ಕರ್ನಾಟಕ ರಣಜಿ ತಂಡದಲ್ಲಿ ಉಡುಪಿ ಹುಡುಗ ಅಭಿಲಾಷ್ ಶೆಟ್ಟಿಗೆ ಸ್ಥಾನ

ಕರ್ನಾಟಕ ರಣಜಿ ತಂಡದಲ್ಲಿ ಉಡುಪಿ ಹುಡುಗ ಅಭಿಲಾಷ್ ಶೆಟ್ಟಿಗೆ ಸ್ಥಾನ

ಕರ್ನಾಟಕ ರಣಜಿ ತಂಡದಲ್ಲಿ ಉಡುಪಿ ಹುಡುಗ ಅಭಿಲಾಷ್ ಶೆಟ್ಟಿಗೆ ಸ್ಥಾನ

ಉಡುಪಿ ಜಿಲ್ಲೆಯ ಕೋಟ ಮೂಡು ಗಿಳಿಯಾರಿನ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 2025-26ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ತಂಡದ ರಣಜಿ ಅಭಿಯಾನ ಅಕ್ಟೋಬರ್ 15ರಿಂದ ರಾಜ್’ಕೋಟ್’ನಲ್ಲಿ ಆರಂಭವಾಗಿರುವ ಸೌರಾಷ್ಟ್ರ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ. ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ 15 ಮಂದಿ ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಕಳೆದೆರಡು ವರ್ಷ ವಿದರ್ಭ ಪರ ಆಡಿದ್ದ ಅನುಭವಿ ಆಟಗಾರ ಕರುಣ್ ನಾಯರ್ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದಾರೆ.

27 ವರ್ಷದ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 2024ರ ನವೆಂಬರ್ 6ರಂದು ಬೆಂಗಳೂರಿನಲ್ಲಿ ನಡೆದ ಬಂಗಾಳ ವಿರುದ್ಧದ ಪಂದ್ಯದ ಮೂಲಕ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಒಟ್ಟು 2 ರಣಜಿ ಪಂದ್ಯಗಳನ್ನಾಡಿರುವ ಅಭಿಲಾಷ್ ಶೆಟ್ಟಿ 7 ವಿಕೆಟ್ ಪಡೆದಿದ್ದಾರೆ. ಕರ್ನಾಟಕ ಪರ 7 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಅಭಿಲಾಷ್ ಶೆಟ್ಟಿ 17 ವಿಕೆಟ್’ಗಳನ್ನು ಪಡೆದಿದ್ದಾರೆ. 

ರಣಜಿ ಟ್ರೋಫಿ- 2025-26: ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ

ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೆ.ಎಲ್ ಶ್ರೀಜಿತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ವೈಶಾಖ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ., ನಿಕಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಅನೀಶ್ ಕೆ.ವಿ., ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ.

ಕೋಚ್: ಯರೇಗೌಡ

ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್

ಫೀಲ್ಡಿಂಗ್ ಕೋಚ್: ಶಬರೀಷ್ ಪಿ. ಮೋಹನ್

ಮ್ಯಾನೇಜರ್: ಎ.ರಮೇಶ್ ರಾವ್

ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಇರ್ಫಾನುಲ್ಲಾ ಖಾನ್

ಫಿಸಿಯೋ: ಅಭಿಷೇಕ್ ಕುಲಕರ್ಣಿ

ಪರ್ಫಾಮೆನ್ಸ್ ಅನಾಲಿಸ್ಟ್: ಗಿರಿ ಪ್ರಸಾದ್

ರಣಜಿ ಟ್ರೋಫಿ- 2025-26: ಕರ್ನಾಟಕ ತಂಡದ ವೇಳಾಪಟ್ಟಿ 

ಕರ್ನಾಟಕ Vs ಸೌರಾಷ್ಟ್ರ

ಸ್ಥಳ: ರಾಜ್ ಕೋಟ್

ಅಕ್ಟೋಬರ್ 15-18

ಕರ್ನಾಟಕ Vs ಗೋವಾ

ಸ್ಥಳ: ಶಿವಮೊಗ್ಗ

ಅಕ್ಟೋಬರ್ 25-28

ಕರ್ನಾಟಕ Vs ಕೇರಳ

ಸ್ಥಳ: ಮಂಗಳಪುರಂ

ನವೆಂಬರ್ 01-04

ಕರ್ನಾಟಕ Vs ಮಹಾರಾಷ್ಟ್ರ

ಸ್ಥಳ: ನಾಸಿಕ್

ನವೆಂಬರ್ 08-11

ಕರ್ನಾಟಕ Vs ಚಂಡೀಗಢ

ಸ್ಥಳ: ಹುಬ್ಬಳ್ಳಿ

ನವೆಂಬರ್ 16-19

ಕರ್ನಾಟಕ Vs ಮಧ್ಯಪ್ರದೇಶ

ಸ್ಥಳ: ಬೆಂಗಳೂರು

ಜನವರಿ 22-25

ಕರ್ನಾಟಕ Vs ಚಂಡೀಗಢ

ಸ್ಥಳ: ಪಂಜಾಬ್ 

ಜನವರಿ 29-ಫೆಬ್ರವರಿ 01

Leave a Reply

Your email address will not be published. Required fields are marked *