ಕ್ರಿಕೆಟ್ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್...

ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ; ಆನಂದ್ 11, ಬೆಂಗಳೂರು ಚಾಂಪಿಯನ್,ಫಿಶರ್ ಮೆನ್, ಮಲ್ಪೆ ರನ್ನರ್ಸ್ ಪ್ರಶಸ್ತಿ 

-

- Advertisment -spot_img

ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ; ಆನಂದ್ 11, ಬೆಂಗಳೂರು ಚಾಂಪಿಯನ್,ಫಿಶರ್ ಮೆನ್, ಮಲ್ಪೆ ರನ್ನರ್ಸ್ ಪ್ರಶಸ್ತಿ 

ಕುಂದಾಪುರ: ಕೆ.ಪಿ. ಸತೀಶ್ ಅವರ ನೇತೃತ್ವದಲ್ಲಿ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ ಲೆಜೆಂಡ್ ಕಪ್ – 2025 45 ವರ್ಷ ಮೇಲ್ಪಟ್ಟ ಲೆಜೆಂಡ್‌ಗಳ ರಾಜ್ಯಮಟ್ಟದ ಹಗಲಿನ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್ ಭಾನುವಾರ ಕ್ರೀಡಾ ಸಂಭ್ರಮದ ನಡುವೆ ಜರುಗಿತು. ವಿವಿಧ ಜಿಲ್ಲೆಗಳಿಂದ ಬಂದ ಹಿರಿಯ ಕ್ರಿಕೆಟಿಗರು ತಮ್ಮ ಅನುಭವ, ಸಾಮರ್ಥ್ಯ ಮತ್ತು ಕ್ರೀಡಾಸ್ಫೂರ್ತಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಆನಂದ್ 11, ಬೆಂಗಳೂರು ತಂಡವು ವಿಜಯ ಸಾಧಿಸಿತು. ತಂಡದ ಅಜ್ಮಲ್ ಕೋಲಾರ, ಶ್ರೀಕಾಂತ್, ಕಾರ್ತಿಕ್ ಬೂನ್ ನ್ಯಾಶ್, ಹರೀಶ್ ಬಾಬು, ಭಾಸ್ಕರ್ ಶೆಟ್ಟಿ, ಅಣ್ಣಯ್ಯಪ್ಪ ಮತ್ತು ಶೇಖ್ ಅಲಿ ತಮ್ಮ ಅದ್ಭುತ ಆಟದಿಂದ ತಂಡಕ್ಕೆ ಬಲ ತುಂಬಿದರು.

ಫಿಶರ್ ಮೆನ್, ಮಲ್ಪೆ ತಂಡವು ರನ್ನರ್ಸ್ ಪಟ್ಟಕ್ಕೇರಿತು. ಸತೀಶ್ ಜಿ, ಪುರುಷೋತ್ತಮ್ ಅರಸೀಕೆರೆ, ಶಂಕರ್ ಶಂಕಿ, ಮಹೇಂದ್ರ ಸಿಂಗ್ ಮಗ್ಗಿ, ಸಾಗರ್ ವಿಶ್ವ, ರಾಜಾ ಮಲ್ಪೆ, ಪ್ರಶಾಂತ್ ಶೆಟ್ಟಿ ಕರಾವಳಿ ಮತ್ತು ವಾದಿರಾಜ್ ಮಲ್ಪೆ ತಮ್ಮ ಶ್ರೇಷ್ಠ ಪ್ರದರ್ಶನದಿಂದ ಗಮನ ಸೆಳೆದರು.

ಟೂರ್ನಮೆಂಟ್‌ನಲ್ಲಿ ಆನಂದ್ 11, ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ನೀಡುತ್ತಾ ಚಾಂಪಿಯನ್ ಪಟ್ಟ ಹಚ್ಚಿಕೊಂಡಿದ್ದು, ಟ್ರೋಫಿಯ ಜೊತೆಗೆ ₹1,01,111 ಬಹುಮಾನವನ್ನು ಪಡೆದಿದೆ. ಫಿಶರ್ ಮೆನ್, ಮಲ್ಪೆ ತಂಡವು ರನ್ನರ್ಸ್ ಪಟ್ಟಕ್ಕೇರಿದ್ದು, ಟ್ರೋಫಿಯೊಂದಿಗೆ ₹50,555 ಬಹುಮಾನವನ್ನು ಪಡೆದಿದೆ. 

ವೈಯಕ್ತಿಕ ಪ್ರಶಸ್ತಿಗಳು ಹೀಗಿವೆ:

ಮ್ಯಾನ್ ಆಫ್ ದ ಮ್ಯಾಚ್: ಶೇಖ್ ಅಲಿ

ಬೆಸ್ಟ್ ಬ್ಯಾಟ್ಸ್‌ಮನ್: ಅಜ್ಮಲ್, ಕೋಲಾರ

ಬೆಸ್ಟ್ ಬೌಲರ್: ಪುರುಷೋತ್ತಮ್ ಅರಸೀಕೆರೆ

ಬೆಸ್ಟ್ ವಿಕೆಟ್ ಕೀಪರ್: ಶಂಕರ್ ಶಂಕಿ

ಬೆಸ್ಟ್ ಫೀಲ್ಡರ್: ಪ್ರಕಾಶ್ ಮುನ್ನ ದೊಡ್ಡಣಗುಡ್ಡೆ (ಬಿಜಿ ಸ್ಪಾರ್ಕ್)

ಮ್ಯಾನ್ ಆಫ್ ದ ಸೀರೀಸ್: ಮಹೇಂದ್ರ ಸಿಂಗ್ ಮಗ್ಗಿ

ಹಿರಿಯ ಕ್ರಿಕೆಟಿಗರ ಕ್ರೀಡಾಭಿಮಾನ, ಫಿಟ್ನೆಸ್ ಹಾಗೂ ಅಚ್ಚಳಿಯದ ಕ್ರೀಡಾಸ್ಪೂರ್ತಿಯನ್ನು ಮತ್ತೊಮ್ಮೆ ಹೊಳೆಯಿಸಿದ ಈ ಟೂರ್ನಮೆಂಟ್‌ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಆಯೋಜಕರ ಪರಿಶ್ರಮ ಮತ್ತು ಆಟಗಾರರ ಉತ್ಸಾಹದಿಂದ ಕುಂದಾಪುರದಲ್ಲಿ ಕ್ರೀಡಾ ಹಬ್ಬದಂತ ವಾತಾವರಣ ನಿರ್ಮಾಣವಾಯಿತು.

LEAVE A REPLY

Please enter your comment!
Please enter your name here

thirteen + two =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you