*”ಇದು ಹಣಕ್ಕಾಗಿ ಅಲ್ಲ-ಕ್ರಿಕೆಟ್ ನ ಗೆಲುವಿಗಾಗಿ”*
“ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ತಂಡಗಳ ಗಣನೀಯ ಇಳಿಕೆಯ ಪ್ರಮಾಣ,ತಂಡಗಳ ವ್ಯವಸ್ಥಾಪಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮನಗಂಡು,ಫ್ರೆಂಡ್ಸ್ ಬೆಂಗಳೂರು ತಂಡ ವೈಶಿಷ್ಟ್ಯಪೂರ್ಣ ಪಂದ್ಯಾಟ ಆಯೋಜಿಸಿದ್ದು,ಸಂಪೂರ್ಣ ಉಚಿತ ಪ್ರವೇಶಾತಿಯೊಂದಿಗೆ ಕರ್ನಾಟಕದ 8 ಪ್ರತಿಷ್ಠಿತ ತಂಡಗಳು-ಹೊರ ರಾಜ್ಯದ 8 ತಂಡಗಳು-ಜಿಲ್ಲಾಮಟ್ಟದ ತಂಡಗಳಿಗೆ ಸಮಾನಾವಕಾಶ ಕಲ್ಪಿಸಿದೆ.ಕಳೆದ ಹಲವಾರು ವರ್ಷಗಳಿಂದ ತಂಡಗಳನ್ನು ಮುನ್ನಡೆಸುತ್ತಿರುವ ತಂಡಗಳ ವ್ಯವಸ್ಥಾಪಕರಿಗೆ ಈ ಪಂದ್ಯಾಟ ಅರ್ಪಣೆ”
ಎಂದು ಫ್ರೆಂಡ್ಸ್ ಬೆಂಗಳೂರು ತಂಡದ ಮಾಲೀಕರಾದ ರೇಣು ಗೌಡ ಇವರು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ಇಂದು ತಿಳಿಸಿದ್ದಾರೆ.
ಫ್ರೆಂಡ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ರಾಘವೇಂದ್ರ.ಎನ್.ಜಿ ಅನ್ಪ್ರೆಡಿಕ್ಟೇಬಲ್ ಕೆ.ಆರ್.ಪುರಂ ಇವರು ಪ್ರಪ್ರಥಮ ಬಾರಿಗೆ 2019 ರಲ್ಲಿ ರಾಜ್ಯ ಮಟ್ಟದ ಉಚಿತ ಪ್ರವೇಶಾತಿಯ ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿದ್ದರು.
ಈ ಬಾರಿ ಫ್ರೆಂಡ್ಸ್ ಬೆಂಗಳೂರು ಹಿರಿಯ-ಕಿರಿಯರು,
ತಂಡದ ಬೆಂಬಲಿಗರ ಸಹಯೋಗದೊಂದಿಗೆ 2023 ಜನವರಿ 25,26,27,28,29 ಐದು ದಿನಗಳ ಕಾಲ ಪೀಣ್ಯ 2 ನೇ ಹಂತದ ಬಳಿ ವಿಶೇಷವಾಗಿ ಸಜ್ಜುಗೊಳಿಸಲಾಗುವ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ದಾಖಲೆಯ ಪಂದ್ಯಾಟ ನಡೆಸಲು ಭರದಿಂದ ಸಿದ್ಧತೆ ನಡೆಯುತ್ತಿದೆ.
ರಾಷ್ಟ್ರೀಯ ಮಟ್ಟದಲ್ಲೇ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆಯಲಿರುವ ಈ ಐತಿಹಾಸಿಕ ಕ್ರಿಕೆಟ್ ಪಂದ್ಯಾವಳಿ
ಯಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡ ಗರಿಷ್ಠ ನಗದು 5,05,000 ರೂ,ದ್ವಿತೀಯ 2,50,000 ನಗದು ಬಹುಮಾನ ಸಹಿತ ವಿಶಿಷ್ಟ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.