ವಿಜಯ್ ಹಜಾರೆ ಟ್ರೋಫಿ: ನಾಳೆ ಕರ್ನಾಟಕ Vs ಕರುಣ್ ನಾಯರ್ ಫೈನಲ್
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಫೈನಲ್ ಪಂದ್ಯ ನಾಳೆ (ಜನವರಿ 18) ನಡೆಯಲಿದ್ದು, ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಮತ್ತು ಕರುಣ್ ನಾಯರ್ ಸಾರಥ್ಯದ ವಿದರ್ಭ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ಕರ್ನಾಟಕ ತಂಡ ಸೆಮಿಫೈನಲ್’ನಲ್ಲಿ ಬರೋಡ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ರೆ, ವಿದರ್ಭ ತಂಡ ಸೆಮೀಸ್’ನಲ್ಲಿ ಮಹಾರಾಷ್ಟ್ರ ವಿರುದ್ಧ ಗೆದ್ದು ಫೈನಲ್ ತಲುಪಿದೆೆ.
ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಫೈನಲ್ ಕರ್ನಾಟಕ ಮತ್ತು ಕರುಣ್ ನಾಯರ್ ನಡುವಿನ ಫೈಟ್. 2022ರಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಕರುಣ್ ನಂತರ ವಿದರ್ಭ ತಂಡ ಸೇರಿ ಈಗ ತಂಡದ ನಾಯಕನಾಗಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ವಿದರ್ಭ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿ 2024-25: ಕರುಣ್ ನಾಯರ್ ಬ್ಯಾಟಿಂಗ್
ಇನ್ನಿಂಗ್ಸ್: 07
ರನ್: 752
ಸರಾಸರಿ: 762
ಶತಕ: 05
ವಿಜಯ್ ಹಜಾರೆ ಟ್ರೋಫಿ 2024-25: ಮಯಾಂಗ್ ಅಗರ್ವಾಲ್ ಬ್ಯಾಟಿಂಗ್
ಇನ್ನಿಂಗ್ಸ್: 09
ರನ್: 619
ಸರಾಸರಿ: 103.17
ಶತಕ: 04