ಚತುರ ಕ್ರೀಡಾ ಸಂಘಟಕ ನಿತೀಶ್ ಗೌಡ ಪ್ರಾಯೋಜಕತ್ವದಲ್ಲಿ ವಾಯುಪುತ್ರ ಮಾದನಾಯಕನಹಳ್ಳಿ ಇವರ ಸಹಯೋಗದೊಂದಿಗೆ ಇದೇ ಬರುವ 26 ಶನಿವಾರ ಹಾಗೂ 27 ರವಿವಾರದಂದು ಬೆಂಗಳೂರಿನ ಮಾದನಾಯಕನಹಳ್ಳಿ ಅಂಕಣದಲ್ಲಿ 2 ದಿನಗಳ ಹಗಲಿನ ರಾಜ್ಯ ಮಟ್ಟದ ಪಂದ್ಯಾಕೂಟ ನಡೆಯಲಿದೆ.
ಶನಿವಾರದಂದು ಮಾದನಾಯಕನಹಳ್ಳಿ ಸುತ್ತಮುತ್ತಲಿನ ಪರಿಸರದ ಆಟಗಾರರು ಸೆಣಸಾಡಲಿದ್ದು, ರವಿವಾರ ರಾಜ್ಯದ ಪ್ರತಿಷ್ಟಿತ 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದೆ.
ವಿಜಯೀ ತಂಡ 1,23,456 ನಗದು,ರನ್ನರ್ಸ್ ತಂಡ 54,321 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.
ರಾಜ್ಯದ ಅನುಭವಿ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ವೀಕ್ಷಕ ವಿವರಣೆಯ ಸಾರಥ್ಯವನ್ನು ವಹಿಸಲಿದ್ದು,ಬಹು ಬೇಡಿಕೆಯ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದು,
ಈ ಪಂದ್ಯಾಕೂಟದ ನೇರ ಪ್ರಸಾರವನ್ನು M.Sports ಬಿತ್ತರಿಸಲಿದೆ.
ಆರ್.ಕೆ.ಆಚಾರ್ಯ ಕೋಟ