ 4 ದಿನಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಉದ್ಯಾನ ನಗರಿಯಲ್ಲಿ ನಡೆಯಲಿದೆ.

ಜೆ.ಪಿ.ಪಾರ್ಕ್ ಮತ್ತಿಕರೆ, ಯಶವಂತಪುರದ ರೈಲ್ವೇಸ್ ಗ್ರೌಂಡ್ ಹಾಗೂ SRS ಅಂಗಣ ಈ ಮೂರು ಮೈದಾನಗಳಲ್ಲಿ ಅದ್ಧೂರಿಯ Y.P.L ಸಂಘಟಿಸಲಾಗಿದೆ. ಕಳೆದ ಬಾರಿಯ ಪ್ರಥಮ‌ ಆವೃತ್ತಿಯಲ್ಲಿ ನ್ಯಾಶ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು,ಜೈ ಕರ್ನಾಟಕ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತ್ತು. ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದ ಈ ಪಂದ್ಯಾಕೂಟ ರಾಜ್ಯ ಟೆನ್ನಿಸ್ ಕ್ರಿಕೆಟ್ ವಲಯದಲ್ಲಿ ಬಹಳಷ್ಟು ಪ್ರಸಿದ್ಧಿ ಗಳಿಸಿ,ಬಹು ನಿರೀಕ್ಷೆಯನ್ನು ಹುಟ್ಟಿ ಹಾಕಿತ್ತು.

ಈ ಬಾರಿ ರಾಜ್ಯದ ಬಲಿಷ್ಠ 24 ತಂಡಗಳು ಪ್ರತಿಷ್ಟಿತ ಟ್ರೋಫಿಗಾಗಿ ಸೆಣಸಾಡಲಿದ್ದು ಹೊರರಾಜ್ಯದ ತಂಡ ಚೆನ್ನೈ, ಕೊಡಗು, ಕರಾವಳಿಯ 2 ಬಲಿಷ್ಠ ತಂಡಗಳು ಹಾಗೂ ಬೆಂಗಳೂರಿನ ಪ್ರತಿಷ್ಟಿತ ತಂಡಗಳು ಭಾಗವಹಿಸಲಿದೆ.

23 ಶನಿವಾರದಂದು 80,90 ರ ದಶಕ ಟೆನ್ನಿಸ್ ಕ್ರಿಕೆಟ್ ನ ಮಹೋನ್ನತ ದಂತಕಥೆಗಳಿಗಾಗಿ Above 40 ಪಂದ್ಯಾಕೂಟವನ್ನೂ ಸಂಘಟಿಸಲಾಗಿದ್ದು,ಟೆನ್ನಿಸ್ ಕ್ರಿಕೆಟ್ ಇನ್ನಿಲ್ಲದಂತೆ ಆಳಿ ಮೆರೆದ ಜೈ ಕರ್ನಾಟಕ,ಚಕ್ರವರ್ತಿ ಕುಂದಾಪುರ,ಫ್ರೆಂಡ್ಸ್ ಬೆಂಗಳೂರು,A.P.S ಬೆಂಗಳೂರು ಹೀಗೆ ಇನ್ನಿತರ ಪ್ರಸಿದ್ಧ10 ತಂಡಗಳು ಸೆಣಸಾಡಲಿದ್ದು ಪಂದ್ಯಾಕೂಟದ ಘನತೆ,ಗೌರವವನ್ನು ಹೆಚ್ಚಿಸಲಿದೆ.

ವಿಜೇತ ಕಿರಿಯರ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ಹಾಗೂ ತೃತೀಯ ಸ್ಥಾನಿ 25 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಳ್ಳಲಿದ್ದು, ಹಿರಿಯರ ವಿಜೇತ ತಂಡ 20 ಸಾವಿರ ಹಾಗೂ ದ್ವಿತೀಯ ಸ್ಥಾನಿ 10,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಳ್ಳಲಿದ್ದಾರೆ. ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರನ್ನು ವಿಶಿಷ್ಟ ಉಡುಗೊರೆಗಳು ಹುರಿದುಂಬಿಸಲಿದೆ.

ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತಂಡ ತೀರ್ಪುಗಾರರಾಗಿ, ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ ಐತಾಳ್ ಕೋಟ ಹಾಗೂ ಪ್ರಶಾಂತ್ ಅಂಬಲಪಾಡಿ ವೀಕ್ಷಕ ವಿವರಣೆ ನೇತೃತ್ವ ವಹಿಸಿದರೆ,M sports ನೇರ ಪ್ರಸಾರವನ್ನು ಬಿತ್ತರಿಸಲಿದ್ದು,ಪ್ರಸ್ತುತ ರಾಜ್ಯದ ಬಹುಬೇಡಿಕೆಯ ಕ್ರೀಡಾ ವೆಬ್ಸೈಟ್ “ಸ್ಪೋರ್ಟ್ಸ್ ಕನ್ನಡ” ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆಯೆಂದು ಪಂದ್ಯಾಕೂಟ ವ್ಯವಸ್ಥಾಪಕ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

-ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

five × 2 =