ಬೆಂಗಳೂರು-ಇಲ್ಲಿನ ಕುಡ್ಲುಗೇಟ್ ಬಳಿಯ ಐಕ್ರಾ ಗೇಮ್ಸ್ ವಿಲೇಜ್ ಹುಲ್ಲು ಹಾಸಿನ ಮೈದಾನದಲ್ಲಿ ಅದ್ಧೂರಿಯ ಕ್ರಿಕೆಟ್ ಹಬ್ಬ ಶೆಫ್ ಟಾಕ್ ಪ್ರೀಮಿಯರ್ ಲೀಗ್ ಸೀಸನ್ 4 ಪಂದ್ಯಾಟ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಡಾ.ಗೋವಿಂದ
ಬಾಬು ಪೂಜಾರಿಯವರು
“ಪರರ ಕಷ್ಟಕ್ಕೆ ನೆರವಾದರೆ,ನಮ್ಮ ಕಷ್ಟದ ಸಮಯದಲ್ಲಿ ನಮಗೆ ಯಾರಾದರೂ ಯಾವುದೋ ರೂಪದಲ್ಲಿ ನೆರವಾಗುತ್ತಾರೆ.
ಮನೋಜ್ ಸಹಿತ ಕಂಪೆನಿಯಲ್ಲಿ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರಿದ್ದೀರಿ ಮುಂದಿನ ದಿನಗಳಲ್ಲಿ ಕಂಪೆನಿಯ ಆಯ್ದ ಪ್ರತಿಭೆಗಳನ್ನು ಒಗ್ಗೂಡಿಸಿ ರಾಜ್ಯ ಮಟ್ಟದಲ್ಲೂ ತಂಡವನ್ನು ಕಟ್ಟುವುದಾಗಿ ತಿಳಿಸಿದರು.“
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಶ್ರೀಮತಿ ಮಾಲತಿ ಗೋವಿಂದ ಬಾಬು ಪೂಜಾರಿ, ಸುಭಾಷ್ ಮಣಿಪಾಲ್ ಹಾಸ್ಪಿಟಲ್,ಕೃಷ್ಣ ಪೂಜಾರಿ ಶ್ರೀ ಮಾತಾ ಸಾಗರ್ ಹೋಟೆಲ್,ರಘುರಾಮ್ ಶೆಟ್ಟಿ ಶ್ರೀ ಉಡುಪಿ ಉಪಹಾರ್,ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ ಉಪಸ್ಥಿತರಿದ್ದರು.
ಟೀಮ್ 18 ಸ್ಟಾರ್ಸ್ C.P.L-4 ಚಾಂಪಿಯನ್ಸ್
ಶೆಫ್ ಟಾಕ್ ಕಂಪೆನಿಯ ನೌಕರರನ್ನು ಒಳಗೊಂಡ ಒಟ್ಟು 10 ತಂಡಗಳು ಭಾಗವಹಿಸಿದ ಈ ಪಂದ್ಯಾಟದ ಫೈನಲ್ ನಲ್ಲಿ 18 ಸ್ಟಾರ್ಸ್ ತಂಡ, ಚಾಲೆಂಜರ್ಸ್ ತಂಡವನ್ನು 15 ರನ್ ಗಳ ಅಂತರದಲ್ಲಿ ಮಣಿಸುವ ಮುಖಾಂತರ 2ನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟ್ ಮಾಡಿದ 18 ಸ್ಟಾರ್ಸ್ ತಂಡ ನಿಗದಿತ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ್ದ ಚಾಲೆಂಜರ್ಸ್ ತಂಡ ನಿಗದಿತ 6 ಓವರ್ ಗಳಲ್ಲಿ 30 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಗೋವಿಂದ ಬಾಬು ಪೂಜಾರಿ ನಾಯಕತ್ವದ 18 ಸ್ಟಾರ್ಸ್ ತಂಡ 15 ರನ್ ಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಪಂದ್ಯಾವಳಿಯಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ ಕೌಶಿಕ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಹಾಗೆ ಪಂದ್ಯಾವಳಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಮನೋಜ್ ಬೆಸ್ಟ್ ಬ್ಯಾಟ್ಸ್ಮನ್ ಆಗಿ ಹೊರ ಹೊಮ್ಮಿದರು ಮತ್ತು ಉತ್ತಮ ಬೌಲಿಂಗ್ ಲಯದಲ್ಲಿದ್ದ ಚೇತನ್ ಬೆಸ್ಟ್ ಬೌಲರ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸರಣಿಯುದ್ದಕ್ಕೂ ಉತ್ತಮ ಕ್ಷೇತ್ರ ರಕ್ಷಣೆ ತೋರ್ಪಡಿಸಿದ ರೋಷನ್ ಬೆಸ್ಟ್ ಫಿಲ್ಡರ್ ಪ್ರಶಸ್ತಿಗೆ ಭಾಜನರಾದರು. ಇನ್ನು ಎಸ್ ಎನ್ ಜಿ ತಂಡ ಫೇರ್ ಪ್ಲೇ ಪ್ರಶಸ್ತಿಯನ್ನು ಪಡೆದುಕೊಂಡಿತು.
“ಕರಾವಳಿ ಸಿರಿ ಕ್ಲಬ್” ಕಾರ್ಯಕ್ರಮದ ಸಂಯೋಜನೆಯ ಸಂಪೂರ್ಣ ಹೊಣೆ ಹೊತ್ತು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿ ಪಂದ್ಯಾಟದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಟಾರ್ ವರ್ಟೆಕ್ಸ್ Sportskannadatv ಯೂಟ್ಯೂಬ್ ಲೈವ್ ಚಾನೆಲ್ ಮೂಲಕ ಸಹಸ್ರಾರು ಮಂದಿ ಪಂದ್ಯಾಟ ವೀಕ್ಷಿಸಿದರೆ,ಅವಿನಾಶ್ ಯಡೂರು ಮತ್ತು ವಿನಾಯಕ್ ವೀಕ್ಷಕ ವಿವರಣೆ ಹಾಗೂ ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಪ್ರೀತಮ್ ಹೆಬ್ಬಾರ್ ಮತ್ತು ಪ್ರವೀಣ್ ಹೆಬ್ಬಾರ್ ತೀರ್ಪುಗಾರರಾಗಿ ಭಾಗವಹಿಸಿದರು.