ಯಶೋಗಾಥೆಬೆಳ್ಳಂ ಬೆಳಗ್ಗೆ ಗೆಳತಿಯನ್ನು ನೋಡಲು ಹೊರಟವನ ಕಾರು ಹೊತ್ತಿ ಉರಿದಿತ್ತು.. ಕ್ರಿಕೆಟ್...

ಬೆಳ್ಳಂ ಬೆಳಗ್ಗೆ ಗೆಳತಿಯನ್ನು ನೋಡಲು ಹೊರಟವನ ಕಾರು ಹೊತ್ತಿ ಉರಿದಿತ್ತು.. ಕ್ರಿಕೆಟ್ ಕಂಬ್ಯಾಕ್’ಗೆ ರೆಡಿಯಾದ “ಗಬ್ಬಾ ಹೀರೋ” ರಿಷಭ್ ಪಂತ್.. 15 ತಿಂಗಳ ಹಿಂದೆ ಅಸಲಿಗೆ ಆಗಿದ್ದೇನು ಗೊತ್ತಾ..?

-

- Advertisment -spot_img
2022, ಡಿಸೆಂಬರ್ 30. ಟೀಮ್ ಇಂಡಿಯಾದ flamboyant ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಅವತ್ತು ತನ್ನ 2 ಕೋಟೆ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನಲ್ಲೇ ಸುಟ್ಟು ಭಸ್ಮವಾಗಬೇಕಿತ್ತು. ಗಟ್ಟಿ ಪಿಂಡ. ಆಯಸ್ಸು ಗಟ್ಟಿಯಿತ್ತು. ರಿಷಬ್ ಪಂತ್ ಬೆಂಕಿಯ ಬಲೆಯಿಂದ ಪಾರಾಗಿ ಬಂದಿದ್ದ.
ಅವತ್ತು ರಿಷಭ್ ಪಂತ್ ಡೆಹ್ರಾಡೂನ್’ನಲ್ಲಿದ್ದ ತನ್ನ ತಾಯಿನ್ನು ನೋಡಲು ಹೋಗುತ್ತಿದ್ದಾಗ ಕಾರು ಅಪಘಾತವಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಅಸಲಿ ವಿಷಯ ಬೇರೆಯೇ ಇದೆ. ಇದನ್ನು ಈಗ ಬರೆಯಲು ಕಾರಣ, ವನವಾಸ ಮುಗಿಸಿರುವ ಪಂತ್ ಕ್ರಿಕೆಟ್ ಕಂಬ್ಯಾಕ್’ಗೆ ರೆಡಿಯಾಗಿದ್ದಾನೆ. ಐಪಿಎಲ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆಗಿ ಆಡಲು ಬಿಸಿಸಿಐ ಫಿಟ್ನೆಸ್ & ಮೆಡಿಕಲ್ ಟೀಮ್ ಕ್ಲಿಯರೆನ್ಸ್ ಕೊಟ್ಟಿದೆ. 15 ತಿಂಗಳುಗಳ ನಂತರ ರಿಷಭ್ ಪಂತ್ ಐಪಿಎಲ್ ಮೂಲಕ ಮರಳಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಅಷ್ಟಕ್ಕೂ ಅವತ್ತು ಆಗಿದ್ದೇನು..? 2022ರ ಡಿಸೆಂಬರ್ 30ರಂದು ರಿಷಭ್ ಪಂತ್ ಬೆಳ್ಳಂ ಬೆಳಗ್ಗೆ 4 ಗಂಟೆಗೆ ಎದ್ದು ದೆಹಲಿಯಿಂದ ಡೆಹ್ರಾಡೂನ್’ಗೆ ಹೊರಟಿದ್ದ,  ತಾಯಿಯನ್ನು ನೋಡಲು.  ಆದರೆ ಅದು ಶುದ್ಧ ಸುಳ್ಳು. ಡಿಸೆಂಬರ್ 30ರ ಹಿಂದಿನ ರಾತ್ರಿ ತನ್ನ ಗೆಳತಿಯೊಂದಿಗೆ ರಿಷಬ್ ಪಂತ್ ಜಗಳ ಮಾಡಿಕೊಂಡಿದ್ದ, ನ್ಯೂ ಇಯರ್ ಸೆಲೆಬ್ರೇಷನ್ ವಿಚಾರಕ್ಕೆ . ಡಿಸೆಂಬರ್ 31ರಂದು ನೀನು ನನ್ನ ಜೊತೆ ಇರಲೇಬೇಕು ಎಂಬ ಹಠ ಆ ಹುಡುಗಿಗೆ. ಆಗಲ್ಲ, ಬೇರೆ ಕೆಲಸ ಇದೆ ಎಂದು ಬಿಟ್ಟಿದ್ದ ರಿಷಭ್. ಇಬ್ಬರ ಮಧ್ಯೆ ಶರಂಪರ ಜಗಳವಾಗಿತ್ತು. ಅದೇನನ್ನಿಸಿತೋ ಏನೋ.., ಬೆಳಗ್ಗೆ 4ಕ್ಕೆ ಎದ್ದವನೇ, ಮರ್ಸಿಡಿಸ್ ಬೆಂಜ್ ಹತ್ತಿ ಹೊರಟೇ ಬಿಟ್ಟ ರಿಷಭ್ ಪಂತ್.
