ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಫೈನಲ್-16ನಲ್ಲಿ ಸ್ಥಾನ ಪಡೆದ ಅಭಿಲಾಷ್ ಶೆಟ್ಟಿ
ಉಡುಪಿಯ ಕೋಟಾದ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಪ್ರಕಟಿಸಲಾಗಿರುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರತಿಭಾನ್ವಿತ ಎಡಗೈ ಮಧ್ಯಮ ವೇಗಿ ಅಭಿಲಾಷ್ ಶೆಟ್ಟಿ ಈ ವರ್ಷ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದು, ಅನುಭವಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪಂದ್ಯಗಳು ಡಿಸೆಂಬರ್ 21ರಿಂದ ಜನವರಿ 5ರವರೆಗೆ ಗುಜರಾತ್’ನ ಅಹ್ಮದಾಬಾದ್’ನಲ್ಲಿ ನಡೆಯಲಿವೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ಕರ್ನಾಟಕ ತಂಡ
1. ಮಯಾಂಕ್ ಅಗರ್ವಾಲ್ (ನಾಯಕ)
2. ಎಸ್‌ಜೆ ನಿಕಿನ್ ಜೋಸ್
3. ಅನೀಶ್ ಕೆವಿ
4. ಸ್ಮರಣ್ ಆರ್.
5. ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್)
6. ಅಭಿನವ್ ಮನೋಹರ್
7. ಶ್ರೇಯಸ್ ಗೋಪಾಲ್ (ಉಪನಾಯಕ)
8. ಹಾರ್ದಿಕ್ ರಾಜ್
9. ವೈಶಾಖ್ ವಿಜಯ ಕುಮಾರ್
10. ಕೌಶಿಕ್ ವಿ.
11. ವಿದ್ಯಾಧರ್ ಪಾಟೀಲ್
12. ಕಿಶನ್ ಎಸ್ ಬೆದಾರೆ
13. ಅಭಿಲಾಶ್ ಶೆಟ್ಟಿ
14. ಮನೋಜ್ ಭಾಂಡಗೆ
15. ಪ್ರವೀಣ್ ದುಬೆ
16. ಲವ್‌ನಿತ್ ಸಿಸೋಡಿಯಾ (ವಿಕೆಟ್ ಕೀಪರ್)
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡದ ವೇಳಾಪಟ್ಟಿ ಡಿಸೆಂಬರ್ 21: ಕರ್ನಾಟಕ Vs ಮುಂಬೈ (ಅಹ್ಮದಾಬಾದ್)
ಡಿಸೆಂಬರ್ 23: ಕರ್ನಾಟಕ Vs ಪುದುಚೇರಿ (ಅಹ್ಮದಾಬಾದ್)
ಡಿಸೆಂಬರ್ 26: ಕರ್ನಾಟಕ Vs ಪಂಜಾಬ್ (ಅಹ್ಮದಾಬಾದ್)
ಡಿಸೆಂಬರ್ 28: ಕರ್ನಾಟಕ Vs ಅರುಣಾಚಲ ಪ್ರದೇಶ (ಅಹ್ಮದಾಬಾದ್)
ಡಿಸೆಂಬರ್ 31: ಕರ್ನಾಟಕ Vs ಹೈದರಾಬಾದ್ (ಅಹ್ಮದಾಬಾದ್)
ಜನವರಿ 03: ಕರ್ನಾಟಕ Vs ಸೌರಾಷ್ಟ್ರ (ಅಹ್ಮದಾಬಾದ್)
ಜನವರಿ 05: ಕರ್ನಾಟಕ Vs ನಾಗಾಲ್ಯಾಂಡ್ (ಅಹ್ಮದಾಬಾದ್)