Categories
ಕ್ರಿಕೆಟ್ ಸ್ಪೋರ್ಟ್ಸ್

SRB ಸ್ಪೋರ್ಟ್ಸ್ ರೀಟೇಲ್ ಶಾಪ್-ಕ್ರೀಡಾ ಸಾಮಗ್ರಿಗಳ ಸುಸಜ್ಜಿತ ಮಳಿಗೆ ಉದ್ಘಾಟನಾ ಕಾರ್ಯಕ್ರಮ

ಬೆಂಗಳೂರು : SRB ಸ್ಪೋರ್ಟ್ಸ್ ಸಂಸ್ಥೆಯ ಕ್ರೀಡಾ ಸಾಮಗ್ರಿಗಳ ಮಳಿಗೆ  ಆ. 6ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್  ಬಸ್ ನಿಲ್ದಾಣ ಸಮೀಪದ ರಿಟೇಲ್ ಶಾಪ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಬೆಳಗ್ಗೆ 11ಕ್ಕೆ ಫ್ರೆಂಡ್ಸ್ ಬೆಂಗಳೂರು ತಂಡದ  ಮ್ಯಾನೇಜರ್ ಶ್ರೀ ರೇಣು ಗೌಡ ಉದ್ಘಾಟಿಸಲಿದ್ದು, ಇನ್ನಿತರ ಕ್ರೀಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು SRB ಸ್ಪೋರ್ಟ್ಸ್ ಸಂಸ್ಥೆಯ ಮಾಲೀಕ ಸಾಗರ್ ಭಂಡಾರಿ ತಿಳಿಸಿದ್ದಾರೆ.
ಕ್ರೀಡಾ ಸರಕುಗಳ ಹೊಸ ಮಳಿಗೆಯನ್ನು ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರಾರಂಭಿಸಿದೆ ಎಂದು SRB ಸ್ಪೋರ್ಟ್ಸ್ ಸಂಸ್ಥೆಯ ಮಾಲೀಕ ಸಾಗರ್ ಭಂಡಾರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ  SRB ಸ್ಪೋರ್ಟ್ಸ್ ನ ಹೊಸ ಸ್ಟೋರ್ ಲಾಂಚ್ ಅನ್ನು ಘೋಷಿಸಲು ನಮಗೆ ಸಂತೋಷವಾಗಿದೆ ” ಎಂದು ಇದರ ವ್ಯವಸ್ಥಾಪಕ ನಿರ್ದೇಶಕ  ಸಾಗರ್ ಭಂಡಾರಿ ಹೇಳಿದರು.
ಗ್ರಾಹಕರು ಬ್ಯಾಡ್ಮಿಂಟನ್ ರಾಕೆಟ್‌ಗಳು, ಕ್ರಿಕೆಟ್ ಬ್ಯಾಟ್‌ಗಳು, ಬಾಸ್ಕೆಟ್‌ಬಾಲ್‌ಗಳು, ಫುಟ್‌ಬಾಲ್‌ಗಳು, ಟೆನ್ನಿಸ್ ಬಾಲ್‌ಗಳು, ಬೈಸಿಕಲ್‌ಗಳು, ಈಜು ಉಡುಗೆ ಮತ್ತು ಹೆಚ್ಚಿನವುಗಳಿಂದ ಹಿಡಿದು  ವಿವಿಧ ಶ್ರೇಣಿಯಿಂದ ಆಯ್ಕೆ ಮಾಡಬಹುದು. ಹಲವು ಬ್ರ್ಯಾಂಡ್‌ಗಳಿಂದ ಕೂಡಿದ ಸರಿಯಾದ ಕ್ರೀಡಾ ಸಾಧನಗಳನ್ನು  ಶಾಪಿಂಗ್ ಮಾಡಲು ಗ್ರಾಹಕರು ಎದುರುನೋಡಬಹುದು.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ  ಆ. 6 ರಂದು ಆರಂಭಗೊಳ್ಳಲಿರುವ ರಿಟೇಲ್‌ ಮಳಿಗೆ  ಬೃಹದಾಕಾರವಾಗಿ ಬೆಳೆದು ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಲಿ ಎಂದು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ವತಿಯಿಂದ ಶುಭ ಹಾರೈಕೆಗಳು.
Categories
ಕ್ರಿಕೆಟ್

ಅಕ್ಟೋಬರ್ 26-27 ರಂದು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಯುಪುತ್ರ ಕಪ್-2019 

ಚತುರ ಕ್ರೀಡಾ ಸಂಘಟಕ‌ ನಿತೀಶ್ ಗೌಡ ಪ್ರಾಯೋಜಕತ್ವದಲ್ಲಿ ವಾಯುಪುತ್ರ ಮಾದನಾಯಕನಹಳ್ಳಿ ಇವರ ಸಹಯೋಗದೊಂದಿಗೆ ಇದೇ ಬರುವ 26 ಶನಿವಾರ ಹಾಗೂ 27 ರವಿವಾರದಂದು ಬೆಂಗಳೂರಿನ ಮಾದನಾಯಕನಹಳ್ಳಿ ಅಂಕಣದಲ್ಲಿ 2 ದಿನಗಳ ಹಗಲಿನ ರಾಜ್ಯ ಮಟ್ಟದ ಪಂದ್ಯಾಕೂಟ ನಡೆಯಲಿದೆ.

ಶನಿವಾರದಂದು ಮಾದನಾಯಕನಹಳ್ಳಿ ಸುತ್ತಮುತ್ತಲಿನ ಪರಿಸರದ ಆಟಗಾರರು ಸೆಣಸಾಡಲಿದ್ದು, ರವಿವಾರ ರಾಜ್ಯದ ಪ್ರತಿಷ್ಟಿತ 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದೆ.

ವಿಜಯೀ ತಂಡ 1,23,456 ನಗದು,ರನ್ನರ್ಸ್ ತಂಡ 54,321 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.

ರಾಜ್ಯದ ಅನುಭವಿ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ವೀಕ್ಷಕ ವಿವರಣೆಯ ಸಾರಥ್ಯವನ್ನು ವಹಿಸಲಿದ್ದು,ಬಹು ಬೇಡಿಕೆಯ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದು,
ಈ ಪಂದ್ಯಾಕೂಟದ ನೇರ ಪ್ರಸಾರವನ್ನು M.Sports ಬಿತ್ತರಿಸಲಿದೆ.

ಆರ್.ಕೆ‌.ಆಚಾರ್ಯ ಕೋಟ