2022, ಡಿಸೆಂಬರ್ 30. ಟೀಮ್ ಇಂಡಿಯಾದ flamboyant ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಅವತ್ತು ತನ್ನ 2 ಕೋಟೆ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನಲ್ಲೇ ಸುಟ್ಟು ಭಸ್ಮವಾಗಬೇಕಿತ್ತು. ಗಟ್ಟಿ ಪಿಂಡ. ಆಯಸ್ಸು ಗಟ್ಟಿಯಿತ್ತು. ರಿಷಬ್ ಪಂತ್ ಬೆಂಕಿಯ ಬಲೆಯಿಂದ ಪಾರಾಗಿ ಬಂದಿದ್ದ.
ಅವತ್ತು ರಿಷಭ್ ಪಂತ್ ಡೆಹ್ರಾಡೂನ್’ನಲ್ಲಿದ್ದ ತನ್ನ ತಾಯಿನ್ನು ನೋಡಲು ಹೋಗುತ್ತಿದ್ದಾಗ ಕಾರು ಅಪಘಾತವಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಅಸಲಿ ವಿಷಯ ಬೇರೆಯೇ ಇದೆ. ಇದನ್ನು ಈಗ ಬರೆಯಲು ಕಾರಣ, ವನವಾಸ ಮುಗಿಸಿರುವ ಪಂತ್ ಕ್ರಿಕೆಟ್ ಕಂಬ್ಯಾಕ್’ಗೆ ರೆಡಿಯಾಗಿದ್ದಾನೆ. ಐಪಿಎಲ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆಗಿ ಆಡಲು ಬಿಸಿಸಿಐ ಫಿಟ್ನೆಸ್ & ಮೆಡಿಕಲ್ ಟೀಮ್ ಕ್ಲಿಯರೆನ್ಸ್ ಕೊಟ್ಟಿದೆ. 15 ತಿಂಗಳುಗಳ ನಂತರ ರಿಷಭ್ ಪಂತ್ ಐಪಿಎಲ್ ಮೂಲಕ ಮರಳಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಅಷ್ಟಕ್ಕೂ ಅವತ್ತು ಆಗಿದ್ದೇನು..? 2022ರ ಡಿಸೆಂಬರ್ 30ರಂದು ರಿಷಭ್ ಪಂತ್ ಬೆಳ್ಳಂ ಬೆಳಗ್ಗೆ 4 ಗಂಟೆಗೆ ಎದ್ದು ದೆಹಲಿಯಿಂದ ಡೆಹ್ರಾಡೂನ್’ಗೆ ಹೊರಟಿದ್ದ, ತಾಯಿಯನ್ನು ನೋಡಲು. ಆದರೆ ಅದು ಶುದ್ಧ ಸುಳ್ಳು. ಡಿಸೆಂಬರ್ 30ರ ಹಿಂದಿನ ರಾತ್ರಿ ತನ್ನ ಗೆಳತಿಯೊಂದಿಗೆ ರಿಷಬ್ ಪಂತ್ ಜಗಳ ಮಾಡಿಕೊಂಡಿದ್ದ, ನ್ಯೂ ಇಯರ್ ಸೆಲೆಬ್ರೇಷನ್ ವಿಚಾರಕ್ಕೆ . ಡಿಸೆಂಬರ್ 31ರಂದು ನೀನು ನನ್ನ ಜೊತೆ ಇರಲೇಬೇಕು ಎಂಬ ಹಠ ಆ ಹುಡುಗಿಗೆ. ಆಗಲ್ಲ, ಬೇರೆ ಕೆಲಸ ಇದೆ ಎಂದು ಬಿಟ್ಟಿದ್ದ ರಿಷಭ್. ಇಬ್ಬರ ಮಧ್ಯೆ ಶರಂಪರ ಜಗಳವಾಗಿತ್ತು. ಅದೇನನ್ನಿಸಿತೋ ಏನೋ.., ಬೆಳಗ್ಗೆ 4ಕ್ಕೆ ಎದ್ದವನೇ, ಮರ್ಸಿಡಿಸ್ ಬೆಂಜ್ ಹತ್ತಿ ಹೊರಟೇ ಬಿಟ್ಟ ರಿಷಭ್ ಪಂತ್.
