ಬಹ್ರೇನ್-ದಿ.ಕೃಷ್ಣ ಶೆಟ್ಟಿ ಇವರ ಸ್ಮರಣಾರ್ಥ,ಇಂಡಿಯನ್ ಕ್ಲಬ್ ಬಹ್ರೇನ್ ನಲ್ಲಿ ನಡೆದ ಕುಡ್ಲೋತ್ಸವ ಕಪ್-2022 ಫೈನಲ್ ನಲ್ಲಿ ಕುಡ್ಲ ಚಾಲೆಂಜರ್ಸ್ ತಂಡವನ್ನು ಸೋಲಿಸುವ ಮೂಲಕ ನಮ್ಮ ಕುಡ್ಲ ಡೆಸ್ಟಿನಿ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಲೀಗ್ ಹಂತದಲ್ಲೇ ಸೋಲುಂಡು,ಟೂರ್ನಮೆಂಟ್ ನಿಂದ ನಿರ್ಗಮಿಸಬೇಕಾಗಿದ್ದ ಈ 2 ತಂಡಗಳು,ವೀರಾವೇಶದ ಹೋರಾಟ ಸಂಘಟಿಸಿ,ಒಂದೇ ಗ್ರೂಪ್ ನಿಂದ ಫೈನಲ್ ಪ್ರವೇಶಿಸಿದ್ದವು.
ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಶರತ್ ಶೆಟ್ಟಿ,ಬೆಸ್ಟ್ ಬ್ಯಾಟ್ಸ್‌ಮನ್ ಮೀತ್ ಮತ್ತು ಸರ್ವಾಂಗೀಣ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಸಂಪತ್ ಶೆಟ್ಟಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು…