Categories
ಕ್ರಿಕೆಟ್ ಸ್ಪೋರ್ಟ್ಸ್

SRB ಸ್ಪೋರ್ಟ್ಸ್ ರೀಟೇಲ್ ಶಾಪ್-ಕ್ರೀಡಾ ಸಾಮಗ್ರಿಗಳ ಸುಸಜ್ಜಿತ ಮಳಿಗೆ ಉದ್ಘಾಟನಾ ಕಾರ್ಯಕ್ರಮ

ಬೆಂಗಳೂರು : SRB ಸ್ಪೋರ್ಟ್ಸ್ ಸಂಸ್ಥೆಯ ಕ್ರೀಡಾ ಸಾಮಗ್ರಿಗಳ ಮಳಿಗೆ  ಆ. 6ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್  ಬಸ್ ನಿಲ್ದಾಣ ಸಮೀಪದ ರಿಟೇಲ್ ಶಾಪ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಬೆಳಗ್ಗೆ 11ಕ್ಕೆ ಫ್ರೆಂಡ್ಸ್ ಬೆಂಗಳೂರು ತಂಡದ  ಮ್ಯಾನೇಜರ್ ಶ್ರೀ ರೇಣು ಗೌಡ ಉದ್ಘಾಟಿಸಲಿದ್ದು, ಇನ್ನಿತರ ಕ್ರೀಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು SRB ಸ್ಪೋರ್ಟ್ಸ್ ಸಂಸ್ಥೆಯ ಮಾಲೀಕ ಸಾಗರ್ ಭಂಡಾರಿ ತಿಳಿಸಿದ್ದಾರೆ.
ಕ್ರೀಡಾ ಸರಕುಗಳ ಹೊಸ ಮಳಿಗೆಯನ್ನು ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರಾರಂಭಿಸಿದೆ ಎಂದು SRB ಸ್ಪೋರ್ಟ್ಸ್ ಸಂಸ್ಥೆಯ ಮಾಲೀಕ ಸಾಗರ್ ಭಂಡಾರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ  SRB ಸ್ಪೋರ್ಟ್ಸ್ ನ ಹೊಸ ಸ್ಟೋರ್ ಲಾಂಚ್ ಅನ್ನು ಘೋಷಿಸಲು ನಮಗೆ ಸಂತೋಷವಾಗಿದೆ ” ಎಂದು ಇದರ ವ್ಯವಸ್ಥಾಪಕ ನಿರ್ದೇಶಕ  ಸಾಗರ್ ಭಂಡಾರಿ ಹೇಳಿದರು.
ಗ್ರಾಹಕರು ಬ್ಯಾಡ್ಮಿಂಟನ್ ರಾಕೆಟ್‌ಗಳು, ಕ್ರಿಕೆಟ್ ಬ್ಯಾಟ್‌ಗಳು, ಬಾಸ್ಕೆಟ್‌ಬಾಲ್‌ಗಳು, ಫುಟ್‌ಬಾಲ್‌ಗಳು, ಟೆನ್ನಿಸ್ ಬಾಲ್‌ಗಳು, ಬೈಸಿಕಲ್‌ಗಳು, ಈಜು ಉಡುಗೆ ಮತ್ತು ಹೆಚ್ಚಿನವುಗಳಿಂದ ಹಿಡಿದು  ವಿವಿಧ ಶ್ರೇಣಿಯಿಂದ ಆಯ್ಕೆ ಮಾಡಬಹುದು. ಹಲವು ಬ್ರ್ಯಾಂಡ್‌ಗಳಿಂದ ಕೂಡಿದ ಸರಿಯಾದ ಕ್ರೀಡಾ ಸಾಧನಗಳನ್ನು  ಶಾಪಿಂಗ್ ಮಾಡಲು ಗ್ರಾಹಕರು ಎದುರುನೋಡಬಹುದು.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ  ಆ. 6 ರಂದು ಆರಂಭಗೊಳ್ಳಲಿರುವ ರಿಟೇಲ್‌ ಮಳಿಗೆ  ಬೃಹದಾಕಾರವಾಗಿ ಬೆಳೆದು ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಲಿ ಎಂದು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ವತಿಯಿಂದ ಶುಭ ಹಾರೈಕೆಗಳು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

one × 3 =