Action Replayಟೊರ್ಪೆಡೋಸ್ ಸಂಸ್ಥೆಯ ರೂವಾರಿ ಗೌತಮ್ ಶೆಟ್ಟಿ ಪ್ರತಿಷ್ಟಿತ ಬಂಟರತ್ನ ಪ್ರಶಸ್ತಿ ಗೆ...

ಟೊರ್ಪೆಡೋಸ್ ಸಂಸ್ಥೆಯ ರೂವಾರಿ ಗೌತಮ್ ಶೆಟ್ಟಿ ಪ್ರತಿಷ್ಟಿತ ಬಂಟರತ್ನ ಪ್ರಶಸ್ತಿ ಗೆ ಆಯ್ಕೆ

-

- Advertisment -spot_img

ಕ್ರೀಡಾಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಚಲಿತವಿರುವ ಹಳೆಯಂಗಡಿಯ ಪ್ರತಿಷ್ಟಿತ ಕ್ರೀಡಾ ತರಬೇತಿ ಸಂಸ್ಥೆ”ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ನ ರೂವಾರಿ ಗೌತಮ್ ಶೆಟ್ಟಿಯವರು, ಬಂಟರ ಪ್ರಮುಖ ವಾಹಿನಿ “ಬಂಟರ ಮಿತ್ರ” ಪತ್ರಿಕೆಯಲ್ಲಿ 10 ಸಂಚಿಕೆಗಳಲ್ಲಿ ಪ್ರಕಟವಾದ 500 ಮಿಕ್ಕಿದ ಸಾಧಕರಲ್ಲಿ,ಓದುಗರ ಹಾಗೂ ಸಂಪಾದಕೀಯ ಮಂಡಳಿಯ ಆಯ್ಕೆಯಾಗಿ 2019 ರ ಸಾಲಿನ “ಬಂಟ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವೆಂಬರ್ 23 ರಂದು ಮೈಸೂರಿನ ಪುರಭವನದ ಜಸ್ಟಿಸ್ ಕೆ.ಎಸ್.ಹೆಗ್ಡೆ ವೇದಿಕೆ ಹಾಗೂ ಶ್ರೀ ಮಧುಕರ ಶೆಟ್ಟಿ ಸಭಾಂಗಣದಲ್ಲಿ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಗೌರವವನ್ನು ಸ್ವೀಕರಿಸಲಿದ್ದಾರೆ.

ಬಾಲ್ಯದಿಂದಲೇ ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಗೌತಮ್ ಶೆಟ್ಟಿ, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ , ವಾಲಿಬಾಲ್, ಕಬಡ್ಡಿ, ಲಾನ್ ಟೆನ್ನಿಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಹಳಷ್ಟು ಪ್ರಶಸ್ತಿಗಳನ್ನು ಜಯಿಸಿದ್ದರು.

80 ರ ದಶಕದಲ್ಲಿ ಹಿರಿಯ ನಿತ್ಯಾನಂದ ಮುನ್ನಾ ನೇತೃತ್ವದಲ್ಲಿ ಸ್ಥಾಪನೆಯಾದ” ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್”ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.ತಾವು ಭಾಗವಹಿಸಿದ ಪ್ರಥಮ ಪಂದ್ಯಾಕೂಟದಲ್ಲೇ ಪ್ರಶಸ್ತಿ ಬಾಚಿದ ಟೊರ್ಪೆಡೋಸ್ ಸಂಸ್ಥೆ ಹಿರಿಯ ಕ್ರಿಕೆಟಿಗರ ನೇತ್ರತ್ವದಲ್ಲಿ ರಾಜ್ಯದ ಶ್ರೇಷ್ಠ ತಂಡವಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿತ್ತು.ಹಿರಿಯರು ತೆರೆಮರೆಗೆ ಸರಿದಂತೆ ತಂಡವನ್ನು ಮುನ್ನಡೆಸುವ ನಾಯಕನ ಜವಾಬ್ದಾರಿ ಗೌತಮ್ ಶೆಟ್ಟಿಯವರ ಪಾಲಿಗೆ ಬಂದಂದಿನಿಂದ ಹಿಂತಿರುಗಿ ನೋಡಿಯೇ ಇಲ್ಲ.ನಾಯಕನಾಗಿ ಜವಾಬ್ದಾರಿಯುತ ಆಟವಾಡಿ, ಕರ್ನಾಟಕ ರಾಜ್ಯದ ಗಮನ ಸೆಳೆದು 100 ಕ್ಕೂ ಮಿಕ್ಕಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಜಯಿಸಿ ತನ್ನ ತಂಡವನ್ನು ರಾಜ್ಯದ ಅಗ್ರಗಣ್ಯ ಸಾಲಿಗೆ ಕೊಂಡೊಯ್ದಿದ್ದರು.90 ರ ದಶಕದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಡಬಲ್ ವಿಕೆಟ್ ಪಂದ್ಯಾಟದಲ್ಲೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಜೊತೆಯಾಗಿ ಭಾಗವಹಿಸಿದ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿ,ಶ್ರೇಷ್ಠ ಆರಂಭಿಕ ಜೋಡಿ ಗೌರವಕ್ಕೂ ಪಾತ್ರರಾಗಿದ್ದರು.

