ಕ್ರಿಕೆಟ್ಮೊಹಮ್ಮದ್ ಶಮಿ ಗೌರವಯುತ ವಿದಾಯಕ್ಕೆ ಅರ್ಹನೇ ಹೊರತು ಅವಮಾನಕ್ಕಲ್ಲ..!

ಮೊಹಮ್ಮದ್ ಶಮಿ ಗೌರವಯುತ ವಿದಾಯಕ್ಕೆ ಅರ್ಹನೇ ಹೊರತು ಅವಮಾನಕ್ಕಲ್ಲ..!

-

- Advertisment -spot_img

ಮೊಹಮ್ಮದ್ ಶಮಿ ಗೌರವಯುತ ವಿದಾಯಕ್ಕೆ ಅರ್ಹನೇ ಹೊರತು ಅವಮಾನಕ್ಕಲ್ಲ..!

ಗೌತಮ್ ಗಂಭೀರ್ ಬಗ್ಗೆ ಬರೆದಾಗಲೆಲ್ಲಾ ‘ನಿಮಗೆ ಗಂಭೀರ್ ಮೇಲೆ ಏಕಿಂಥಾ ದ್ವೇಷ’ ಎಂದು ಪ್ರಶ್ನಿಸಿದವರಿದ್ದಾರೆ. 

ಒಬ್ಬ ಆಟಗಾರನಾಗಿ ಗಂಭೀರ್ ಆಡಿದ ಕೆಲ ಇನ್ನಿಂಗ್ಸ್’ಗಳ ಬಗ್ಗೆ ಗೌರವವಿದೆ.. ಆದರೆ ಕೋಚ್ ಆಗಿ ಅಲ್ಲ.. 

ಒಬ್ಬ ಕೋಚ್ ಆಗಿ ಗೌತಮ್ ಗಂಭೀರ್ ಬಗ್ಗೆ ಗೌರವ ಹುಟ್ಟಲು ನನಗಂತೂ ಯಾವ ಕಾರಣಗಳೂ ಇಲ್ಲ. 

ಅವನು ಕಟ್ಟುವುದಕ್ಕಿಂತ ಕೆಡವಲು ಬಂದವನು.. 

ಅವನಿಗೆ ಕಟ್ಟುವುದಕ್ಕಿಂತ ಕೆಡವುವುರಲ್ಲೇ ಆಸಕ್ತಿ.. 

ತಂಡದ ಹಿತಕ್ಕಿಂತ ತನ್ನ ಅಹಂ ಮುಖ್ಯ ಎಂದುಕೊಂಡವನ ಬಗ್ಗೆ ಗೌರವ ಹುಟ್ಟಲು ಸಾಧ್ಯವೇ ಇಲ್ಲ. 

ಭಾರತ ತಂಡಕ್ಕೆ ಸರ್ವವನ್ನೂ ಸಮರ್ಪಿಸಿಕೊಂಡು ಆಡಿದ ದಿಗ್ಗಜರಿಗೆ ಗೌತಮ್ ಗಂಭೀರ್ ಅವಮಾನ ಮಾಡುತ್ತಲೇ ಬಂದಿದ್ದಾನೆ. ಅದಕ್ಕೆ ಹೊಸ ಸೇರ್ಪಡೆ ಭಾರತದ ಸರ್ವಶ್ರೇಷ್ಠ ವಿಶ್ವಕಪ್ ಬೌಲರ್ ಮೊಹಮ್ಮದ್ ಶಮಿ. 

ಮೊಹಮ್ಮದ್ ಶಮಿ ಯಾವುದೇ ತಂಡಕ್ಕಾದರೂ ಆಸ್ತಿಯಾಗಬಲ್ಲ ವೇಗದ ಬೌಲರ್.. ಆ ಸೀಮ್, ಆ ವೇಗ.. ಚೆಂಡನ್ನೂ ಎರಡೂ ಕಡೆ ಸ್ವಿಂಗ್ ಮಾಡುವ ವಿಶೇಷ ಕಲೆ.. ರಿವರ್ಸ್ ಸ್ವಿಂಗ್ ಕೌಶಲ್ಯ.. ಇದೆಲ್ಲಾ ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಅಂತಹ ಕಲೆಗಳನ್ನು ಕರಗತ ಮಾಡಿಕೊಂಡು ಭಾರತ ತಂಡದ ಯಶಸ್ಸಿಗೆ ಕಾರಣನಾಗಿದ್ದವನು ಮೊಹಮ್ಮದ್ ಶಮಿ.. 

ಭಾರತ ತಂಡಕ್ಕೆ ಅವನದ್ದು ಅದೆಂಥಾ ಬದ್ಧತೆಯೆಂದರೆ, 

2023ರ ವಿಶ್ವಕಪ್ ಟೂರ್ನಿಗಾಗಿ ಐಪಿಎಲ್ ಅವಕಾಶವನ್ನೇ ಬದಿಗಿಟ್ಟಿದ್ದ. 

ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ವೇಗದ ಬೌಲರ್’ಗಳ ಮಧ್ಯೆ ಮೊಹಮ್ಮದ್ ಶಮಿ ವಿಶೇಷವಾಗಿ ಕಾಣಿಸಲು ಕಾರಣ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಅವನ ವೀರಾವೇಶದ ಬೌಲಿಂಗ್. 50 ಓವರ್’ಗಳ ಮಾದರಿಯ ವಿಶ್ವಕಪ್’ಗಳಲ್ಲಿ ಅವನಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ ಪ್ರಚಂಡ ಮತ್ತೊಬ್ಬನಿಲ್ಲ.. ಉತ್ಪ್ರೇಕ್ಷೆಯ ಮಾತಲ್ಲ ಇದು. 

ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಸ್ಪೆಲ್’ಗಳನ್ನೊಮ್ಮೆ ನೋಡಿ.. 

-ವಿಶ್ವಕಪ್ 2015 

4/35, 2/30, 3/35, 3/41, 3/48, 2/37 & 0/68. 

-ವಿಶ್ವಕಪ್ 2019

4/40, 4/16, 5/69, 1/68 

-ವಿಶ್ವಕಪ್ 2023 

5/54, 4/22, 5/18, 2/18, 0/41, 7/47 & 1/47. 

-ಮ್ಯಾಚ್ – 18 | ವಿಕೆಟ್ಸ್ – 55 

ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 28 ಏಕದಿನ ವಿಶ್ವಕಪ್ ಪಂದ್ಯಗಳಿಂದ ಪಡೆದಿರುವ ವಿಕೆಟ್’ಗಳು 65. ಇಂತಹ ಸ್ಟಾರ್ಕ್’ನನ್ನು ಕ್ರಿಕೆಟ್ ಆಸ್ಟ್ರೇಲಿಯಾ ತಲೆ ಮೇಲೆ ಹೊತ್ತು ಮೆರೆಸುತ್ತದೆ. ನಮ್ಮಲ್ಲಿ ಮೊಹಮ್ಮದ್ ಶಮಿಯಂಥಾ ಮ್ಯಾಚ್ ವಿನ್ನರ್’ನನ್ನು ಎಡಗಾಲಿಂದ ಒದೆಯಲಾಗುತ್ತದೆ. 

2023ರ ಏಕದಿನ ವಿಶ್ವಕಪ್’ನಲ್ಲಿ ಏಳೇ ಏಳು ಪಂದ್ಯಗಳಲ್ಲಿ 24 ವಿಕೆಟ್ ಉಡಾಯಿಸಿದವನಿಗೆ ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಮಧ್ಯೆ ಏಕದಿನ ಕ್ರಿಕೆಟ್’ನಲ್ಲಿ ಸಿಕ್ಕ ಅವಕಾಶ ಕೇವಲ ಎರಡು ಪಂದ್ಯಗಳು.  

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 5 ಪಂದ್ಯಗಳಲ್ಲಿ 9 ವಿಕೆಟ್ಸ್.. ಭಾರತ ಚಾಂಪಿಯನ್’ಷಿಪ್ ಗೆಲ್ಲುವಲ್ಲಿ ಶಮಿ ವಹಿಸಿದ ಪಾತ್ರ ತುಂಬಾ ದೊಡ್ಡದು. ಆದರೆ ಅಲ್ಲಿಂದ ಮುಂದೆ ಒಂದೇ ಒಂದು ಏಕದಿನ ಪಂದ್ಯವಾಡುವ ಅವಕಾಶ ಶಮಿಗೆ ಸಿಕ್ಕಿಲ್ಲ ಎಂಬುದು ಕಟು ವಾಸ್ತವ. 

ಗಾಯದ ಕಾರಣ ಭಾರತ ತಂಡದಿಂದ ಹೊರ ಬಿದ್ದಿದ್ದ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಂಡು 

ಮತ್ತೆ ಭಾರತ ತಂಡದ ಪರ ಆಡಲು ದೇಶೀಯ ಕ್ರಿಕೆಟ್ ಅಖಾಡಕ್ಕಿಳಿದ.. ಅಲ್ಲೂ ತನ್ನ ತಾಕತ್ತು ತೋರಿಸಿದ್ದ.. 

ಮೊಹಮ್ಮದ್ ಶಮಿ@ದೇಶೀಯ ಕ್ರಿಕೆಟ್ 2025-26

-ರಣಜಿ ಟ್ರೋಫಿ – 20 ವಿಕೆಟ್ಸ್ ।145.2 ಓವರ್ | 4 ಪಂದ್ಯ

-ಮುಷ್ತಾಕ್ ಅಲಿ ಟಿ20 – 16 ವಿಕೆಟ್ಸ್ | 26.5 ಓವರ್ । 7 ಪಂದ್ಯ

-ವಿಜಯ್ ಹಜಾರೆ ಟ್ರೋಫಿ – 11 ವಿಕೆಟ್ಸ್ | 43.4 Over | 5 ಪಂದ್ಯ

-16 ಪಂದ್ಯ’ಗಳಲ್ಲಿ 47 ವಿಕೆಟ್’ಗಳು.. 

ಮೊಹಮ್ಮದ್ ಶಮಿ ಫಿಟ್ ಇದ್ದರೆ ಅವನನ್ನು ತಂಡಕ್ಕೆ ಆಯ್ಕೆ ಮಾಡುತ್ತೇವೆ ಎಂದಿದ್ದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್.. ಹಾಗಾದರೆ ಈಗ ಮತ್ತೆ ಶಮಿಯನ್ನು ಕಡೆಗಣಿಸಿರುವುದು ಫಿಟ್ ಇಲ್ಲ ಎಂಬ ಕಾರಣಕ್ಕಾ..? ಫಿಟ್ ಇಲ್ಲದೇ ಇದ್ದಿದ್ದರೆ ದೇಶೀಯ ಕ್ರಿಕೆಟ್’ನಲ್ಲಿ 200ಕ್ಕೂ ಹೆಚ್ಚು ಓವರ್ ಬೌಲಿಂಗ್ ಮಾಡಲು ಹೇಗೆ ಸಾಧ್ಯವಾಗುತ್ತಿತ್ತು..? 

ಮೊಹಮ್ಮದ್ ಶಮಿಯನ್ನು ನಿರಂತರವಾಗಿ ಕಡೆಗಣಿಸುತ್ತಿರುವುದರ ಹಿಂದಿನ ಮರ್ಮ ಇಷ್ಟೇ.. ಅವನೇನಾದರೂ ಮರಳಿ ಬಂದರೆ ದೆಹಲಿಯ ಹರ್ಷಿತ್ ರಾಣನ ಸ್ಥಾನಕ್ಕೆ ಕುತ್ತು ಬರುತ್ತದೆ. ಈ ಹರ್ಷಿತ್ ರಾಣ ಭಾರತ ತಂಡದ ಕೋಚ್ ಗೌತಮ್ ಗಂಭೀರನ ನೀಲಿಗಣ್ಣಿನ ಹುಡುಗ. ಅವನಿಗಾಗಿ ಶಮಿಯನ್ನು ಬಲಿ ಹಾಕಲಾಗಿದೆ ಅಷ್ಟೇ.. 

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಗೌತಮ್ ಗಂಭೀರ್ ಇದೇ ರೀತಿ ಬಲಿ ಹಾಕಲು ನೋಡಿದ. ಟೆಸ್ಟ್ ಕ್ರಿಕೆಟ್’ನಲ್ಲಿ ಯಶಸ್ವಿಯೂ ಆದ.. ಆದರೆ ಅವರಿಬ್ಬರೂ ಪೆಟ್ಟು ತಿಂದ ಹುಲಿಗಳಂತೆ ತಿರುಗಿ ಬಿದ್ದರು. ಈಗ ಏಕದಿನ ತಂಡದಿಂದ ಅವರಾಗಿ ಹೊರ ನಡೆಯುವವರೆಗೆ ಇಬ್ಬರನ್ನೂ ಮುಟ್ಟುವುದು ಅಸಾಧ್ಯ.. 

ಆದರೆ ಮೊಹಮ್ಮದ್ ಶಮಿ..? ಇವನಿಗೆ stardomನ ಬಲವಿಲ್ಲ. ಈ ದೇಶದಲ್ಲಿ ಬೌಲರ್’ಗಳ ದೊಡ್ಡ ದೌರ್ಬಲ್ಯವಿದು. 

ವಯಸ್ಸಿನ ಕಾರಣಕ್ಕೆ ಮೊಹಮ್ಮದ್ ಶಮಿಯನ್ನು ಭಾರತ ತಂಡದಿಂದ ಹೊರಗಿಟ್ಟಿರುವುದು ಸತ್ಯವಾದರೆ, ಕನಿಷ್ಠ ವಿದಾಯದ ಪಂದ್ಯಕ್ಕಾದರೂ ಅವಕಾಶ ಮಾಡಿಕೊಡಬೇಕು. 

– ವಿಶ್ವಕಪ್ 2015: 17 ವಿಕೆಟ್ಸ್

– ವಿಶ್ವಕಪ್ 2019: 14 ವಿಕೆಟ್ಸ್ 

– ವಿಶ್ವಕಪ್ 2023: 24 ವಿಕೆಟ್ಸ್

– 2023ರ ವಿಶ್ವಕಪ್ ಸೆಮಿಫೈನಲ್’ನಲ್ಲಿ 7/57

– ವಿಶ್ವಕಪ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ 

– ಚಾಂಪಿಯನ್ಸ್ ಟ್ರೋಫಿ ವಿನ್ನರ್

– 229 ಟೆಸ್ಟ್ ವಿಕೆಟ್ಸ್, 206 ಏಕದಿನ ವಿಕೆಟ್ಸ್

-ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 462 ವಿಕೆಟ್’ಗಳು

ಸಂಪೂರ್ಣ ಬದ್ಧತೆಯೊಂದಿಗೆ ತಂಡಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡು ಆಡಿದವನು ಗೌರವಕ್ಕೆ ಅರ್ಹನೇ ಹೊರತು ಅವಮಾನಕ್ಕಲ್ಲ.. 

 

-ಸುದರ್ಶನ್

LEAVE A REPLY

Please enter your comment!
Please enter your name here

fifteen + thirteen =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you