ರಿಷಭ್ ಪಂತ್’ಗೆ ಐಷಾರಾಮಿ ಕಾರುಗಳನ್ನು ಶರವೇಗದಲ್ಲಿ ಓಡಿಸುವ ಖಯಾಲಿಯಿದೆ. ಆತ ಕಾರು ಓಡಿಸುತ್ತಿದ್ದಾನೆ ಎಂದರೆ ಕಾರು ನೆಲದ ಮೇಲೆ ಇರುವುದೇ ಇಲ್ಲ, ಅಷ್ಟು ಸ್ಪೀಡು. ದೆಹಲಿಯಿಂದ ಡೆಹ್ರಾಡೂನ್’ಗೆ 248 ಕೀ.ಮೀ ದೂರ. ನಿದ್ದೆಯ ಮಂಪರಿನಲ್ಲೇ 205 ಕಿ.ಮೀ ಬಂದಿದ್ದಾನೆ. ಮಿಂಚಿನ ವೇಗದಲ್ಲಿ ನುಗ್ಗಿ ಬರುತ್ತಿದ್ದ ಕಾರು, ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ
ಡಿವೈಡರ್’ಗೆ ಅಪ್ಪಳಿಸಿದೆ. ಅಷ್ಟೇ.. ರಿಷಭ್ ಪಂತ್ ಕಾರೊಳಗೆ ಇರುವಂತೆಯೇ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.
ಪಕ್ಕದಲ್ಲೇ ಒಬ್ಬ ಟ್ರಕ್ ಡ್ರೈವರ್ ಮತ್ತು ಇನ್ನಿಬ್ಬರು ಯುವಕರು. ಓಡಿ ಬಂದು ಹುಡುಗನನ್ನು ಕಾರಿನಿಂದ ಎಳೆದು ಹಾಕಿ, ಬೆಡ್ ಶೀಟ್ ಹೊದೆಸಿ ಮೈಗೆ ಅಂಟಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಮೊಬೈಲ್ ಟಾರ್ಚ್ ಹಾಕಿ ನೋಡಿದರೆ ಕಂಡದ್ದು ರಿಷಭ್ ಪಂತ್’ನ ಮುಖ. ಆಂಬುಲೆನ್ಸ್ ಮೂಲಕ ಡೆಹ್ರಾಡೂನ್’ನ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದಾರೆ. ರಿಷಭ್ ಪಂತ್’ನ ಮೊಣಕಾಲು ಮುರಿದಿತ್ತು, ಮಣಿಕಟ್ಟು ಮತ್ತು ಪಾದಕ್ಕೆ serious injury ಆಗಿತ್ತು. ನಂತರ ಬಿಸಿಸಿನ ಮಧ್ಯಸ್ಥಿಕೆಯೊಂದಿಗೆ ಅಲ್ಲಿಂದ ಮುಂಬೈಗೆ ಏರ್ ಲಿಫ್ಟ್.
ಶಸ್ತ್ರಚಿಕಿತ್ಸೆಯ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 8 ತಿಂಗಳುಗಳ ಕಾಲ rehabilitation camp.
2021ರಲ್ಲಿ ಆಸ್ಟ್ರೇಲಿಯಾದ “ಗಬ್ಬಾ”ದಲ್ಲಿ ಕಾಂಗರೂಗಳ ಗರ್ವಭಂಗ ಮಾಡಿದ್ದ ಗೂಳಿ, ಇದೀಗ ಕಂಪ್ಲೀಟ್ ಫಿಟ್ ಆಗಿ ಮತ್ತೆ ಕ್ರಿಕೆಟ್ ಆಡಲು ರೆಡಿಯಾಗಿದ್ದಾನೆ.
#RishabhPant #ipl2024 #RishabhPantAccident #rishabhpant777