ಮಾವಿನ ಹಣ್ಣಿನ ಬೃಂದಾವನವೆಂದೇ ಖ್ಯಾತಿ ಪಡೆದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಪ್ರಸಿದ್ಧ ಉದ್ಯಮಿ M.K.S ಗ್ರೂಪ್ ನ ಮಾಲೀಕ ನದೀಮ್ ಅಖ್ತರ್ ಹಾಗೂ S.A.S ಗ್ರೂಪ್ ನ ಮಾಲೀಕ ಶಾಮೀರ್ ಎಸ್.ಎ ಸಾರಥ್ಯದಲ್ಲಿ ನಡೆದ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ಸೀಸನ್ 2 ರ ಪ್ರಶಸ್ತಿಯನ್ನು ಕಾರ್ತಿಕ್ ರೆಡ್ಡಿ ಜಾಕಿ ನೇತೃತ್ವದ ಜಾಕಿ ಕ್ರಿಕೆಟ್ ಕ್ಲಬ್ ಜಯಿಸಿದೆ.
ಸತತ ಮೂರು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಸಾಗಿದ ಅತ್ಯಂತ ಅದ್ಧೂರಿಯ ಪಂದ್ಯಾವಳಿಯಲ್ಲಿ
ಬಲಿಷ್ಠ 8 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಸೆಣಸಾಡಿದ್ದು, ಲೀಗ್ ಹಂತದ ಪ್ರಬಲ ಪೈಪೋಟಿಗಳ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ನದೀಮ್ ಅಖ್ತರ್ ಮಾಲೀಕತ್ವದ ಸೈ ಬಾಯ್ಸ್ ತಂಡ ಫ್ರೆಂಡ್ಸ್ ಕ್ರಿಕೆಟರ್ಸ್ ನ್ನು ಹಾಗೂ ಜೆ.ಸಿ.ಸಿ ತಂಡ ಶಾಮೀರ್ ಮಾಲೀಕತ್ವದ ರೈಸಿಂಗ್ ಸ್ಟಾರ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿತ್ತು.
ಫೈನಲ್ ನಲ್ಲಿ ಜಾಕಿ ಕ್ರಿಕೆಟ್ ಕ್ಲಬ್ ನ ಸಂಘಟಿತ ಹೋರಾಟದ ಫಲವಾಗಿ ಸೈ ಬಾಯ್ಸ್ ತಂಡಕ್ಕೆ ಸೋಲುಣಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಜೆ.ಸಿ.ಸಿ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ ಸೈ ಬಾಯ್ಸ್ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರೆ,ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್ ಜಾನ್, ಬೆಸ್ಟ್ ಬೌಲರ್ ಮಾರ್ಕ್ ಮಹೇಶ್, ಫೈನಲ್ ನ ಪಂದ್ಯಶ್ರೇಷ್ಟ ಸ್ವಸ್ತಿಕ್ ಹಾಗೂ ಸರಣಿಯುದ್ದಕ್ಕೂ ಶ್ರೇಷ್ಠ ಸವ್ಯಸಾಚಿ ನಿರ್ವಹಣೆ ತೋರಿದ ಸಾಗರ್ ಭಂಡಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂದ್ಯಾವಳಿಗೆ ಕರ್ನಾಟಕ ವಿಧಾನ ಸಭಾ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಚಿತ್ರನಟರಾದ ಅಂಜಾನ್,ಡಾಲಿ ಧನಂಜಯ್,ಕೆ.ಜಿ.ಎಫ್ ಖ್ಯಾತಿಯ ಗರುಡಾ ರಾಮ್,ಇಂಡೋರ್ ನ ಖ್ಯಾತ ಉದ್ಯಮಿ ಹ್ಯಾಪಿ,ಶ್ರೀನಿವಾಸಪುರದ ವೃತ್ತ ನಿರೀಕ್ಷಕರು
ರಾಘವೇಂದ್ರ,ರಾಜಕೀಯ ಧುರೀಣರಾದ ಕೆ.ಕೆ.ಮಂಜು, ಪ್ರಸಿದ್ಧ ಡ್ರಮ್ಮರ್ ದೇವಾ ಪಂದ್ಯಾವಳಿಯ ರಂಗನ್ನು ಹೆಚ್ಚಿಸಿದ್ದರು.
ಅತ್ಯಂತ ಯಶಸ್ಸು ಕಂಡ ಶ್ರೀನಿವಾಸಪುರದ ಈ ಪಂದ್ಯಾಕೂಟಕ್ಕಾಗಿ ಐ.ಪಿ.ಎಲ್,ಪ್ರೊ ಕಬಡ್ಡಿ ಕಾಮೆಂಟೇಟರ್ ನವೀನ್ ಶೌರಿ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ,ಹಿರಿಯ ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಕೋಟ ಶಿವನಾರಾಯಣ ಐತಾಳ್,ಹಿಂದಿ ಕಾಮೆಂಟೇಟರ್ ಸ್ಟಾರ್ ನವಾಝ್,ಸೈಯದ್ ಗುರುಕಂಬ್ಳ ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ ಭಾಗವಹಿಸಲಿದ್ದರು.
ಸಚಿನ್ ಮಹಾದೇವ್ ಮಾಲೀಕತ್ವದ M.Sports ಯೂ ಟ್ಯೂಬ್ ಚಾನೆಲ್ ನ ಪ್ರಮುಖ ಟೆಕ್ನಿಷಿಯನ್
ಓಂಕಾರ್ ಪಾಟೀಲ್ ಸಾರಥ್ಯದಲ್ಲಿ ನಡೆದ ಪಂದ್ಯಾವಳಿಯ ನೇರ ಪ್ರಸಾರವನ್ನು ಸಹಸ್ರಾರು ಕ್ರೀಡಾಭಿಮಾನಿಗಳು ವೀಕ್ಷಿಸಿದರು.