ರಿಷಭ್ ಪಂತ್’ಗೆ ಐಷಾರಾಮಿ ಕಾರುಗಳನ್ನು ಶರವೇಗದಲ್ಲಿ ಓಡಿಸುವ ಖಯಾಲಿಯಿದೆ. ಆತ ಕಾರು ಓಡಿಸುತ್ತಿದ್ದಾನೆ ಎಂದರೆ ಕಾರು ನೆಲದ ಮೇಲೆ ಇರುವುದೇ ಇಲ್ಲ, ಅಷ್ಟು ಸ್ಪೀಡು. ದೆಹಲಿಯಿಂದ ಡೆಹ್ರಾಡೂನ್’ಗೆ 248 ಕೀ.ಮೀ ದೂರ. ನಿದ್ದೆಯ ಮಂಪರಿನಲ್ಲೇ 205 ಕಿ.ಮೀ ಬಂದಿದ್ದಾನೆ. ಮಿಂಚಿನ ವೇಗದಲ್ಲಿ ನುಗ್ಗಿ ಬರುತ್ತಿದ್ದ ಕಾರು, ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ
ಡಿವೈಡರ್’ಗೆ ಅಪ್ಪಳಿಸಿದೆ. ಅಷ್ಟೇ.. ರಿಷಭ್ ಪಂತ್ ಕಾರೊಳಗೆ ಇರುವಂತೆಯೇ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.
ಪಕ್ಕದಲ್ಲೇ ಒಬ್ಬ ಟ್ರಕ್ ಡ್ರೈವರ್ ಮತ್ತು ಇನ್ನಿಬ್ಬರು ಯುವಕರು. ಓಡಿ ಬಂದು ಹುಡುಗನನ್ನು ಕಾರಿನಿಂದ ಎಳೆದು ಹಾಕಿ, ಬೆಡ್ ಶೀಟ್ ಹೊದೆಸಿ ಮೈಗೆ ಅಂಟಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಮೊಬೈಲ್ ಟಾರ್ಚ್ ಹಾಕಿ ನೋಡಿದರೆ ಕಂಡದ್ದು ರಿಷಭ್ ಪಂತ್’ನ ಮುಖ. ಆಂಬುಲೆನ್ಸ್ ಮೂಲಕ ಡೆಹ್ರಾಡೂನ್’ನ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದಾರೆ. ರಿಷಭ್ ಪಂತ್’ನ ಮೊಣಕಾಲು ಮುರಿದಿತ್ತು, ಮಣಿಕಟ್ಟು ಮತ್ತು ಪಾದಕ್ಕೆ serious injury ಆಗಿತ್ತು. ನಂತರ ಬಿಸಿಸಿನ ಮಧ್ಯಸ್ಥಿಕೆಯೊಂದಿಗೆ ಅಲ್ಲಿಂದ ಮುಂಬೈಗೆ ಏರ್ ಲಿಫ್ಟ್.
ಶಸ್ತ್ರಚಿಕಿತ್ಸೆಯ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 8 ತಿಂಗಳುಗಳ ಕಾಲ  rehabilitation camp.
2021ರಲ್ಲಿ ಆಸ್ಟ್ರೇಲಿಯಾದ “ಗಬ್ಬಾ”ದಲ್ಲಿ ಕಾಂಗರೂಗಳ ಗರ್ವಭಂಗ ಮಾಡಿದ್ದ ಗೂಳಿ, ಇದೀಗ ಕಂಪ್ಲೀಟ್ ಫಿಟ್ ಆಗಿ ಮತ್ತೆ ಕ್ರಿಕೆಟ್ ಆಡಲು ರೆಡಿಯಾಗಿದ್ದಾನೆ.
#RishabhPant #ipl2024 #RishabhPantAccident #rishabhpant777

LEAVE A REPLY

Please enter your comment!
Please enter your name here

three × 1 =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you