ಕಳೆದ ರವಿವಾರ ಕೇರಳದಲ್ಲಿ ನಡೆದ 19 ನೇ ಆಲ್ ಇಂಡಿಯಾ ಹಗಲು ರಾತ್ರಿಯ ಒಳಾಂಗಣ ಪಂದ್ಯಾಕೂಟ ಆಯೋಜಿಸಲಾಗಿತ್ತು.ಈ ಪಂದ್ಯಾಕೂಟದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಒಟ್ಟು 46 ತಂಡಗಳು ಭಾಗವಹಿಸಿದ್ದವು.
ಮುಂಬಯಿ ರಣಜಿ ಆಟಗಾರರಾದ ಅಂಕುರ್ ಸಿಂಗ್,ಟೆನ್ನಿಸ್ ಬಾಲ್ ನ ಪ್ರಸಿದ್ಧ ಆಟಗಾರ ಕೃಷ್ಣ ಸಾತ್ಪುತೆ,ವಿಜಯ್ ಪಾವ್ಲೆ ಇನ್ನಿತರ ಆಟಗಾರರು, ಕರ್ನಾಟಕ ರಾಜ್ಯದ ಪ್ರಸಿಧ್ಧ ತಂಡಗಳಿಂದ ಶ್ರೇಷ್ಠ ಆಲ್ ರೌಂಡರ್ ಗಳಾದ ನ್ಯಾಶ್ ಪುರುಷಿ,ಪ್ರಖ್ಯಾತ್,ಮೈಟಿಯ ಈಲು,ಸ್ಯಾಂಡಿ,ಜೈ ಕರ್ನಾಟಕದ ಮಾರ್ಕ್ ಮಹೇಶ್ ಹಾಗೂ ಎಸ್.ಝಡ್.ಸಿ.ಸಿ ಯಿಂದ ಅರುಣ್ ಆರ್ಯನ್ ಪ್ರಸಿದ್ಧ ತಂಡಗಳನ್ನು ಪ್ರತಿನಿಧಿಸಿದ್ದರು.
ಫೈನಲ್ ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಟ್ಲಾಸ್ ಯು.ಟಿ.ಸಿ ತಂಡ 7 ಓವರ್ ಗಳಲ್ಲಿ 78 ರನ್ ನ ಬೃಹತ್ ಮೊತ್ತವನ್ನು ಪೇರಿಸಿತ್ತು.ಪ್ರತಿಯಾಗಿ ಬಲಿಷ್ಠ ಬ್ಯಾಟಿಂಗ್ ಪಡೆಯ ಕೆ.ಪಿ.ಎ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು 4 ಓವರ್ ಗಳಲ್ಲಿ ಗುರಿ ತಲುಪಿತ್ತು.
ವಿಜಯಿ ತಂಡ 4 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ತಂಡ 2 ಲಕ್ಷ ಹಾಗೂ ಆಕರ್ಷಕ ಟ್ರೋಫಿ ಪಡೆಯಿತು.
ಫೈನಲ್ ಪಂದ್ಯದಲ್ಲಿ ಎದುರಾಳಿಗಳ 5 ವಿಕೆಟ್ ಉರುಳಿಸಿದ ಕೆ.ಪಿ.ಎ ತಂಡದ ಜಿತಿನ್ ಗೆ ಪಂದ್ಯಶ್ರೇಷ್ಟ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿ ಒಲಿದರೆ,ಬೆಸ್ಟ್ ಬ್ಯಾಟ್ಸ್‌ಮನ್ ಕೃಷ್ಣ ಪಾಲಾದರೆ,ಸರಣಿ ಶ್ರೇಷ್ಠ ಪ್ರಶಸ್ತಿಗೆ ಅರ್ಹವಾಗಿ ಕೆ.ಪಿ.ಎ ತಂಡದ ಮೊಹಮ್ಮದ್ ಆಯ್ಕೆಯಾದರು.
ಇಂಡೋರ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ನ್ಯಾಶ್ ಪುರುಷಿ 6 ಬಾರಿ ಭಾಗವಹಿಸಿದ್ದು,ಅದೇ ತಂಡದ ಪ್ರಖ್ಯಾತ್ 4 ನೇ ಬಾರಿ ಭಾಗವಹಿಸಿದ್ದು ಸತತ ಗಮನಾರ್ಹ ನಿರ್ವಹಣೆ ನೀಡಿರುತ್ತಾರೆ.
– ಆರ್.ಕೆ.ಆಚಾರ್ಯ ಕೋಟ