ಕ್ರಿಕೆಟ್ಶತಕದೊಂದಿಗೆ ಸೌತ್ ಆಫ್ರಿಕಾವನ್ನು ಧ್ವಂಸ ಮಾಡಿದ ತಿಲಕ್ ವರ್ಮಾ...

ಶತಕದೊಂದಿಗೆ ಸೌತ್ ಆಫ್ರಿಕಾವನ್ನು ಧ್ವಂಸ ಮಾಡಿದ ತಿಲಕ್ ವರ್ಮಾ !

-

- Advertisment -spot_img

ಶತಕದೊಂದಿಗೆ ಸೌತ್ ಆಫ್ರಿಕಾವನ್ನು ಧ್ವಂಸ ಮಾಡಿದ ತಿಲಕ್ ವರ್ಮಾ !

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್, ತಿಲಕ್ ವರ್ಮಾ (56 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ ಔಟಾಗದೆ 107) ವಿಧ್ವಂಸಕ ಶತಕ ಸಿಡಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ತಿಲಕ್ ವರ್ಮಾ ಜತೆಗೂಡಿ ಅಭಿಷೇಕ್ ಶರ್ಮಾ (25 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 50) ಅರ್ಧಶತಕ ಗಳಿಸಿದರು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್(0) ಮತ್ತೊಮ್ಮೆ ಡಕ್ ಆಗಿ ಹಿಂತಿರುಗಿದರು. ನಂತರ ಕ್ರೀಸ್ ಗೆ ಬಂದ ತಿಲಕ್ ವರ್ಮಾ ಹಾಗೂ ಅಭಿಷೇಕ್ ಶರ್ಮಾ ಆಕ್ರಮಣಕಾರಿ ಆಟವಾಡಿದರು. ತಿಲಕ್ ಬರುತ್ತಿದ್ದಂತೆ ಸತತ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು. ಅಭಿಷೇಕ್ ಶರ್ಮಾ ಕೂಡ ಬೌಂಡರಿ ಬಾರಿಸಿದ್ದು, ಜೋರಾಗಿ ಆಡಿದ ಈ ಜೋಡಿ ವೇಗವಾಗಿ ರನ್ ಗಳಿಸಿತು.

ಚೊಚ್ಚಲ ಆಟಗಾರ ರಮಣದೀಪ್ ಸಿಂಗ್ ಅವರು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದರು. ತಿಲಕ್ ವರ್ಮಾ ಏಕಾಂಗಿಯಾಗಿ ನಿಂತು ಪಂದ್ಯವನ್ನು ಭಾರತ ತಂಡದ ಪರವಾಗಿ ತಿರುಗಿಸಿದರು. ಅವರ ಸಾಹಸದಿಂದಾಗಿ ಭಾರತ ತಂಡದ ಸ್ಕೋರ್ ಉತ್ತುಂಗಕ್ಕೇರಿತು. ಇದು ತಿಲಕ್ ವರ್ಮಾ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಮೊದಲ ಶತಕವಾಗಿದೆ.

ಆ ಬಳಿಕ 220 ರನ್ ಗಳಿಸಿದರೆ ಗೆಲ್ಲುವ ಉದ್ದೇಶದಿಂದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆರಂಭಿಸಿತು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಲು ಯತ್ನಿಸಿದ ದಕ್ಷಿಣ ಆಫ್ರಿಕಾ ತಂಡ ಒಂದರ ಹಿಂದೊಂದರಂತೆ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ದ.ಆಫ್ರಿಕಾದ ಆಟಗಾರರು ಅವಿರತ ಹೋರಾಟ ನಡೆಸಿದರು.ಕೊನೆಯದಾಗಿ ಆಗಮಿಸಿದ ದಕ್ಷಿಣ ಆಫ್ರಿಕಾ ಆಟಗಾರ ಜಾನ್ಸೆನ್ ಭಾರತೀಯ ಬೌಲರ್‌ಗಳನ್ನು ಕಂಗಾಲಾಗಿಸಿದರು.ಆದರೆ ಕೊನೆಯ ಓವರ್‌ನಲ್ಲಿ ಅರ್ಷಿದೀಪ್ ಸಿಂಗ್ ಅವರ ಅಮೋಘ ಎಸೆತದಿಂದ ಔಟಾದರು. ಅದರಲ್ಲಿ ಭಾರತ ತಂಡದ ಗೆಲುವು ಖಚಿತವಾಯಿತು

3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಸರಣಿಯ ಮುಂದಿನ ಪಂದ್ಯ ನಾಳೆ (ನ.15) ನಡೆಯಲಿದೆ.

LEAVE A REPLY

Please enter your comment!
Please enter your name here

17 + seven =

Latest news

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ ಮಂಗಳೂರು/ಬೆಂಗಳೂರು: ಪ್ರತಿಷ್ಠಿತ ಆರ್‌ಪಿ ಟ್ರೋಫಿ 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ಅಕುಲ್ ಟೂರಿಸಂ...

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...
- Advertisement -spot_imgspot_img

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

Must read

- Advertisement -spot_imgspot_img

You might also likeRELATED
Recommended to you