ಸಮಯ ಕಳೆದಂತೆ ಹಿರಿಯ ಕ್ರಿಕೆಟಿಗರು ನೇಪಥ್ಯಕ್ಕೆ ಸರಿದು,ತಂಡದ ಆಟಗಾರರು ಉದ್ಯೋಗ ನಿಮಿತ್ತ ದೂರದೂರಿಗೆ ತೆರಳಬೇಕಾದ ಸಂದರ್ಭದಲ್ಲಿ ಟೊರ್ಪೆಡೋಸ್ ಸಂಸ್ಥೆಯ ಚಟುವಟಿಕೆಗಳನ್ನು ಮೊಟಕುಗೊಳಿಸದೆ,ಏಕಾಂಗಿಯಾಗಿ ವಿಸ್ತರಿಸುವ ಪಣ ತೊಟ್ಟು 2015 ರಲ್ಲಿ ಮಂಗಳೂರಿನ ಹಳೆಯಂಗಡಿಯ ಲೈಟ್ ಹೌಸ್ ಬಳಿ ಸುಸಜ್ಜಿತ “ಟೊರ್ಪೆಡೋಸ್ ಇಂಡೋರ್ ಸ್ಪೋರ್ಟ್ಸ್‌ ಕ್ಲಬ್ ಸ್ಥಾಪಿಸಿದರು. ವುಡನ್ ಫ್ಲೋರ್ ಬ್ಯಾಡ್ಮಿಂಟನ್ ಕೋರ್ಟ್ ಗಳು,10 ಟೇಬಲ್ ಟೆನ್ನಿಸ್ ಟೇಬಲ್ ಗಳು, ಕ್ರಿಕೆಟ್ ನೆಟ್ ಪಿಚ್, ಹೊನಲು ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಿ ನುರಿತ ತರಬೇತುದಾರರಿಂದ ತರಬೇತಿ ಕೊಡಿಸಿ, ಖುದ್ದು ತಮ್ಮನ್ನು ತೊಡಗಿಸಿಕೊಂಡು ನೂರಾರು ಹೊಸ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತಂದು ಬೆಳೆಸಿದ್ದಾರೆ. ಈ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಇಶಾನಿ ಹರೀಶ್, ಆರ್ನಾ ಸದೋತ್ರಾ, ಪ್ರಶಸ್ತಿ ಶೆಟ್ಟಿ ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾ ಕೂಟದಲ್ಲಿ ದಾಖಲೆಯ ಜಯಗಳಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.

