ರಫೀಕ್ ಕೊಲ್ನಾಡ್,ಅನಿಶ್ ಕದಿಕೆ,ರಿಷಾನ್ ಸಾಗ್ ಈ ಮೂವರ ನೇತೃತ್ವದಲ್ಲಿ ಮೊದಲ ಬಾರಿಗೆ ಹಳೆಯಂಗಡಿ-ಮೂಲ್ಕಿ ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆ ಹಾಗೂ ಸೌಹಾರ್ದತೆಯ ಸದುದ್ದೇಶದಿಂದ ಮೂಲ್ಕಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ಡಿಸೆಂಬರ್ 13 ರವಿವಾರದಂದುಚಾಂಪಿಯನ್ಸ್ ಟ್ರೋಫಿ-2020 ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.

ಈ ಪಂದ್ಯಾಟದಲ್ಲಿ ಹಳೆಯಂಗಡಿ ಮತ್ತು ಮೂಲ್ಕಿ ಪರಿಸರದ ಆಟಗಾರರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.ವಿಜೇತ ತಂಡಗಳು ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ನಾಳೆ ಬೆಳಿಗ್ಗೆ 8.30 ಗೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು,ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.