ಕ್ಲಾಸಿಕ್ ಕ್ರಿಕೆಟರ್ಸ್ ತಿಪಟೂರು ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರಾದ ಎನ್.ಆರ್.ಸಂತೋಷ್,ಬಿ.ಸಿ.ನಾಗೇಶ್,ಲೋಕೇಶ್ವರ್ ಸಾರಥ್ಯದಲ್ಲಿ,ರಘು ಟಿ.ಎನ್,ವಾಸು ಪ್ರಕಾಶ್,ಶಿವ,ಚಿರಂತನ್,ಮೋಹನ್,ವಿಲಾ ಸ್,ಅಭಿ,ವರದಾ ಇವರೆಲ್ಲರ ಸಹಭಾಗಿತ್ವದಲ್ಲಿ ತಿಪಟೂರಿನಲ್ಲಿ ನಡೆದ ಹೊನಲು ಬೆಳಕಿನ “ಬಿ.ಎಸ್.ವೈ ಕಪ್” ಕ್ಲಾಸಿಕ್ ತಿಪಟೂರು ತಂಡ ಜಯಿಸಿದೆ.
ತಿಪಟೂರು-ತುಮಕೂರು ಪರಿಸರದ 10 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಲೀಗ್ ಹಂತದ ರೋಚಕ ಸೆಣಸಾಟಗಳ ಬಳಿಕ
M.C.C ತಿಪಟೂರು ಹಾಗೂ ಕ್ಲಾಸಿಕ ಕ್ರಿಕೆಟರ್ಸ್ ಫೈನಲ್ ಪ್ರವೇಶಿಸಿತ್ತು.ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕ್ಲಾಸಿಕ್ ಕ್ರಿಕೆಟರ್ಸ್ ನಿಗದಿತ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 57 ರನ್ ಕಲೆ ಹಾಕಿತ್ತು.ಕಠಿಣ ಸವಾಲನ್ನು ಬೆಂಬತ್ತುವ ಸಂದರ್ಭದಲ್ಲಿ, ಕ್ಲಾಸಿಕ್ ತಿಪಟೂರಿನ
ಬಿಗು ಬೌಲಿಂಗ್ ದಾಳಿಯೆದುರು M.C.C ಯ ದಾಂಡಿಗರು ರನ್ ಗಳಿಸಲು ಪರದಾಡಿ,ಅಂತಿಮವಾಗಿ
8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಿ.ಎಸ್.ವೈ ಕಪ್ ನ ಮುಖ್ಯ ಆಕರ್ಷಣೆಯ ಪಂದ್ಯದಲ್ಲಿ
ಬೆಂಗಳೂರು ಇಲೆವೆನ್ ತಂಡದ ಸಲೀಂ ಅಬ್ಬರದ ಬ್ಯಾಟಿಂಗ್ ಪ್ರದರ್ಶನದೊಂದಿಗೆ ರೆಸ್ಟ್ ಆಫ್ ಕರ್ನಾಟಕ ಇಲೆವೆನ್ ತಂಡವನ್ನು ಅನಾಯಾಸವಾಗಿ ಸೋಲಿಸಿತ್ತು.
ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ ಕ್ಲಾಸಿಕ್
ಕ್ರಿಕೆಟರ್ಸ್ 2 ಲಕ್ಷ ನಗದು,ದ್ವಿತೀಯ ಸ್ಥಾನಿ M.C.C ತಿಪಟೂರು 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ಈ ಪಂದ್ಯಾವಳಿಯಲ್ಲಿ ಒಟ್ಟು 4 ಅರ್ಧ ಶತಕ ದಾಖಲಾಗಿದೆ.ರಾಜಾ ಸಾಲಿಗ್ರಾಮ,ಸ್ಯಾಂಡಿ,ಗಿಲ್ಲಿ ಹಾಗೂ ರಕ್ಷಿತ್ ನಂದಳಿಕೆ ಈ ನಾಲ್ವರು ಆಟಗಾರರು ದಾಂಡಿನಿಂದ ಬಿರುಸಿನ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿ ಪ್ರೇಕ್ಷಕರನ್ನು ರಂಜಿಸಿದ್ದರು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಸ್ವಸ್ತಿಕ್ ನಾಗರಾಜ್ ಪಡೆದರೆ,ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ರಕ್ಷಿತ್ ನಂದಳಿಕೆ,ಬೆಸ್ಟ್ ಬೌಲರ್ ಸಚಿನ್ ಮಹಾದೇವ್ ಹಾಗೂ ಸರಣಿಯುದ್ದಕ್ಕೂ ಶ್ರೇಷ್ಟ ಸವ್ಯಸಾಚಿ ಪ್ರದರ್ಶನ ನೀಡಿ,ತಿಪಟೂರಿನ ಅಂಗಣದ ಮೂಲೆ ಮೂಲೆಗೂ ಬೌಂಡರಿ,ಸಿಕ್ಸರ್ ಗಳ ಸುರಿಮಳೆಗೈದು ಕ್ರೀಡಾಭಿಮಾನಿಗಳ ಹೃದಯ ಗೆದ್ದ ರಾಜಾ ಸಾಲಿಗ್ರಾಮ ಸರಣಿ ಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.
ತಿಪಟೂರಿನ ಸ್ಥಳೀಯ ಆಟಗಾರರ ಪೈಕಿ ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಗಿಲ್ಲಿ,ಬೆಸ್ಟ್ ಬೌಲರ್ ವಾಸು ಪ್ರಕಾಶ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರವಿ ಪಡೆದುಕೊಂಡರು.
S.R.B ಸ್ಪೋರ್ಟ್ಸ್ ನ ಸಂಪೂರ್ಣ ಸಹಕಾರದೊಂದಿಗೆ,M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ,ವೀಕ್ಷಕ ವಿವರಣೆಯಲ್ಲಿ
ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ್ ಐತಾಳ್ ಕೋಟ,ರಾಘು ಮಟಪಾಡಿ ಭಾಗವಹಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಿತ್ತು.