17.3 C
London
Monday, May 13, 2024
Homeಕ್ರಿಕೆಟ್ವಿಪಿಎಲ್‌ ಕ್ರಿಕೆಟ್ ಜಿದ್ದಾಜಿದ್ದಿಯಲ್ಲಿ ಜಯದ ಮಾಲೆ ಆಲ್ಫಾ ಟ್ರೂಪರ್ಸ್ ಮುಂಬೈಗೆ!

ವಿಪಿಎಲ್‌ ಕ್ರಿಕೆಟ್ ಜಿದ್ದಾಜಿದ್ದಿಯಲ್ಲಿ ಜಯದ ಮಾಲೆ ಆಲ್ಫಾ ಟ್ರೂಪರ್ಸ್ ಮುಂಬೈಗೆ!

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಮೂಲ್ಕಿಯಲ್ಲಿ ನಡೆದ ಜಿ .ಎಸ್. ಬಿ ಸಮಾಜ ಬಾಂಧವರ  ವೊಳಲಂಕೆ ಟ್ರೋಫಿ 2023  ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂಬೈನ ಆಲ್ಫಾ ಟ್ರೂಪರ್ಸ್  ವಿಜೇತರಾಗಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಟೂರ್ನಿಯ ಫೈನಲ್ ಸೆಣಸಾಟದಲ್ಲಿ ಮುಂಬೈ ತಂಡ ಮಣಿಪಾಲದ  ಇರ್ವತ್ತೂರ್ ಸ್ಪೋರ್ಟ್ಸ್ ಕ್ಲಬ್  ತಂಡವನ್ನು ಮಣಿಸಿತು. ಈ ಪ್ರತಿಷ್ಠಿತ ಪಂದ್ಯಾಕೂಟದಲ್ಲಿ  ಭಾಗವಹಿಸಿದ ಎಲ್ಲಾ 12 ತಂಡಗಳು ಪಂದ್ಯಾವಳಿಯುದ್ದಕ್ಕೂ ಅಸಾಧಾರಣ ಪ್ರತಿಭೆ, ಕೌಶಲ್ಯ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದವು.
ವೊಳಲಂಕೆ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಮೂಲ್ಕಿ ಇವರ ಆಶ್ರಯದಲ್ಲಿ ನಡೆದಂತಹ ಈ ಪಂದ್ಯಾವಳಿಯು ಗಣ್ಯಾತಿಗಣ್ಯರ ಉಪಸ್ಥಿತಿ ಯಲ್ಲಿ ಎರಡು ದಿನಗಳ ಕಾಲ ಮುಲ್ಕಿಯ ವಿಜಯ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.ಅಸೋಸಿಯೇಷನ್ ನ ಅಧ್ಯಕ್ಷ ಎಂ. ವಿಶ್ವನಾಥ್ ಭಟ್, ಕಾರ್ಯದರ್ಶಿ ಪ್ರಭೋದ್. ಡಿ.ಕುಡ್ವ, ಕೋಶಾಧಿಕಾರಿ ರಮಾನಾಥ್ ಪೈ ಇವರುಗಳ ಮುತುವರ್ಜಿಯಲ್ಲಿ ಹಾಗೂ ಒಳಲಂಕೆ ಪೇಟೆಯ ಸಮಾಜ ಭಾಂದವರ ಸಹಕಾರದಿಂದಾಗಿ ಹಾಗೂ ಪ್ರಾಯೋಜಕರ ನೆರವಿನಿಂದಾಗಿ ಎರಡು ದಿನಗಳ ಕಾಲ  ಈ ಪಂದ್ಯಾಕೂಟ ಯಶಸ್ವಿಯಾಗಿ ಜರುಗಿತು. ಇದೇ ವೇಳೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು.