ಸಾತ್ವಿಕಾ ,ಪ್ರಶಾಂತಿ.ಜಿ‌.ಶೆಟ್ಟಿ, ವಿನಯ್, ಪ್ರಣವ್, ಹರ್ಷವರ್ಧನ್, ಚಿರಂತನ್, ಮಾಯಾಂಕ್  ಚಿರಂತನ್, ನಹಾಲಾ, ಆಯುಷ್ ಆರ್.ಶೆಟ್ಟಿ, ಪ್ರೀತೇಶ್ ಸಾಲ್ಯಾನ್, ಟ್ರಿವಿಯ ವೇಗಸ್ ಮತ್ತು ಮಾಹಿಷ್ಮತಿ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಜಯಿಸಿರುತ್ತಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ,ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗೆದ್ದು,ಮುಂದೆ ವಿದ್ಯಾರ್ಥಿಗಳು ಕ್ರೀಡಾ ಕೋಟಾದಡಿಯಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟ್ ಪಡೆದು ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಉಚಿತವಾಗಿ ಟಿ- ಶರ್ಟ್,ಶೂ,ರ‌್ಯಾಕೆಟ್ ಅಲ್ಲದೇ ಟೇಬಲ್ ಟೆನ್ನಿಸ್,ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸ್ಥಾಪನೆಯಾದ ಕೇವಲ 2 ವರ್ಷಗಳಲ್ಲಿ ಸಂಸ್ಥೆಯ ನಿರಂತರ ಕ್ರೀಡಾ ಸೇವೆಯನ್ನು ಗುರುತಿಸಿ 2017 ರ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗೌತಮ್ ಶೆಟ್ಟಿಯವರು ಪಾತ್ರರಾಗಿದ್ದರು.

ಮಂಗಳೂರಿನ M.R.P.L ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೌತಮ್ ಶೆಟ್ಟಿಯವರು, ಕ್ರೀಡಾ ಪಟುಗಳನ್ನು ಗುರುತಿಸಿ,ಪ್ರೋತ್ಸಾಹಿಸಿ ವಿದ್ಯಾಸಂಸ್ಥೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ನುರಿತ ಕ್ರೀಡಾ ತರಬೇತುದಾರ ಹಾಗೂ ಸಂಘಟಕರಾಗಿ ಏರ್ಪಡಿಸಿದ್ದ  ಕ್ರೀಡಾ ಸ್ಪರ್ಧೆಗಳು. ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 100 ಕ್ಕೂ ಮಿಕ್ಕಿ ವಿ.ವಿ‌ ಕ್ರೀಡಾ ಪಂದ್ಯಗಳು, ಅಂತಾರಾಷ್ಟ್ರೀಯ ಮಟ್ಟದ ಟಿ.ಪಿ.ಎಲ್-2017, 2006,2010 ರಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪಂದ್ಯಾಕೂಟ, 2018 ರಲ್ಲಿ ಪುರುಷರ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್, 2015-16 ರಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ, 2016 ರಿಂದ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಲೀಗ್ ಪಂದ್ಯಗಳು, 2002 ರಿಂದ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಟೂರ್ನಮೆಂಟ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್ ಗಳು, 2018ರಲ್ಲಿ ಅಂತರ್ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್, 2019 ರಲ್ಲಿ ಪೋಲಿಸರಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್, 2019 ರಲ್ಲಿ ಜಿ.ಎಸ್.ಬಿ ಟೊರ್ಪೆಡೋಸ್ ಟ್ರೋಫಿ, 2019 ರಲ್ಲಿ ಟಿ‌.ಪಿ.ಎಲ್ ಲೆದರ್ ಬಾಲ್ ಪಂದ್ಯಾಕೂಟ, ಇತ್ತೀಚೆಗಷ್ಟೇ ಹಾಕಿ‌ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನಾಚರಣೆಯಂದು ನಡೆದ ಅಂತರಾಷ್ಟ್ರೀಯ ಕ್ವಿಜ್ ಮಾಸ್ಟರ್ ರಿಂದ ಕ್ವಿಜ್ ಕಾರ್ಯಕ್ರಮ ಹೀಗೆ ಹಲವಾರು ಕ್ರೀಡಾ ಸ್ಪರ್ಧೆಗಳು ತಿಂಗಳಿಗೊಂದರಂತೆ ನಡೆಯುತ್ತಿದೆ.ಹಿರಿಯ ಕ್ರೀಡಾ ಪಟುಗಳ ಮೇಲೆ ಅಪಾರ ಗೌರವ ಹೊಂದಿರುವ ಗೌತಮ್ ಶೆಟ್ಟಿಯವರು ತಾವು ಏರ್ಪಡಿಸಿ ವಿಶೇಷ ಕ್ರೀಡಾ ಕಾರ್ಯಕ್ರಮಗಳಲ್ಲಿ ಗೌರವಿಸುವ ಪರಿಪಾಠವನ್ನು ಕ್ರೀಡಾ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿರುತ್ತಾರೆ.

