Action Replayಮನೆ ನಿರ್ವಹಣೆ ಜವಾಬ್ದಾರಿ ಮೂಡಿಸಿದ ವೆಂಕಟರಮಣ ಪಿತ್ರೋಡಿ ಮಾದರಿ ಪಂದ್ಯಾಕೂಟ

ಮನೆ ನಿರ್ವಹಣೆ ಜವಾಬ್ದಾರಿ ಮೂಡಿಸಿದ ವೆಂಕಟರಮಣ ಪಿತ್ರೋಡಿ ಮಾದರಿ ಪಂದ್ಯಾಕೂಟ

-

- Advertisment -spot_img

ಉದ್ಯಾವರ : ಸದಾ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿರುವ ವೆಂಕಟರಮಣ ಸ್ಪೋಟ್ರ್ಸ್ & ಕಲ್ಚರಲ್ ಕ್ಲಬ್ (ರಿ) ರವಿವಾರ ಕ್ರಿಕೆಟ್ ನ ಮೂಲಕ ಯುವ ಪೀಳಿಗೆಗೆ ಜವಾಬ್ದಾರಿ ಮೂಡಿಸುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಸಾಧಿಸಿದೆ ಎಂದು ಸ್ಪೋಟ್ರ್ಸ್ ಕನ್ನಡ ಕ್ರೀಡಾ ವೆಬ್ಸೈಟ್ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್ ಹೇಳಿದರು.

 

ಅವರು ಭಾನುವಾರ ಉದ್ಯಾವರ ಪರಿಸರದ ಯುವ ಪ್ರತಿಭೆಗಳನ್ನು ಅನ್ವೇಷಿಸುವ ಸಲುವಾಗಿ ವೆಂಕಟರಮಣ ಮಾನ್ಸೂನ್ ಟ್ರೋಫಿ-2019 ಉದ್ಯಾವರದ ಗ್ರಾಮ ಪಂಚಾಯತ್ ಅಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

22 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದಲ್ಲಿ ಲೀಗ್ ಹಂತದ ಹಣಾಹಣಿಗಳ ಬಳಿಕ ಅಂತಿಮವಾಗಿ ಫೈನಲ್ ನ ಪೈಪೋಟಿಯ ಕದನದಲ್ಲಿ ವೆಂಕಟರಮಣ ಃ ತಂಡ,ಕರಾವಳಿ ಕಡೆಕಾರ್ ತಂಡವನ್ನು ಪರಾಭವಗೊಳಿಸಿ ಆಕರ್ಷಕ ಟ್ರೋಫಿ ಸಹಿತ ತಂಡದ 13 ಆಟಗಾರರು ತಲಾ 25 ಕೆ.ಜಿ ಅಕ್ಕಿ ಹಾಗೂ ರನ್ನರ್ಸ್ ಕಡೆಕಾರ್ ತಂಡದ 13 ಆಟಗಾರರು ತಲಾ 15 ಕೆ.ಜಿ ಅಕ್ಕಿಯನ್ನು ಮನೆಗೆ ಕೊಂಡೊಯ್ದರು.

ವೈಯಕ್ತಿಕ ಪ್ರಶಸ್ತಿ ವಿಜೇತರಾದ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ನಿಖಿಲ್(ವಿ.ಎಸ್.ಸಿ),ಬೆಸ್ಟ್ ಬ್ಯಾಟ್ಸ್‍ಮನ್ ಯೋಗೀಶ್(ವಿ.ಎಸ್.ಸಿ), ಬೆಸ್ಟ್ ಬೌಲರ್ ಧನುಷ್ (ವಿ.ಎಸ್.ಸಿ),ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕರಾವಳಿ ಕಡೆಕಾರ್ ನ ಪ್ರಜ್ವಲ್ ತಲಾ 15 ಕೆ.ಜಿ ಅಕ್ಕಿ,ಹಾಗೂ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಆಟಗಾರರು15 ಕೆ.ಜಿ ಅಕ್ಕಿಯನ್ನು ಮನೆಗೆ ಕೊಂಡೊಯ್ದರು.

ಒಟ್ಟಾರೆ ಸುಮಾರು ಪ್ರಶಸ್ತಿಯಾಗಿ ಒಂದು ಟನ್ ಅಕ್ಕಿಯನ್ನು ವಿಜೇತರಿಗೆ ಹಸ್ತಾಂತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪೋಟ್ರ್ಸ್ ಕನ್ನಡ ಕ್ರೀಡಾ ವೆಬ್ಸೈಟ್ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್, ವೆಂಕಟರಮಣ ತಂಡದ ಅಧ್ಯಕ್ಷ ಮಲ್ಲೇಶ್ ಕುಮಾರ್, ಕ್ರೀಡಾ ಕಾರ್ಯದರ್ಶಿ ವಿಜಯ್ ಕೋಟ್ಯಾನ್, ಉಪಾಧ್ಯಕ್ಷ ನವೀನ್ ಸಾಲ್ಯಾನ್ ,ಗೌರವಾಧ್ಯಕ್ಷರು ಸತೀಶ್ ಕುಂದರ್, ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಗೋಪಾಲ್ ಅಮೀನ್, ಪ್ರಸ್ತುತ ಅಧ್ಯಕ್ಷ ವಾಸು ಸಾಲ್ಯಾನ್, ಯೋಗೀಶ್ ಪಿತ್ರೋಡಿ, ಗೌರವ ಸಲಹೆಗಾರರಾದ ಜಿತೇಂದ್ರ ಶೆಟ್ಟಿ, ತಂಡದ ನಾಯಕ ಶಿಸ್ತಿನ ಸಿಪಾಯಿ ಪ್ರವೀಣ್ ಪಿತ್ರೋಡಿ ಹಾಗೂ ಯುವ ಆಟಗಾರ ಡೆರಿನ್ ಉಪಸ್ಥಿತರಿದ್ದರು.

ವೀಕ್ಷಕ ವಿವರಣೆಕಾರರಾಗಿ ವಿನಯ್ ಉದ್ಯಾವರ ಸಹಕರಿಸಿದ್ದರು.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

three × two =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you