
ದುಬೈನಲ್ಲಿ ಸನ್‌ರೈಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್
ದುಬೈ ಟೆನಿಸ್ ಬಾಲ್ ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊಸ ಉತ್ಸಾಹ ತುಂಬುವಂತಹ ಟೂರ್ನಿಗೆ ವೇದಿಕೆ ಸಿದ್ಧವಾಗುತ್ತಿದೆ. “ಸನ್‌ರೈಸ್ ಟ್ರೋಫಿ 2025 – ಸೀಸನ್ 1” ಎಂಬ 40 ಯಾರ್ಡ್ಸ್ ಫ್ಲಡ್ಲೈಟ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನವೆಂಬರ್ 8 ಮತ್ತು 9 ರಂದು ಅಬುಹೈಲ್‌ನ ಸ್ಪೋರ್ಟ್ಸ್‌ಬೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.
ಈ ಕ್ರಿಕೆಟ್ ಟೂರ್ನಮೆಂಟನ್ನು ಟ್ರೂ ನೆಸ್ಟರ್ ಮತ್ತು ವೆಬಿಜ್ ಸಂಸ್ಥೆಗಳು ನಿಫಾ ಸ್ಟ್ರೈಕರ್ಸ್ ಉಡುಪಿ ತಂಡದ ಸಹಯೋಗದಲ್ಲಿ ಹಾಗೂ ಸನ್‌ರೈಸ್ ಹೊನ್ನಾಳ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸುತ್ತಿವೆ.


ಟೂರ್ನಮೆಂಟ್‌ನಲ್ಲಿ ಸೀಮಿತ 8 ತಂಡಗಳು ಭಾಗವಹಿಸಲಿದ್ದು, ಟೆನಿಸ್ ಬಾಲ್ ಆಧಾರಿತ ಲೀಗ್ ಕಮ್ ನಾಕೌಟ್ ರೀತಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತೀ ತಂಡಕ್ಕೂ ಎರಡು ಖಚಿತ ಪಂದ್ಯಗಳು ದೊರೆಯಲಿವೆ. 5 ಓವರ್‌ಗಳ 13 ಪಂದ್ಯಗಳು ನಡೆಯಲಿದ್ದು, ಅಂತಿಮವಾಗಿ ಚಾಂಪಿಯನ್ ಆಯ್ಕೆಗೊಳ್ಳಲಿದ್ದಾರೆ.
ಪ್ರಥಮ ಬಹುಮಾನ: 5001 ದಿರ್ಹಾಮ್
ರನ್ನರ್ಸ್ ಅಪ್: 3001 ದಿರ್ಹಾಮ್
ಅದರ ಜೊತೆಗೆ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ವಿಭಿನ್ನ ಬಹುಮಾನಗಳು ನೀಡಲಾಗುತ್ತವೆ —
ಬೆಸ್ಟ್ ಬ್ಯಾಟ್ಸ್ಮನ್: ಬ್ಯಾಟ್
ಬೆಸ್ಟ್ ಬೌಲರ್: ಶೂಸ್
ಬೆಸ್ಟ್ ಕೀಪರ್: ವಾಚ್
ಬೆಸ್ಟ್ ಫೀಲ್ಡರ್: ಪರ್ಫ್ಯೂಮ್
ಮ್ಯಾನ್ ಆಫ್ ದ ಸೀರೀಸ್: ಎಲ್‌ಇಡಿ ಟಿವಿ
ಫೈನಲ್ ಮ್ಯಾನ್ ಆಫ್ ದ ಮ್ಯಾಚ್: ಚಿನ್ನದ ನಾಣ್ಯ
ಪ್ರವೇಶ ಶುಲ್ಕ: 750 AED ಆಗಿದ್ದು, ನೋಂದಣಿ ಕೊನೆಯ ದಿನಾಂಕ ಅಕ್ಟೋಬರ್ 25, 2025 ಎಂದು ಆಯೋಜಕರು ತಿಳಿಸಿದ್ದಾರೆ.
ಟೂರ್ನಮೆಂಟ್‌ನ ನೇರಪ್ರಸಾರವನ್ನು ಸ್ಪೋರ್ಟ್ಸ್ ಕನ್ನಡ ಮೀಡಿಯಾ ಲೈವ್ ಮೂಲಕ ಪ್ರಸಾರ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಹ್ಮತ್ ಹೊನ್ನಾಳ: +971568713554