ಡಿಸೆಂಬರ್ 9 ಮತ್ತು 10 ರಂದು ಈ ಟೂರ್ನಮೆಂಟ್ ಮುಲ್ಕಿಯ ವಿಜಯ ಕಾಲೇಜು ಆಟದ ಮೈದಾನದಲ್ಲಿ ನಡೆಯಿತು. ಟೂರ್ನಮೆಂಟ್ ನಲ್ಲಿ ಪ್ರಥಮ ಬಹುಮಾನ ಗೆದ್ದ ತಂಡಕ್ಕೆ 2,34,567 ರೂಪಾಯಿ ಬಹುಮಾನ ಮತ್ತು ವಿ ಪಿ ಎಲ್ ಚಾಂಪಿಯನ್ ಟ್ರೋಫಿ ನೀಡಿ ಗೌರವಿಸಲಾಯಿತು. ದ್ವಿತೀಯ ಬಹುಮಾನ  1.45,678 ರೂಪಾಯಿ ಮತ್ತು ರನ್ನರ್ ಆಫ್ ಟ್ರೋಫಿ ನೀಡಲಾಯಿತು.  ತೃತೀಯ ಸ್ಥಾನ ಪಡೆದುಕೊಂಡ  ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್ ತಂಡಕ್ಕೆ 77,777 ರೂಪಾಯಿ ಮತ್ತು ಟ್ರೋಫಿಯನ್ನು ನೀಡಲಾಯಿತು. ಟೂರ್ನಿಯುದ್ದಕ್ಕೂ ಅದ್ಭುತ ಆಟದ ಪ್ರದರ್ಶನ ತೋರ್ಪಡಿಸಿದ ಮುಂಬೈ ತಂಡದ ಚಿರಾಗ್ ಶಾನಭಾಗ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಜೊತೆಗೆ 25,000 ನಗದು ಪಡೆದರು.  ಕೊನೆಯ ಓವರಿನಲ್ಲಿ 2 ಭರ್ಜರಿ ಸಿಕ್ಸರ್ ಬಾರಿಸಿ ತನ್ನ ತಂಡದ ಗೆಲುವಿಗೆ ಕಾರಣರಾದ ಮುಂಬೈ ತಂಡದ ಆಟಗಾರ ದತ್ತೇಶ್ ಪ್ರಭು ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಇರ್ವತ್ತೂರ್ ಸ್ಪೋರ್ಟ್ಸ್ ಕ್ಲಬ್ ನ ಅಮೇಯ್ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಮತ್ತು ಅದೇ ತಂಡದ ಸೂರಜ್ ಬೆಸ್ಟ್ ಬೌಲರ್ ಅವಾರ್ಡ್ ನ್ನು ಪಡೆದರು.  ಆಲ್ಫಾ ಟ್ರೂಪರ್ಸ್ ನಲ್ಲಿ ಆಡಿದ  ಮೂಲ್ಕಿಯ ಉದಯೋನ್ಮುಖ ಆಟಗಾರ ಆದೇಶ್ ಭಟ್ ಎಮರ್ಜಿಂಗ್ ಪ್ಲೇಯರ್ ಆಗಿ ಹೊರಹೊಮ್ಮಿದರು.
ಫೈನಲ್ ಪಂದ್ಯದ  ಬಳಿಕ ನಡೆದ  ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ  ಡಾ. ಪಿ. ವಿ.ಶೆಟ್ಟಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ, ಐಪಿಎಲ್ ಆಡಳಿತ ಮಂಡಳಿಯ ಸದಸ್ಯ ಮತ್ತು ಬಿಸಿಸಿಐನ ಕಾರ್ಯಕಾರಿ ಸಮಿತಿಯ ಸದಸ್ಯ ಇವರು ಭಾಗವಹಿಸಿ ಐಪಿಎಲ್ ನಲ್ಲಿ ನೀಡಲಾಗುವ ಆರೆಂಜ್ ಕ್ಯಾಪನ್ನು ಈ ಟೂರ್ನಿಯ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಮತ್ತು ಬೆಸ್ಟ್ ಬೌಲರ್ ಗೆ ನೀಡಿದರು. ಅಷ್ಟೇ ಮಾತ್ರವಲ್ಲದೆ ಟೂರ್ನಮೆಂಟ್ ನ ಮ್ಯಾನ್ ಆಫ್ ದ ಸೀರೀಸ್ ಆಟಗಾರನಿಗೆ ಸಚಿನ್ ತೆಂಡೂಲ್ಕರ್ ತಮ್ಮ ನಿವೃತ್ತಿಯ ಸಮಯದಲ್ಲಿ ತಯಾರಿ ಗೊಳಿಸಿದ ಸುಂದರವಾದ ಸ್ಮರಣಿಕೆಯನ್ನು