3.1 C
London
Saturday, January 18, 2025
Homeಕ್ರಿಕೆಟ್ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತಕ್ಕೆ ಯಾವ ಅವಕಾಶವಿದೆ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತಕ್ಕೆ ಯಾವ ಅವಕಾಶವಿದೆ?

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತಕ್ಕೆ ಯಾವ ಅವಕಾಶವಿದೆ?

2023-2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು 2025 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಆಯೋಜಿಸುತ್ತದೆ. ಇನ್ನು 16 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಫೈನಲ್‌ಗೆ ಅರ್ಹತೆ ಪಡೆಯಲು 5 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಎರಡು ಬಾರಿ ಫೈನಲಿಸ್ಟ್ ಆಗಿರುವ ಭಾರತ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶಿಸಲು ಕಠಿಣ ಪೈಪೋಟಿ ನಡೆಸುತ್ತಿವೆ.

ಇನ್ನೂ 16 ಟೆಸ್ಟ್ ಪಂದ್ಯಗಳು ಬಾಕಿಯಿದ್ದು, ಯಾವ ಎರಡು ತಂಡಗಳು ಫೈನಲ್‌ಗೆ ಲಗ್ಗೆ ಇಡಲಿವೆ ಎಂಬುದು ಸ್ಪಷ್ಟವಾಗಿಲ್ಲ. ಯಾವುದೇ ತಂಡವು ಫೈನಲ್‌ನಲ್ಲಿ ಸ್ಥಾನವನ್ನು ಖಾತರಿಪಡಿಸಿಲ್ಲ. ಯಾರು ಫೈನಲ್‌ಗೆ ಹೋಗುತ್ತಾರೆ ಎಂಬುದನ್ನು ಸತತ ಪಂದ್ಯಗಳು ನಿರ್ಧರಿಸುತ್ತವೆ.

ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲು, ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಸುಲಭವಾದ ಮಾರ್ಗವನ್ನು ಹೊಂದಿತ್ತು. ಆದರೆ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಆದ ನಂತರ ಭಾರತ ತಂಡಕ್ಕೆ ಅವಕಾಶಗಳು ಕಡಿಮೆಯಾಗಿದೆ.

ಭಾರತ ತಂಡ 4-0 ಅಂತರದಲ್ಲಿ ಸರಣಿ ಗೆದ್ದರೆ ಮಾತ್ರ ಫೈನಲ್‌ಗೆ ಅರ್ಹತೆ ಪಡೆಯಬಹುದೆಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಹಿನ್ನೆಲೆಯಲ್ಲಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 295 ರನ್‌ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಭಾರತಕ್ಕೆ 4 ಪಂದ್ಯಗಳು ಬಾಕಿ ಉಳಿದಿದ್ದು, 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತಕ್ಕೆ ಫೈನಲ್ ಪ್ರವೇಶಿಸುವ ಅವಕಾಶ ಸಿಗಲಿದೆ.

Latest stories

LEAVE A REPLY

Please enter your comment!
Please enter your name here

two + fourteen =