
ಹೊನ್ನಾವರದಲ್ಲಿ “ಯು.ಆರ್. ಸ್ಪೋರ್ಟ್ಸ್” ಹೊಸ ಕ್ರೀಡಾ ಅಂಗಡಿ ಉದ್ಘಾಟನೆ
ಹೊನ್ನಾವರ: ಕ್ರೀಡಾಭಿಮಾನಿಗಳಿಗೆ ಮತ್ತೊಂದು ಸುಸಂದರ್ಭ! ಮಣಿಪಾಲದಲ್ಲಿ ಯಶಸ್ವಿಯಾಗಿ “ಯು.ಆರ್. ಸ್ಪೋರ್ಟ್ಸ್” ನಡೆಸುತ್ತಿರುವ ಯು.ಆರ್ ಸ್ಪೋರ್ಟ್ಸ್ ಪಾಲುದಾರರಾದ ಪ್ರವೀಣ್ ಪಿತ್ರೋಡಿ ಮತ್ತು ದೇವರಾಜ್ ಸಾಲ್ಯಾನ್ ಇದೀಗ ಹೊನ್ನಾವರದಲ್ಲಿಯೂ ತಮ್ಮ ಶಾಖೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಹೊಸ ಅಂಗಡಿಯ ಉದ್ಘಾಟನಾ ಸಮಾರಂಭ 29 ಸೆಪ್ಟೆಂಬರ್ 2025, ಸೋಮವಾರ ಸಂಜೆ 4 ಗಂಟೆಗೆ ಭವ್ಯವಾಗಿ ನೆರವೇರಲಿದೆ.
ಈ ಸಂದರ್ಭದಲ್ಲಿ ಪ್ರವೀಣ್ ಪಿತ್ರೋಡಿ ಮತ್ತು ದೇವರಾಜ್ ಸಾಲ್ಯಾನ್ ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಿ, “ಹೊನ್ನಾವರದ ಕ್ರೀಡಾಭಿಮಾನಿಗಳಿಗೆ ಗುಣಮಟ್ಟದ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಹಾಗೂ ಸ್ಥಳೀಯ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಈ ಅಂಗಡಿ ಪ್ರಮುಖ ಪಾತ್ರವಹಿಸಲಿದೆ” ಎಂದು ಹೇಳಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ –
- ಡಾ. ಕಿರಣ್ ಬಳ್ಕೂರು(ಫ್ಯಾಮಿಲಿ ಫಿಜಿಷಿಯನ್, ಡಾ. ವಿ. ಕೆ.ಬಿ. ಬಳ್ಕೂರು ಮೆಮೊರಿಯಲ್ ಹಾಸ್ಪಿಟಲ್, ಹೊನ್ನಾವರ)
- ಶ್ರೀ ಸಿದ್ದರಾಮೇಶ್ವರ ಎಸ್. (ಪೊಲೀಸ್ ಇನ್ಸ್‌ಪೆಕ್ಟರ್, ಹೊನ್ನಾವರ)
- ಮೊಹಮ್ಮದ್ ಅಖೀಲ್ ಕ್ವಾಝಿ ( ಮಾಲಕರು, ಗೋಡ್ವಿನ್ ಸೈಕಲ್ ಸೆಂಟರ್ )
- ಡಾ. ಗೌತಮ್ ಬಳ್ಕೂರು (MS DNB FMIS, ಕನ್ಸಲ್ಟಂಟ್ ಗೈನಕಾಲಜಿಸ್ಟ್, ಡಾ. ವಿ. ಕೆ.ಬಿ. ಬಳ್ಕೂರು ಮೆಮೊರಿಯಲ್ ಹಾಸ್ಪಿಟಲ್, ಹೊನ್ನಾವರ)
- ಕೋಟ ರಾಮಕೃಷ್ಣ ಆಚಾರ್ಯ(ಸ್ಪೋರ್ಟ್ಸ್ ಕನ್ನಡ, ಉಡುಪಿ)
ದಿನಾಂಕ: 29.09.2025 (ಭಾನುವಾರ)
ಸಮಯ: ಸಂಜೆ 4.00
ಸ್ಥಳ: ಯು.ಆರ್. ಸ್ಪೋರ್ಟ್ಸ್, ಬಳ್ಕೂರು ಬಿಲ್ಡಿಂಗ್, ರಾ.ಹೆ 66, ಹೊನ್ನಾವರ