ಹಸ್ತಾಂತರಿಸಿದರು. ಅದೇ ರೀತಿಯ ಮತ್ತೊಂದು ಸ್ಮರಣಿಕೆಯನ್ನು ಈ ಟೂರ್ನಮೆಂಟ್ ನ ರುವಾರಿಗಳು ಆದಂತಹ ಆಯೋಜಕರಾದ ಅಸೋಸಿಯೇಷನ್ ನ  ಅಧ್ಯಕ್ಷರಾದಂತಹ ವಿಶ್ವನಾಥ್ ಭಟ್ ಸಂಪಿಗೆ ಮನೆ ಇವರಿಗೆ ನೀಡಿದರು. ಟೂರ್ನಮೆಂಟ್ ನ ಜಯಶಾಲಿಯಾದ ಮುಂಬೈನ ಅಲ್ಫಾ ಟ್ರೂಪರ್ಸ್ ಗೆ ತನ್ನ ಪರವಾಗಿ 25,000 ರೂಪಾಯಿಯನ್ನು ಘೋಷಿಸಿದರು. ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ  ತಮ್ಮ ಹರ್ಷ ವ್ಯಕ್ತಪಡಿಸಿದರು. ಸುಸಂಘಟಿತ ವ್ಯಕ್ತಿಗಳನ್ನು ರೂಪಿಸುವಲ್ಲಿ ಕ್ರೀಡೆಯ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಅವರು ವಿಜೇತರು ಮತ್ತು ಭಾಗವಹಿಸಿದವರನ್ನುಅಭಿನಂದಿಸಿದರು, ಆಟದ ಬಗ್ಗೆ ಅವರ ಉತ್ಸಾಹವನ್ನು ಶ್ಲಾಘಿಸಿದರು.
ದುರದೃಷ್ಟವಶಾತ್ ಶನಿವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯ ಕಾರಣ ಮೈದಾನವು ಸಂಪೂರ್ಣವಾಗಿ ಹದಗೆಟ್ಟಿತ್ತು. ಆದರೆ ಭಾನುವಾರ ಎಲ್ಲಾ ಸ್ವಯಂ ಸೇವಕರು ಒಟ್ಟು ಸೇರಿ ಮೈದಾನವನ್ನು ಪುನಃ ಹೊಸದಾಗಿ ಸರಿಪಡಿಸಿ ಸಿದ್ಧಗೊಳಿಸಿ ಪಂದ್ಯಾವಳಿಯನ್ನು ಮತ್ತೆ ಮರುಜೀವಗೊಳಿಸಿದ ಪರಿಶ್ರಮವು ಎಲ್ಲಾ ತಂಡದ ಮಾಲೀಕರ ಮತ್ತು ಆಟಗಾರರ ಮೆಚ್ಚುಗೆಗೆ ಪಾತ್ರವಾಯಿತು. ಪ್ರೇಕ್ಷಕರು ಕೂಡ ಈ  ಭವ್ಯವಾದ ಟೂರ್ನಮೆಂಟನ್ನು ಆಯೋಜಿಸಿದ ಸಂಘಟಕರನ್ನು ಶ್ಲಾಘಿಸಿದರು.
”ಭಾರೀ ಮಳೆಯ ಅಡೆತಡೆಗಳನ್ನು ತಿರುಗಿಸಲು ಮೈದಾನದ ಅನಿರೀಕ್ಷಿತ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ಸಹಾಯ ಮಾಡಿದ ಆಟಗಾರರು ಮತ್ತು ಪ್ರೇಕ್ಷಕರಿಗೆ ನಾವು ಅಮೂಲ್ಯವಾಗಿ ಕೃತಜ್ಞರಾಗಿರುತ್ತೇವೆ. ನಿಮ್ಮ ಸಹಕಾರವು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ ಮಾತ್ರವಲ್ಲದೆ ನಮ್ಮ ಪಂದ್ಯಾವಳಿಯ ಯಶಸ್ಸನ್ನು ಖಚಿತಪಡಿಸಿದೆ ಮತ್ತು ಈ ಪಂದ್ಯಾವಳಿಯನ್ನು ನಿಜವಾಗಿಯೂ ಮರೆಯಲಾಗದಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು” ಎಂದು ಆಯೋಜಕರು ಸಂತಸ  ವ್ಯಕ್ತಪಡಿಸಿದ್ದಾರೆ.
✍🏼 ಸುರೇಶ್ ಭಟ್, ಮೂಲ್ಕಿ
ವಿ ಪಿ ಎಲ್ ವ್ಯಾಖ್ಯಾನಕಾರ ಮತ್ತು
ಸ್ಪೋರ್ಟ್ಸ್ ಕನ್ನಡ ಪ್ರತಿನಿಧಿ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

two × 2 =