ಬೆಂಗಳೂರಿನ ಸಿ.ಕೆ ಗ್ರೌಂಡ್ &ಕ್ರಿಕೆಟ್ ಅಕಾಡೆಮಿ,ತೋಟಗೆರೆ ಬಳಿ ನಡೆದ ಇಂಡಿಪೆಂಡೆನ್ಸ್ ಡೇ ಕಪ್ 20-20 ಪಂದ್ಯದಲ್ಲಿ Sidvin Wolfs ತಂಡದ ಪರವಾಗಿ ಆಡಿದ ಪ್ರಣಾಮ್ ಕೇವಲ 71 ಎಸೆತಗಳಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಸ್ಪೋಟಕ ಶತಕ ಸಿಡಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ Sidvin Wolfs ಪ್ರಣಾಮ್ ಕೋಟ ಇವರ ಶತಕದ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು.ಇದಕ್ಕುತ್ತರವಾಗಿ
Phoenix Star ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 100 ರನ್ ಗಳಿಸಲಷ್ಟೇ ಶಕ್ತವಾಯಿತು.
ಪ್ರಣಾಮ್ ಕೋಟ ಕೋಚ್ ವಿಜಯ್ ಆಳ್ವರ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್
ಅಕಾಡೆಮಿ (B.A.C.A)ಯಲ್ಲಿ ಪಳಗುತ್ತಿದ್ದು,ಈ ಅಕಾಡೆಮಿಯ 6 ಆಟಗಾರರು Sidvin Wolfs ತಂಡವನ್ನು ಪ್ರತಿನಿಧಿಸಿ ಅಚ್ಚರಿಯ ಪ್ರದರ್ಶನ ನೀಡಿದ್ದಾರೆ.ಪ್ರಣಾಮ್ ಕೋಟದ ಸೀತಾರಾಮ್ ಆಚಾರ್ ಮತ್ತು ಪ್ರೇಮಾ ದಂಪತಿಗಳ ಸುಪುತ್ರ.
ಪ್ರಣಾಮ್ 2 ಇನ್ನಿಂಗ್ಸ್ ನಲ್ಲಿ 136 ರನ್ ಗಳೊಂದಿಗೆ ಗರಿಷ್ಠ ರನ್ ಗಳಿಕೆಯ ಆಟಗಾರರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು,ಬೆಳ್ಳಿಪ್ಪಾಡಿ ಅಕಾಡೆಮಿ ಇನ್ನೋರ್ವ ವೇಗದ ಎಸೆತಗಾರ ಸುಶಾಂತ್ ಗರಿಷ್ಠ ವಿಕೆಟ್ ಗಳಿಕೆಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.ಇವರು ದಿನೇಶ್ ಮೆಂಡನ್ ಹಾಗೂ ಪ್ರೇಮಾ ದಂಪತಿಗಳ ಸುಪುತ್ರ.