ಕಾಪು ಪರಿಸರದ ಆಟಗಾರರು ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಫೈಜಲ್ ಕಾಪು,ಶಫಿ, ಆದಿಲ್,ಶಾಕಿರ್ ಹಾಗೂ ಆಶಿಕ್ ಸ್ನೇಹಿತರೆಲ್ಲರ ಒಗ್ಗೂಡುವಿಕೆಯ ಯುನೈಟೆಡ್ ಕಾಪು ತಂಡ 2 ನೇ ಬಾರಿಗೆ ಯುನೈಟೆಡ್ ಕಾಪು ಟ್ರೋಫಿ-2021 ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ದಿನಾಂಕ 26-11-2021 ಶುಕ್ರವಾರದಂದು ದುಬೈ ನ ಅಜ್ಮನ್ ಓವಲ್ ಕ್ರೀಡಾಂಗಣದಲ್ಲಿ,ಹೊನಲು ಬೆಳಕಿನಲ್ಲಿ,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾಕೂಟದಲ್ಲಿ ಕರ್ನಾಟಕದ ಆಟಗಾರರಿಂದ ಕೂಡಿದ 8 ಪ್ರತಿಷ್ಠಿತ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.
ಭಾಗವಹಿಸುವ 8 ತಂಡಗಳು
1-ಟೀಮ್ ಎಕ್ಸ್ಪರ್ಟ್ ದಾಫ್ಜಾ
2-ಬ್ಲೂ ಫೋರ್ಸ್
3-ಟೀಮ್ ಎಲಿಗೆಂಟ್
4-ಕೆ.ಎಫ್.ಸಿ
5-ದುಬೈ ಲೆಜೆಂಡ್ಸ್
6-ಟಿ.ಸಿ.ಎ
7-ಮಂಗಳೂರು ವಾರಿಯರ್ಸ್
8-ಯು.ಟಿ.ಎಸ್.ಕಟೀಲ್ ಫ್ರೆಂಡ್ಸ್
ಟೂರ್ನಮೆಂಟ್ ನ ಪ್ರಥಮ ಪ್ರಶಸ್ತಿ ವಿಜೇತ ತಂಡ 5005 ದಿರ್ಹಮ್ಸ್,ದ್ವಿತೀಯ ಪ್ರಶಸ್ತಿ 2505 ದಿರ್ಹಮ್ಸ್ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ನಿನ್ನೆ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ತಾಜಾಮುಲ್,ಸುನಿಲ್ ಶೆಟ್ಟಿ ಹಾಗೂ ಸಂಘಟಕರು,ಭಾಗವಹಿಸುವ ತಂಡಗಳ ಮಾಲೀಕರು ಉಪಸ್ಥಿತರಿದ್ದರು.ಕ್ಲೇವನ್ ಕಾರ್ಯಕ್ರಮ ನಿರೂಪಿಸಿದರು.