ಮಡಿವಾಳ ಯೂತ್ ಕಾಂಗ್ರೆಸ್ ವತಿಯಿಂದ ಫೆಬ್ರವರಿ 27,28 ರಂದು ಬಿ.ಟಿ.ಎಮ್ ಲೇಯೌಟ್ ನಲ್ಲಿ ನಡೆದ ಪ್ರತಿಷ್ಟಿತ ರಾಜ್ಯಮಟ್ಟದ R.L.R ಕಪ್-2021 ಪ್ರಶಸ್ತಿಯನ್ನು ರೇಣು ಗೌಡರ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ತಂಡ ಜಯಿಸಿದೆ.
ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫ್ರೆಂಡ್ಸ್ ಬೆಂಗಳೂರು ಎಮ್.ಬಿ.ಸಿ.ಸಿ ತಂಡವನ್ನು,ಜೈ ಮಾರುತಿ ಕ್ರಿಕೆಟರ್ಸ್ ಕೋರಮಂಗಲ ಇಲೆವೆನ್ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜೈ ಮಾರುತಿ 3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತ್ತು.ಕಠಿಣ ಸವಾಲನ್ನು ಬೆಂಬತ್ತಿದ ಫ್ರೆಂಡ್ಸ್ ನ ಆರಂಭಿಕ ಕ್ರಮಾಂಕದ ಆಟಗಾರರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 2.1 ಓವರ್ ಗಳಲ್ಲಿ ಗುರಿ ತಲುಪಿದ್ದರು.
ಪಂದ್ಯಾಕೂಟದುದ್ದಕ್ಕೂ ಸರ್ವಾಂಗೀಣ ಪ್ರದರ್ಶನದ ಮೂಲಕ ಮಿಂಚಿದ ಸಾಗರ್ ಭಂಡಾರಿ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದರು..
*ಫ್ರೆಂಡ್ಸ್ ಬೆಂಗಳೂರು ಮೆನೇಜರ್ ಕಿರಣ್ ಗೌಡರ ಮದುವೆ ಮಂಟಪದಲ್ಲಿ R.L.R ಕಪ್-2021 ವಿಜಯೋತ್ಸವ*
ರವಿವಾರ ಸಂಜೆ ಫ್ರೆಂಡ್ಸ್ ಬೆಂಗಳೂರು ಪಾಲಿಗೆ ಅದೃಷ್ಟದ ದಿನವಾಗಿ ಪರಿಣಮಿಸಿತ್ತು.ಒಂದೆಡೆ ಫ್ರೆಂಡ್ಸ್ ಬೆಂಗಳೂರಿನ ಆರಂಭಿಕ ಆಟಗಾರ,ಸಿ.ಸಿ.ಎಲ್ ಹೀರೋ ರಾಜೀವ್ ಹನು ಬಿಗ್ ಬಾಸ್ ಗೆ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡರೆ,ಅದೇ ದಿನ ಸಂಜೆ ತಂಡದ ಮಾಲೀಕರಾದ ರೇಣು ಗೌಡರ ಕಿರಿಯ ಸಹೋದರ ಕಿರಣ್ ಗೌಡ ಆರತಕ್ಷತೆ ಸಮಾರಂಭಕ್ಕೆ ವಿಜಯೀ ತಂಡ R.L.R ಕಪ್-2021 ಟ್ರೋಫಿಯನ್ನು ಮಂಟಪಕ್ಕೆ ವಾದ್ಯ,ಡೋಲು,ನೃತ್ಯ ಸಹಿತ ಮೆರವಣಿಗೆಯಲ್ಲಿ ಕೊಂಡೊಯ್ದ ಸನ್ನಿವೇಶ ಆರತಕ್ಷತೆ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತ್ತು.