13.6 C
London
Wednesday, October 2, 2024
Homeಕ್ರಿಕೆಟ್ಹರಿ ಓಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಜಯಿಸಿದ ವೀರಾಂಜನೇಯ ಕ್ರಿಕೆಟರ್ಸ್ ಕಾಪು ತಂಡ

ಹರಿ ಓಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಜಯಿಸಿದ ವೀರಾಂಜನೇಯ ಕ್ರಿಕೆಟರ್ಸ್ ಕಾಪು ತಂಡ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಗಂಗೊಳ್ಳಿ ಪಟ್ಟಣದ  ಎಸ್ ವಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹರಿ ಓಂ ಗಂಗೊಳ್ಳಿ   ತಂಡದಿಂದ ಹಮ್ಮಿಕೊಂಡಿದ್ದ 30 ಗಜಗಳ ಹೊನಲು ಬೆಳಕಿನ  ಜಿ ಎಸ್ ಬಿ  ಕ್ರಿಕೆಟ್ ಪಂದ್ಯಾವಳಿ ಭಾನುವಾರ ಮುಕ್ತಾಯಗೊಂಡಿತು.
ಮಾರ್ಚ್ 9, 2024ರ ಶನಿವಾರ ಸಂಜೆ 7:00 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ವೆಂಕಟೇಶ ಕೃಪಾ ಟ್ರೇಡರ್ಸ್ ಗಂಗೊಳ್ಳಿಯ ಮಾಲೀಕ  ಜಿ ಭಾಸ್ಕರ ಶೆಣೈ, ಮೆಸರ್ಸ್ ಭಂಡಾರಿ ಪದ್ಮನಾಭ ಶೆಣೈ ಇದರ ಮಾಲೀಕರಾಗಿರುವ ಪದ್ಮನಾಭ  ಶೆಣೈ,  ಕುಂದಾಪುರದ  ಶೆಣೈ ಎಲೆಕ್ಟ್ರಿಕಲ್ಸ್ ನ  ಅಕ್ಷಯ್ ಶೆಣೈ, ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕರಸೇವಕರಲ್ಲಿ ಓರ್ವರಾದ ಗಂಗೊಳ್ಳಿಯ ಪ್ರಕಾಶ್ ಪೈ, ಗಂಗೊಳ್ಳಿಯ ಜನರಲ್ ಮರ್ಚೆಂಟ್ ಎಂ ವಿನೋದ್ ಪೈ ಇವರುಗಳು ಉಪಸ್ಥಿತರಿದ್ದರು.
ರೈಸಿಂಗ್ ಸ್ಟಾರ್ಸ್ ಮಂಗಳೂರು ,ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್, ಟೀಮ್ ಜಿಎಸ್‌ಬಿ ಕುಂದಾಪುರ, ವೀರಾಂಜನೇಯ ಕ್ರಿಕೆಟರ್ಸ್ ಕಾಪು ,ರೋಶನ್ ಚಾಲೆಂಜರ್ಸ್ ಕುಂದಾಪುರ, ಕೊಂಕಣ್ ಎಕ್ಸ್‌ಪ್ರೆಸ್ ಕೋಟೇಶ್ವರ, VK ಫೋವಾಸ್, ಇರ್ವತ್ತೂರ್ ಸ್ಪೋರ್ಟ್ಸ್ ಕ್ಲಬ್  ಮಣಿಪಾಲ್, ಶ್ರೀ ರಾಮ್ ಕ್ರಿಕೆಟರ್ಸ್  ಮತ್ತು ಸ್ಪಾರ್ಕ್ SLVT ಉಡುಪಿ ತಂಡಗಳು ಟೂರ್ನಿಯಲ್ಲಿ  ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದವು.
