ಕಾಪು-ಮುದರಂಗಡಿ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಆಯೋಜಿಸಲಾದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಮುದರಂಗಡಿ ಫ್ರೆಂಡ್ಸ್ ಟ್ರೋಫಿ ಯನ್ನು ಇಜಾನ್ ಸ್ಪೋರ್ಟ್ಸ್ ಉಡುಪಿ ಜಯಿಸಿದೆ.
ಮುದರಂಗಡಿ ಪಂಚಾಯತ್ ಮೈದಾನದಲ್ಲಿ ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ,
ಮಾರ್ಚ್ 2 ರಂದು ಮಲ್ಪೆ,ದೊಡ್ಡಣಗುಡ್ಡೆ,ಬೀಡಿನಗುಡ್ಡೆ ,ಮಣಿಪಾಲ,ಉದ್ಯಾವರ,ಕಟಪಾಡಿ,ಕಾಪು,ಶಿ ರ್ವ,ಬೆಳ್ಮಣ್,ನಂದಳಿಕೆ,ಕೋಡೂರು,ಮೂ ಡುಬೆಳ್ಳೆ,ಮುದರಂಗಡಿ,ನಿಟ್ಟೆ,ಇನ್ನಂ ಜೆ,ಉಚ್ಚಿಲ,ಎರ್ಮಾಳ್,ಪಡುಬಿದ್ರಿ,ಹೆ ಜಮಾಡಿ,ಬೆಳಪು,ಮುಲ್ಕಿ,ಅಲೆವೂರು,ಹಿ ರಿಯಡಕ,ಬೈಲೂರು,ಪಲಿಮಾರು,ಪಾಂಗಾಳ ವಲಯದ ಒಟ್ಟು 12 ತಂಡಗಳು
ಹಾಗೂ ಮಾರ್ಚ್ 3 ರಂದು ರಾಜ್ಯಮಟ್ಟದ ಪ್ರಸಿದ್ಧ ತಂಡಗಳಾದ ರಿಯಲ್ ಫೈಟರ್ಸ್ ಮಲ್ಪೆ,ಇಜಾನ್ ಸ್ಪೋರ್ಟ್ಸ್ ಉಡುಪಿ,ಜಾನ್ಸನ್ ಕುಂದಾಪುರ,ಆಯುಷ್ ಇಲೆವೆನ್,ಪ್ರಿನ್ಸ್ ಇಲೆವೆನ್ ಪಿಲಾರ,ಮುದರಂಗಡಿ ರಾಕರ್ಸ್ ಈ 6 ತಂಡಗಳು ಭಾಗವಹಿಸಿದ್ದವು.
ಫೈನಲ್ ನಲ್ಲಿ ಇಜಾನ್ ಸ್ಪೋರ್ಟ್ಸ್ ಉಡುಪಿ- ಚೈತನ್ಯ M.F.C ಅಲೆವೂರು ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ರೂಪದಲ್ಲಿ 50,000 ರೂ ನಗದು,ದ್ವಿತೀಯ ಸ್ಥಾನಿ ಚೈತನ್ಯ
30,000 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆದುಕೊಂಡರು.
ಪಂದ್ಯಾಟದ ಬೆಸ್ಟ್ ಬ್ಯಾಟರ್ ಗೌರೀಶ್ ಆಚಾರ್ಯ, ಬೆಸ್ಟ್ ಬೌಲರ್ ರಾಹಿಲ್ ಹಾಗೂ ಧೀರಜ್ ಅಲೆವೂರು ಸರಣಿಶ್ರೇಷ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪಡುಬಿದ್ರಿ ಫ್ರೆಂಡ್ಸ್ ನ ಹಿರಿಯ ಆಟಗಾರರಾದ ಆನಂದ್ ಡಿಸೋಜಾ,ಶರತ್ ಶೆಟ್ಟಿ ಪಡುಬಿದ್ರಿ,ಸುಭಾಸ್ ಕಾಮತ್ ಜೊತಗೆ ರಾಜ್ಯದ ಪ್ರಸಿದ್ಧ ಆಟಗಾರರಾದ ರಾಜಾ ಸಾಲಿಗ್ರಾಮ,ಸಂಪತ್ ಬೈಲಕೆರೆ,ಪ್ರಸಾದ್ ಪಡುಬಿದ್ರಿ, ಎ.ಕೆ ಮನೋಹರ್ ಹಾಗೂ ಹಲವಾರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿರುವ ಜಾನ್ಸನ್ ರವೀಂದ್ರ ಹೆಗ್ಡೆ,ಎ.ಕೆ ಯಶು ಇವರನ್ನು ಸನ್ಮಾನಿಸಲಾಯಿತು
ಸಮಾರೋಪ ಸಮಾರಂಭದಲ್ಲಿ
ಶರತ್ ಶೆಟ್ಟಿ ಮುದರಂಗಡಿ, ಯಶವಂತ್ ಶೆಟ್ಟಿ ಎಲ್ಲೂರು,ಆನಂದ್ ಡಿಸೋಜಾ,ರೆವರೆಂಡ್ ಫಾದರ್ ಫೆಡ್ರಿಕ್ ಡಿಸೋಜಾ,ಸುಧೀರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು
Iceberg Logistics Private Limited ಮತ್ತು Iceberg Shipping LLC ಹಾಗೂ ಕನ್ನಡದ ಮೊದಲ ಹೈಪರ್ ಲಿಂಕ್ Rom Com ಚಲನಚಿತ್ರ ಚೌಚೌಬಾತ್ ತಂಡ ಪಂದ್ಯಾವಳಿಗೆ ಸಂಪೂರ್ಣ ಸಹಕಾರ ನೀಡಿದರು.
Sparkle ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಂಡಿತು.