ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಪಂದ್ಯವನ್ನು ಕಳೆದುಕೊಂಡಾಗ, ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ನಾಯಕ ಕೆಎಲ್ ರಾಹುಲ್ ಅವರನ್ನು ಮೈದಾನದಲ್ಲಿ ಸಾರ್ವಜನಿಕವಾಗಿ ನಿಂದಿಸಿದ್ದರು. ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಯಿತು.
2025 ರ ಐಪಿಎಲ್ ಸರಣಿಯಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ವರದಿಗಳು ಬಂದವು. ಆದರೆ, 2025ರ ಐಪಿಎಲ್ ಸರಣಿಗೆ ಕೆಎಲ್ ರಾಹುಲ್ ಲಕ್ನೋ ತಂಡಕ್ಕೆ ಸೇರ್ಪಡೆಯಾಗುವುದು ಖಚಿತವಾಗಿದೆ. ಆದರೆ, ಅವರು ನಾಯಕರಾಗುವುದಿಲ್ಲ. ಕೇವಲ ಆಟಗಾರನಾಗಲು ಬಯಸುವುದಾಗಿ ರಾಹುಲ್ ಸ್ವಯಂಪ್ರೇರಿತರಾಗಿದ್ದಾರೆ ಎಂಬ ವರದಿಗಳಿವೆ.
ಈ ಸಂಬಂಧ ಲಕ್ನೋ ಸೂಪರ್‌ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಕೆಎಲ್ ರಾಹುಲ್ ಖುದ್ದು ಭೇಟಿ ಮಾಡಿದ್ದಾರೆ. ನಾಯಕ ಸ್ಥಾನದಿಂದ ತಾನು ಕೆಳಗಿಳಿಯಲಿದ್ದೇನೆ ಎಂದ ಅವರು, ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಲು ಬಯಸುವುದಾಗಿ ಹೇಳಿದ್ದಾರೆ. ಅದನ್ನು ಸಂಜೀವ್ ಗೋಯೆಂಕಾ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕೆಎಲ್ ತಮ್ಮ ಆಟವನ್ನು ಸುಧಾರಿಸಲು ನಾಯಕತ್ವದಿಂದ ದೂರ ಸರಿಯುತ್ತಿದ್ದಾರೆ ಎಂದು ತೋರುತ್ತದೆ.
ನಾಯಕತ್ವ ತೊರೆದು ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಕಡೆ ಗಮನ ಹರಿಸಲು ರಾಹುಲ್ ಬಯಸಿರುವಂತಿದೆ.ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಯಾರನ್ನು ನೇಮಕ ಮಾಡಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಅನುಭವಿ ಟಿ20 ಕ್ರಿಕೆಟಿಗರಾದ ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ಲಖನೌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಒಬ್ಬರನ್ನು ತಂಡದ ನಾಯಕರನ್ನಾಗಿ ನೇಮಿಸುವ ಸಾಧ್ಯತೆ ಇದೆಯಂತೆ.
ರಾಹುಲ್ ಲಕ್ನೋ ನಾಯಕತ್ವದಿಂದ ಕೆಳಗಿಳಿದು RCB ನಾಯಕತ್ವವನ್ನು ವಹಿಸಿಕೊಳ್ಳಬಹುದು ಎಂಬ ವರದಿಗಳು ಬಂದಿದ್ದವು. ರಾಹುಲ್ ಲಕ್ನೋದಲ್ಲಿ ಉಳಿದುಕೊಂಡಿರುವುದರಿಂದ RCB ಲೆಕ್ಕಾಚಾರಗಳು ತಪ್ಪಾಗಿವೆ. ಫಾಫ್ ಡುಪ್ಲೆಸಿಸ್ ಪ್ರಸ್ತುತ RCB ನಾಯಕರಾಗಿದ್ದಾರೆ. ಮುಂದಿನ ಋತುವಿನಲ್ಲಿ RCB ಡುಪ್ಲೆಸಿಸ್ ಅನ್ನು ಉಳಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಆರ್‌ಸಿಬಿಗೆ ಹೊಸ ನಾಯಕನ ಅಗತ್ಯವಿದೆ.
ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಯಾರು ಎಂಬುದು ಆರ್‌ಸಿಬಿಗೆ ದೊಡ್ಡ ಪ್ರಶ್ನೆಯಾಗಿದೆ. ರಾಹುಲ್ ಈ ಹಿಂದೆ ಆರ್‌ಸಿಬಿ ಪರ ಆಡಿದ ಆಟಗಾರ. ಕರ್ನಾಟಕದವರೇ ಆದ ರಾಹುಲ್ ಆರ್‌ಸಿಬಿಗೆ ಬಂದರೆ ಅಭಿಮಾನಿಗಳ ಬೆಂಬಲ ಸಿಗುವುದು ಖಚಿತ. ಆದರೆ ರಾಹುಲ್ ಲಕ್ನೋದಲ್ಲಿ ಉಳಿದುಕೊಂಡಿರುವುದರಿಂದ ಆರ್‌ಸಿಬಿ ಉತ್ತಮ ನಾಯಕನನ್ನು ಹುಡುಕಬೇಕಾಗಿದೆ. ಏನೇ ಆಗಲಿ ರಾಹುಲ್ ಹೀರೋ ಮಾಡುವ ಆರ್ ಸಿಬಿ ಪ್ಲಾನ್ ಗಳು ಬಿದ್ದು ಹೋಗಿವೆ ಎಂದೇ ಹೇಳಬಹುದು.