ಒಟ್ಟಾರೆಯಾಗಿ 10 ಫ್ರ್ಯಾಂಚೈಸೀ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿಜಯಿಯಾದ ವೀರಾಂಜನೇಯ ಕ್ರಿಕೆಟರ್ಸ್ ಕಾಪು  ತಂಡಕ್ಕೆ 55,555 ರೂ.ನಗದು ಮತ್ತು ಪಾರಿತೋಷಕ, 2 ನೇ ಸ್ಥಾನ ಪಡೆದ ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್ ತಂಡಕ್ಕೆ 33,333 ರೂ.ನಗದು, ಪಾರಿತೋಷಕ ವಿತರಿಸಲಾಯಿತು. ಪ್ರತಿಷ್ಠಿತ ಫೈನಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವೀರಾಂಜನೇಯ ಕ್ರಿಕೆಟರ್ಸ್ ಕಾಪು ತಂಡದ ಕಪ್ತಾನ ಶರತ್ ಪ್ರಭು ಮೂಲ್ಕಿ ಗಳಿಸುವುದರೊಂದಿಗೆ ವೈಯಕ್ತಿಕ ಶ್ರೇಷ್ಠತೆಯನ್ನು ಸಹ ಗುರುತಿಸಲಾಯಿತು. ಶರತ್ ಪ್ರಭು ಅವರು ಸರಣಿ ಪುರುಷೋತ್ತಮ ಎಂದು ಗುರುತಿಸಲ್ಪಟ್ಟರು.  ಈ ಸಂದರ್ಭ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆಚಾರ್ಯ ಮೆಡಿಕಲ್ಸ್ ಮಾಲೀಕರಾಗಿರುವ ವಿಶ್ವನಾಥ ಆಚಾರ್ಯ,  ಉದ್ಧಾಕ್ ಕುಂದಾಪುರದ ಮಾಲೀಕ ಸುಹಾಸ್ ಭಂಡಾರ್ಕರ್, ನಿನಾದ ಚಾರಿಟೇಬಲ್ ಟ್ರಸ್ಟ್ ಗಂಗೊಳ್ಳಿಯ ಕಾರ್ಯದರ್ಶಿಗಳು ಆಗಿರುವ ಸುದರ್ಶನ ಆಚಾರ್ಯ, ರೋಟರಿ ಗಂಗೊಳ್ಳಿ  ಅಧ್ಯಕ್ಷರು ಮತ್ತು ಜಿಎಸ್ ವಿ ಎಸ್ ಸ್ಕೂಲ್ಸ್ ಅಸೋಸಿಯೇಶನ್ ಗಂಗೊಳ್ಳಿಯ  ಸದಸ್ಯರು ಆಗಿರುವ ನಾಗೇಂದ್ರ ಪೈ  ಹಾಗೂ ಜಿ ವಿಠ್ಠಲ್ ದಾಸ್ ಭಟ್ ಅರ್ಚಕರು ಮತ್ತು ಪುರೋಹಿತರು ಅಂಬಿಕಾ ದೇವಸ್ಥಾನ ಗಂಗೊಳ್ಳಿ  ಇದ್ದರು.
ಇದೇ ಸಂದರ್ಭ ಮಾರ್ಚ್ 10 ರಂದು ಗಂಗೊಳ್ಳಿ ಪರಿಸರದ ಜಿ ಎಸ್ ಬಿ ಆಟಗಾರರಿಗೆ ಸೀಮಿತವಾದ ಗಂಗೊಳ್ಳಿ ಜಿ ಎಸ್ ಬಿ ಪ್ರೀಮಿಯರ್ ಲೀಗ್ ( GGPL-2024) ಕೂಡ ಆಯೋಜಿಸಲಾಗಿತ್ತು. ಪಂದ್ಯಾವಳಿಯ ಅಂತಿಮ ಪಂದ್ಯ ವಿ ಕೆ ಫೋವಾಸ್ ಮತ್ತು ಭಾವಾಜಿ XI ನಡುವೆ ನಡೆದಿದ್ದು, ಇದನ್ನು ವಿ ಕೆ ಫೋವಾಸ್ 51 ರನ್ನುಗಳಿಂದ ಗೆದ್ದಿದೆ ಎಂದು ಪ್ರಕಟಣೆ ತಿಳಿಸಿದೆ. ಎರಡೂ ತಂಡಗಳು ಟ್ರೋಫಿಗಳು ಮತ್ತು ಪದಕಗಳನ್ನು ಪಡೆದರು.
ಜಿ ಜಿ ಪಿ ಎಲ್- 2024 ರ ಉದ್ಘಾಟನಾ ಸಮಾರಂಭ  ಭಾನುವಾರ ಸಾಯಂಕಾಲ 4:30 ಗೆ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ರಮೇಶ್ ಮಲ್ಯ ಜನರಲ್ ಮರ್ಚೆಂಟ್ ಕುಂದಾಪುರ,  ಎಂ ಮುಕುಂದ ಪೈ ನಿನಾದ ಚಾರಿಟೇಬಲ್ ಟ್ರಸ್ಟ್ ಗಂಗೊಳ್ಳಿಯ ಅಧ್ಯಕ್ಷರು, ವಿಶ್ವನಾಥ ಭಟ್ HMSV ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ  ಮತ್ತು  ಎಂ ಅನಂತ್ ಪೈ ಉಪನ್ಯಾಸಕರು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಳಗಿನ ಜಾವ 3:00 ಗಂಟೆಗೆ ನಡೆದ ಮುಕ್ತಾಯ ಸಮಾರಂಭದಲ್ಲಿ ಯು ಸದಾನಂದ ಪೈ ಲೋಕೋಪಕಾರಿ ಮತ್ತು ನಿವೃತ್ತ RBI ಉದ್ಯೋಗಿ ಬೆಂಗಳೂರು, ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ಯದರ್ಶಿ ಹಾಗೂ  ಗಂಗೊಳ್ಳಿಯ ಜನರಲ್ ಮರ್ಚೆಂಟ್  ಆಗಿರುವ ಜಿ ವೆಂಕಟೇಶ ನಾಯಕ್ ,ಎಂಜಿ ಜಗನ್ನಾಥ್ ಪೈ ಮತ್ತು ಪೈ ಗ್ರೂಪ್ ಆಫ್ ಹೋಟೆಲ್ಸ್ ಬೆಂಗಳೂರು ಪ್ರತಿನಿಧಿ ಎಂ ವಾಮನ್ ಎಸ್ ಪೈ  ಜನರಲ್ ಮರ್ಚೆಂಟ್ ಗಂಗೊಳ್ಳಿ, ವೆಂಕಟರಮಣ ದೇವರ ಹಿರಿಯ ಭಜಕರಲ್ಲಿ ಓರ್ವರು ಆಗಿರುವ ಎನ್ ಕೃಷ್ಣಾನಂದ ನಾಯಕ್ ,  GSVS ಶಾಲಾ ಸಂಘದ ಅಧ್ಯಕ್ಷ  ಡಾ.ಯು.ಕಾಶಿನಾಥ ಪೈ ಭಾಗವಹಿಸಿದ್ದರು.
 ಹರಿ ಓಂ ಗಂಗೊಳ್ಳಿ ಏರ್ಪಡಿಸಿದ ಈ ಟೂರ್ನಮೆಂಟ್ ಅತ್ಯುತ್ತಮ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಕೇವಲ ಕ್ರಿಕೆಟ್ ಮಾತ್ರವಲ್ಲದೆ ಎರಡು ದಿನಗಳ ಕಾಲ ನಡೆದ ಟೂರ್ನಿಯುದ್ದಕ್ಕೂ ಭಾಗವಹಿಸಿದ ಆಟಗಾರರಿಗೆ ಮತ್ತು  ಪ್ರೇಕ್ಷಕರಿಗೆ ಜಿ ಎಸ್ ಬಿ ಯ ವಿವಿಧ ಖಾದ್ಯಗಳನ್ನುಉಣಬಡಿಸಲಾಯಿತು. ಗಂಗೊಳ್ಳಿ ಪರಿಸರದ ಮೈಕಲ್ ಜಾಕ್ಸನ್ ಖ್ಯಾತಿಯ ವಿಷ್ಣು ಭಟ್  ಮೈದಾನದೊಳಗಿನ  ಆಟಗಾರರು ಎದುರಿಸುವ ಒತ್ತಡಗಳನ್ನು ತನ್ನ ವಿಶೇಷ ನೃತ್ಯದ ಮೂಲಕ ನಿವಾರಿಸಿ, ಆಟಗಾರರನ್ನು ಹುರಿದುಂಬಿಸಿ ಹಾಗೂ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಎಂ ನಾಗೇಶ್ ಪೈ,  ಸುದರ್ಶನ ಆಚಾರ್ಯ, ರಮೇಶ್ ಪೈ ಇವರುಗಳ ಮುಂದಾಳುತ್ವದಲ್ಲಿ ನಡೆದ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಆಟಗಾರರು, ಪ್ರೇಕ್ಷಕರು ಮತ್ತು ಎಲ್ಲಾ ಕೊಡುಗೆದಾರರಿಗೆ ಹರಿ ಓಂ ಗಂಗೊಳ್ಳಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದೆ.

Latest stories

LEAVE A REPLY

Please enter your comment!
Please enter your name here

14 + 6 =