ಗೌತಮ್ ಶೆಟ್ಟಿಯವರ ಕಠಿಣ ಪರಿಶ್ರಮ,ಶೃದ್ಧೆ ,ನಿಷ್ಠೆ, ದೂರದೃಷ್ಟಿಯ ಚಿಂತನೆಯಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿದೆ. ಅವುಗಳಲ್ಲಿ ಪ್ರಮುಖವಾದುದು- ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸುರತ್ಕಲ್ ಸಾರ್ವಜನಿಕ ಅಭಿನಂದನಾ ಸಮಿತಿ ಸನ್ಮಾನ, ಗಣೇಶಪುರ ಕೇಸರಿ ಫ್ರೆಂಡ್ಸ್, ಅಂತರಾಷ್ಟ್ರೀಯ ಬಂಟರ ಪ್ರೊ ಕಬಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತೋಕೂರು ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್, ಸೀಮಾ ಸ್ಪೋರ್ಟ್ಸ್ ಕ್ಲಬ್ ಸೂರಿಂಜೆ, ಮಿತ್ರಪಟ್ನ ಯುವಕ ಮಂಡಲ, ಲಯನ್ಸ್ ಕ್ಲಬ್ ಮೂಡಬಿದ್ರೆ, ರಾಮ ಲಕ್ಷ್ಮಣ ಕಂಬಳ ಉತ್ಸವ, ಚಾಲೆಂಜ್ ಕ್ರಿಕೆಟ್ ಕ್ಲಬ್, ಜಾನ್ಸನ್ ಕ್ರಿಕೆಟರ್ಸ್, ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಸಮಾರಂಭ ಕೋಡ್ದಬ್ದು, ನವದುರ್ಗಾ ಫ್ರೆಂಡ್ಸ್, ನವೋದಯ ಯುವಕ ಮಂಡಲ, ಮೀರಾ ಕ್ರಿಕೆಟರ್ಸ್, ಹಸನಬ್ಬ ಪ್ರಶಸ್ತಿ, ಮೂಕಾಂಬಿಕಾ ಹೈಸ್ಕೂಲ್ ಕೊಲ್ಲೂರು, ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಹೀಗೆ ನೂರಾರು ಸಂಸ್ಥೆಗಳು ಗೌತಮ್ ಶೆಟ್ಟಿಯವರ ಕ್ರೀಡಾ ಕ್ಷೇತ್ರದ ಶ್ರೇಷ್ಠ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿದೆ.

ಪರಿವಾರ ಸಮೇತ ಮಂಗಳೂರಿನಲ್ಲಿ ವಾಸವಿದ್ದು,ಪುತ್ರಿ ಪ್ರಶಸ್ತಿ ಹಾಗೂ ಪ್ರಥಮ್ ತಂದೆಯಿಂದಲೇ ಕೋಚಿಂಗ್ ಪಡೆದು ಸಂಸ್ಥೆಗೆ ಪ್ರಥಮ, ಪ್ರಶಸ್ತಿಗಳ ಗರಿ ಮೂಡಿಸಿರುತ್ತಾರೆ.

ಸಂಸ್ಥೆಯ ಉದ್ದೇಶ :  ಎಲ್ಲರಿಗೂ ಉತ್ತಮ ಸಂಘಟನಾತ್ಮಕ ಕ್ರೀಡಾ ತರಬೇತಿ ನೀಡುವ ಮೂಲಕ ಆತ್ಮವಿಶ್ವಾಸ ತುಂಬಿ,ಸ್ವಂತ ಬಲದ ಮೂಲಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಹಾಗೂ ಸೂಕ್ತ ಮಾರ್ಗದರ್ಶನದಿಂದ ಅವರನ್ನು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳಾಗಿ ಮಾರ್ಪಡಿಸಲು ಶಕ್ತಿಮೀರಿ ಪ್ರಯತ್ನಿಸುವುದೇ ಟೊರ್ಪೆಡೋಸ್ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆಯೆಂದು ಗೌತಮ್ ಶೆಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

– ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

five × 5 =

Latest news

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...
- Advertisement -spot_imgspot_img

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

Must read

- Advertisement -spot_imgspot_img

You might also likeRELATED
Recommended to you