ಕೋಲಾರದಲ್ಲಿ ಮಾರ್ಚ್ 26 ರಿಂದ 29 ರ ತನಕ ನಡೆಯಲಿರುವ 4 ದಿನಗಳ ಕ್ರಿಕೆಟ್ ಪಂದ್ಯಾವಳಿ Y.S.C ಚಾಂಪಿಯನ್ಸ್ ಲೀಗ್ ಪ್ರಯುಕ್ತ ಇಂದು ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕೋಲಾರದ ಪ್ರಸಿದ್ಧ M.K.S ಗ್ರೂಪ್ ನ ಮಾಲೀಕರು ಹಾಗೂ S.P.L ಪಂದ್ಯಾವಳಿಯ ಪ್ರಮುಖ ರೂವಾರಿ ನದೀಮ್ ಅಖ್ತರ್ 46,000 ಪಾಯಿಂಟ್ಸ್ ಗಳನ್ನು ಪಡೆದು,M.S.A ತಂಡದ ಪರವಾಗಿ ಅತ್ಯಧಿಕ ಮೊತ್ತದ ಬಿಡ್ ದಾಖಲೆ ಬರೆದರು.
ಕಳೆದ 6 ತಿಂಗಳ ಅವಧಿಯಲ್ಲಿ 2 ಬಾರಿ ಕೋಲಾರ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ಪಂದ್ಯಾವಳಿ ಸಂಘಟಿಸಿ,ದಾಖಲೆಯ ಯಶಸ್ಸು ಪಡೆದು,ಅನೇಕ ಯುವ ಪ್ರತಿಭೆಗಳನ್ನು ರಾಜ್ಯಕ್ಕೆ ನದೀಮ್ ಅಖ್ತರ್ ರವರು ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ನ ಪ್ರಥಮ ಆವೃತ್ತಿಯಲ್ಲಿ ನದೀಮ್ ಅಖ್ತರ್ ನಾಯಕತ್ವದಲ್ಲಿ ಚಾಂಪಿಯನ್ಸ್ ಆಗಿ ಮೂಡಿ ಬಂದಿದ್ದ
ಸೈ ಬಾಯ್ಸ್ ತಂಡ ಈ ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದಿತ್ತು.
ತಂಡದಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಬೀಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ.