ಇತ್ತೀಚೆಗಷ್ಟೇ ಜಿಂಬಾಬ್ವೆ ತಂಡದ ಆಟಗಾರ ರ‍್ಯಾನ್ ಬರ್ಲ್ ನಮ್ಮ ತಂಡಕ್ಕೆ ಕ್ರಿಕೆಟ್ ಆಡಲು ಸರಿಯಾದ ಶೂ ಇಲ್ಲ ಎಂದು. ಪ್ರತಿ ಪಂದ್ಯದ ನಂತರ ನಾವುಗಳು ಕಿತ್ತುಹೋದ ಶೂಗಳನ್ನು ಧರಿಸಿ ಕ್ರಿಕೆಟ್ ಆಡುತ್ತಿದ್ದೇವೆ, ಪ್ರತಿ ಸರಣಿ ಮುಗಿದ ನಂತರ ಕಿತ್ತುಹೋದ ಶೂಗಳನ್ನು ನಾವೇ ಸರಿಮಾಡುಕೊಳ್ಳಬೇಕಿದೆ. ಹಾಗೂ ಹೊಲಿದುಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡುವುದರ ಮೂಲಕ ಪ್ರಾಯೋಜಕತ್ವಕ್ಕಾಗಿ ಮನವಿ ಮಾಡಿದ್ದರು.
ರ‍್ಯಾನ್ ಬರ್ಲ್ ಮಾಡಿದ ಮನವಿಗೆ 24 ಗಂಟೆಯೊಳಗೆ ಸ್ಪಂದಿಸಿದ ಪ್ರತಿಷ್ಠಿತ ಪೂಮಾ ಸಂಸ್ಥೆ ಜಿಂಬಾಬ್ವೆ ಆಟಗಾರರಿಗೆ ಉಚಿತ ಶೂಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆಯಿತು. ಈ ಮೂಲಕ ಶೂಗಳಿಲ್ಲದೆ ಕಷ್ಟಪಡುತ್ತಿದ್ದ ಜಿಂಬಾಬ್ವೆ ತಂಡಕ್ಕೆ ಹೊಚ್ಚಹೊಸ ಶೂಗಳು ಕೈ ಸೇರಿತ್ತು.
ಪೂಮಾ ಸಂಸ್ಥೆ ಮುಂದೆ ಬಂದು ಸ್ಪಂದಿಸಿದಕ್ಕೆ ಜಿಂಬಾಬ್ವೆ ತಂಡದ ಆಟಗಾರರು ಸಂತೋಷವನ್ನು ವ್ಯಕ್ತಪಡಿಸಿದ್ದರು, ಹಾಗೂ ಟ್ವೀಟ್ ಮೂಲಕ ಮನವಿ ಮಾಡಿದ್ದ ರ‍್ಯಾನ್ ಬರ್ಲ್ ಮನವಿಯಂತೆ ಬೇಡಿಕೆ ಈಡೇರಿತ್ತು.
ಆದರೆ ಇದೀಗ ಈ ಎಲ್ಲಾ ಬೆಳವಣಿಗೆಯ ನಂತರ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರ‍್ಯಾನ್ ಬರ್ಲ್‌ನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆಯಂತೆ. ರ‍್ಯಾನ್ ಬರ್ಲ್ ಶೂ ಪ್ರಾಯೋಜಕತ್ವ ಕೇಳಿ ಮಾಡಿದ್ದ ಟ್ವೀಟ್ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್‌ಗೆ ಮಾಡಿರುವ ಅವಮಾನ ಎಂದು ಬೋರ್ಡ್ ನ ಸದಸ್ಯರು ಅಂದುಕೊಂಡಿದ್ದಾರೆಂದು ಹೇಳಲಾಗುತ್ತಿದ್ದು ಆತನ ವಿರುದ್ಧ ಕಠಿಣ ಕ್ರಮಕ್ಕೆ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ರ‍್ಯಾನ್ ಬರ್ಲ್ ತಂಡದಲ್ಲಿ ಇರುತ್ತಾರೊ ಇಲ್ಲವೊ ಎನ್ನುವ ಅನುಮಾನವಿದೆ. ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದ್ದು ಟ್ವೀಟ್ ಮೂಲಕ ಕಷ್ಟವನ್ನು ಹಂಚಿಕೊಂಡು ಸಹಾಯ ಪಡೆದಿದ್ದ ರ‍್ಯಾನ್ ಬರ್ಲ್ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನುವುದು ಮಾತ್ರ ದುರಂತವೆ ಹೌದು….!!!