ಕ್ರಿಕೆಟ್ಇರಾನಿ ಕಪ್ ಪಂದ್ಯದಲ್ಲಿ ಶತಕ ಬಾರಿಸಿದ ಕರಾವಳಿ ಮೂಲದ ಕೋಟ್ಯಾನ್!

ಇರಾನಿ ಕಪ್ ಪಂದ್ಯದಲ್ಲಿ ಶತಕ ಬಾರಿಸಿದ ಕರಾವಳಿ ಮೂಲದ ಕೋಟ್ಯಾನ್!

-

- Advertisment -spot_img

ರಣಜಿ ಚಾಂಪಿಯನ್ ಮುಂಬೈ ತಂಡ, 15ನೇ ಬಾರಿ ಇರಾನಿ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ – ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂಬೈ ಇರಾನಿ ಕಪ್’ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಮುಂಬೈ ತಂಡದ ಎರಡನೇ ಇನ್ನಿಂಗ್ಸ್’ನಲ್ಲಿ ಮಂಗಳೂರು ಮೂಲದ ಆಟಗಾರ ತನುಷ್ ಕೋಟ್ಯಾನ್ ಅಮೋಘ ಶತಕದೊಂದಿಗೆ ಮಿಂಚಿದ್ದಾರೆ. ಮುಂಬೈ ಪರ ಆಡುತ್ತಿರುವ ತನುಷ್ ಕೋಟ್ಯಾನ್ 2ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 150 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 114 ರನ್ ಗಳಿಸಿದರು.

25 ವರ್ಷದ ತನುಷ್ ಕೋಟ್ಯಾನ್ ಪ್ರತಿಭಾವಂತ ಆಲ್ರೌಂಡರ್. ಆಫ್ ಸ್ಪಿನ್ನರ್ ಆಗಿರುವ ತನುಷ್ ಉತ್ತಮ ಬ್ಯಾಟ್ಸ್’ಮನ್ ಕೂಡ ಹೌದು.
2018ರಲ್ಲಿ ಮುಂಬೈ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದದ ತನುಷ್ ಕೋಟ್ಯಾನ್ ಇಲ್ಲಿವರೆಗೆ ಒಟ್ಟು 30 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. 30 ಪಂದ್ಯಗಳಿಂದ 88 ವಿಕೆಟ್’ಗಳನ್ನು ಪಡೆದಿರುವ ತನುಷ್ 2 ಶತಕಗಳು ಹಾಗೂ 13 ಅರ್ಧಶತಕಗಳ ಸಹಿತ 45.34ರ ಸರಾಸರಿಯಲ್ಲಿ 1451 ರನ್ ಗಳಿಸಿದ್ದಾರೆ. 19 ಲಿಸ್ಟ್ ಎ ಪಂದ್ಯಗಳನ್ನಾಡಿರುವ ತನುಷ್ ಕೋಟ್ಯಾನ್ 20 ವಿಕೆಟ್ ಹಾಗೂ 90 ರನ್ ಗಳಿಸಿದ್ದಾರೆ. ಐಪಿಎಲ್ ಸಹಿತ ಆಡಿರುವ 24 ಟಿ20 ಪಂದ್ಯಗಳಿಂದ 24 ವಿಕೆಟ್ ಪಡೆದಿರುವ ತನುಷ್ ಕೋಟ್ಯಾನ್ 86 ರನ್ ಗಳಿಸಿದ್ದಾರೆ.

ತನುಷ್ ಕೋಟ್ಯಾನ್ ಹುಟ್ಟಿದ್ದು ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ. ಅವರ ತಂದೆ ಕರುಣಾಕರ್ ಕೋಟ್ಯಾನ್ ಮಂಗಳೂರು ಮೂಲದವರು. ಕರಾವಳಿಯಿಂದ ಮುಂಬೈಗೆ ಹೋಗಿ ಅಲ್ಲೇ ನೆಲೆಸಿರುವ ಕರುಣಾಕರ್, ಪುತ್ರನನ್ನು ಕ್ರಿಕೆಟಿಗನನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here

nine + 19 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you